ಪುಟ:Kannada-Saahitya.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನತ ಸಾಹಿತ್ಯ ಚಿತ್ರಗಳು ಬಿಸಿಯಾಗಿ ಬಿಟ್ಟಿದೆಯೆ ? ಮಾಸತಿಳಿಯಿತೆ ? ಏಕೆ ಕುಡಿಯುವುದಿಲ್ಲ ಹೇಳು ಎಂದಳು. ಉತ್ತರವಿಲ್ಲದಿರಲು ಮತ್ತೆ, “ ನಾನೇನಾದರೂ ಆಸೆಪಟ್ಟು ನೋಡಿದೆನೆ ? ಕೆನೆಯನ್ನು ಬೇರೆ ತೆಗೆದಿರಿಸಿ ತಂದೆನೆ ? ಮನೆಯಲ್ಲಿ ಹೊತ್ತು ಕಳೆದು ತಡ ಮಾಡಿದೆನೆ ? ಮತ್ತೇನಾದರೂ ನೆನೆದೆನೆ ? ಏಕೆ ನೀನು ಮಾತಾಡು ವುದಿಲ್ಲ, ಪುರಾ ” ಎಂದು ಕೇಳಿದಳು. “ ಆರಿಹೊಗಿಬಿಟ್ಟರೆ ಸವಿಯಾಗಿರು ಇದೆಯೆ ? ಮನಸ್ಸು ಮಾಡಿ ಬೇಗ ಕುಡಿದು ಬಿಡಯ್ಯ” ಎಂದು ಬೇಡಿದಳು. ಆ ನಿನಗೆ ಏನು ಬೇಕು, ಹೇಳು, ಈಗಲೆ ಹೋಗಿ ತಂದು ಕೊಂಡು ಇನೆಹೊಸ ಸಕ್ಕರೆ, ಹೊಸ ಜೇನು, ನರನಯ್ಯ, ಬಾಳೆಯ ಹಣ್ಣು, ನಾಲಿಗೆ ಬಯಸಿದ್ದು ಏನಿದ್ದರೂ ಹೇಳು; ತಂದುಕೊಡುತ್ತೇನೆ, ಹುರಿಗಡುಬು, ತರಗು, ಚಕ್ಕುಲಿ, ಕರಂಜಿಕಾಯಿ, ಅತಿರಸ ಚಿಗುಳಿ, ಲಡ್ಡುಗೆ, ಸಕ್ಕರೆ ಫೇಣಿ-ಇವೆಲ್ಲ ಇವೆ ನಮ್ಮ ಮನೆಯಲ್ಲಿ. ನೀನು ಬಯಸಿದರೆ ಹೋಗಿ ಈಗಲೇ ತರುತ್ತೇನೆ. ಹಾಲೊಡನೆ ಆರೋಗಿಸಬೇಕೆಂದರೆ ಮನೆಗೆ ಹೋಗಿ ಓಗರ ತರುತ್ತೇನೆ. " ಇವಳು ಹಸುಳೆ ; ಸುಳ್ಳಾಡುತ್ತಾಳೆ' ಎನ್ನಬೇಡ, ನನ್ನ ಗುಣವನ್ನು ಪರೀಕ್ಷೆ ಮಾಡಿ ನೋಡು ” ಎಂದು ಕೇಳಿಕೊಂಡಳು. ಆಗಲೂ ಶಿವ ಸುಮ್ಮನಿರಲು, “ ಅಯ್ಯಾ, ಕೇಳು. ನನ್ನ ಮಾತನ್ನು ಉಪೇಕ್ಷೆ ಮಾಡದೆ ನೀನು ಹಾಲು ಕುಡಿದರೆ ನಿನ್ನನ್ನು ವೀರಭದ್ರನ ತೇರಿಗೆ ಕರೆದುಕೊಂಡು ಹೋಗುತ್ತೇನೆ; ನಮ್ಮ ಗುರುವಿನ ಪರ್ವಕ್ಕೆ ಕರೆದುಕೊಂಡು ಹೋಗುತ್ತೇನೆ. ನಮ್ಮ ತಂದೆ ನಾಳೆ ನನಗೆ ತಂದುಕೊಡುವ ರತ್ನಾಭರಣ ಗಳನ್ನೆಲ್ಲ ನಿನಗೇ ಕೊಟ್ಟು ಬಿಡುತ್ತೇನೆ, ಚಂದ್ರಶೇಖರಾ ” ಎಂದು ಅಡಿಗೆರಗಿ ಮರುಗಿ ಹಲವು ಬಗೆಯಲ್ಲಿ ಒಡಂಬಡಿಸಿದಳು. ಆದರೂ ಶಿವ ಪುಟ ಮಿಡುಕದೆ ಸುಮ್ಮನಿದ್ದನು. ಕೊಡಗೂಸು ನೊಂದು ತಲ್ಲಣಿಸಿದಳು, “ಮಹೇಶ್ವರನು ನುಡಿಯು ವುದಿಲ್ಲ; ಹಾಲು ಕುಡಿಯುವುದಿಲ್ಲ. ಅಯ್ಯೋ ! ಏನು ಮಾಡಲಿ ?” ಎಂದು ಅತ್ತತ್ತು ಬಾಯಿಬಿಟ್ಟಳು ; ಸುರನೆ ಸುಯ್ದಳು ; ಬೆಪ್ಪಾಗಿ ನಿಂತಳು ; ಬೆಚ್ಚಿ