ಪುಟ:Kannada-Saahitya.pdf/೧೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಗೆಗಿ ಕನ್ನಡ ಸಾಹಿತ್ಯ ಚಿತ್ರಗಳು ನನ್ನ ಮಾತು ಕೇಳಿ ಆ ವೃದ್ಧರು ಕವಡಿಯಲ್ಲಿ ಹೊರಳಿ ಬಿದ್ದರು, ನಡುಗುವ ತಲೆ ಸುತ್ರಶೋಕದಿಂದ ಮತ್ತೂ ನಡುಗತೊಡಗಿತು, ಬತ್ತಿದ ಕಣ್ಣುಗಳಿಂದ ಕಂಬನಿ ಉರುಳತೊಡಗಿತು, “ಅಯ್ಯೋ ! ವಿಧಿಯು ನಮಗೆ ಈ ರೀತಿಯ ಪುತ್ರಶೋಕವನ್ನು ಕರುಣಿಸಿದನೆ! ಹು ಮಗನೆ ! ನಮ್ಮನ್ನು ಪರಕ್ಕೆ ಸಲ್ಲಿಸದೆ, ನಮಗೆ ಸಮ್ಮತಿ ಕಾಣಿಸದೆ ನೀನೆ ಹೀಗೆ ಹೋಗಿ ಬಿಡುವುದೆ ? ಹಾ, ಕಂದಾ ! ” ಎಂದು ಗೋಳಾಡಿದರು. ಬಳಿಕ ನನ್ನನ್ನು ಕಳು, “ಎಲೆ ಮಹಾಪುರುಷ, ಇದು ನಮ್ಮ ಪೂರ್ವಕರ್ಮಧ ಫಲ, ನಿನೇನು ಮಾಡೀಯೆ ? ನಮ್ಮ ಚೈತನ್ಯವದುಗಿ ಹೋಗುವ ಮೊದಲೆ ನನ್ನನ್ನು ನಿನ್ನಿ: ದಳಿದ ಶಾಂಡವನ ಬಳಿಗೆ ಕರೆದುಕೊಂಡು ಹೋಗು, ಮಗನಲ್ಲಿ ನಮಗೆ ಮಾತುಂಟು. ನಮ್ಮನ್ನು ಮಗನ ಬಳಿಗೈದಿಸುವುದು ನಿನ್ನ ಕಾರ್ಯಕ್ಕೆ ಕಳಸ ವಿಟ್ಟಂತೆ ” ಎಂದು ನನಗೆ ಕೈ ಮುಗಿದು ಬೇಡಿದರು. ಕಾವಡಿಯನ್ನು ಹೊತ್ತುಕೊಂಡು ನಡೆದು ನದಿಯೊನ ತಂಡವನ ಬಳಿಯಲ್ಲಿ ಇಬ್ಬರ ಇಳಿಸಿದೆನು. ಚಲಿಸಲಾರದ ಆ ನದಿಯರು ಮಗನ ಮೈಯನ್ನು ತಡವರಿಸಿ ತಡವರಿಸಿ ನೋಡಿದರು. ಇರಿದ ಒಂಬಿನ ಗಾಯವನ್ನು ತಡವರಿಸಿ ಅಳಲನ್ನು ತಡೆಯಲಾರದೆ ಮತ್ತೆ ಗೋಳಾಡಿದರು. 'ಕಂಬು, ಕೊಟ್ಟ ಮಾತನ್ನು ನಡಸಕ್ಕೆ ಬೇಸತ್ತು ನಮ್ಮನ್ನು ಬಿಸುಟ:ಹೊದೆಯಾ ನಮಗಿನ್ನೇನು ಗತಿ ? ಯಾವ ದಾರಿ ? ಹೇಳು ಕಂದಾ' ಎಂದು ಹಲುಬಿದರು. ಅಳಿದ ನಿಮ್ಮ ಮಗನ ಹಾಗೆಯೇ ನಿಮ್ಮನ್ನು ನಾನು ಕಾಪಾಡುತ್ತೇನೆ. ನನ್ನ ಮಾತು ನಂಬಿ ” ಎಂದು ಪ್ರಾರ್ಥಿಸಿಕೊಂಡೆನು. ನನ್ನ ಮಾತು ಕೇಳಿ ಅವರಿಗೆ ಅಳಲುಬ್ಬಿತು. ಮಗನನ್ನ ಗಲಿ ಜೀವ ಹಿಡಿದಿರಲೊಲ್ಲೆನೆಂದರು. (( ನಿನಗೂ ಹೀಗೆಯೇ ಸುತ ಏಯೋಗದಿಂದ ಅಳೆವಾಗಲಿ ” ಎಂದು ಶಪಿಸಿ ಇಬ್ಬರೂ ಪ್ರಾಣಬಿಟ್ಟರು. ಬಳಿಕ ಅವರಿಗೆ ಸಂಸ್ಕಾರದಿಂದ ಉತ್ತರ ಕ್ರಿಯೆ ಮಾಡಿ ಊರಿಗೆ ಬಂದೆನು, -ಹೀಗೆಂದು ಕಥೆ ಹೇಳಹೇಳುತ್ತಲೆ ದಶರಥ ಮಹಾರಾಜನು ಬಹಿ ರಂಗ ಭಾವಗಳನ್ನೆಲ್ಲ ಮರೆತನು, ಸಚ್ಚಿದಾನಂದ ಸ್ವರೂಪವಾದ ಆತ್ಮ ತತ್ರದಲ್ಲಿ ಐಕ್ಯಭಾವನೆಯನ್ನು ಪಡೆದು ದೇಹವನ್ನು ತೊರೆದ ನು.