ಪುಟ:Kannada-Saahitya.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಣ ಕೋಳೂರು ಕೊಡಗೂಸು ಬೆದರಿ ಬಿದ್ದಳು ; ಎದ್ದು ದುಃಖದಿಂದ ದಿಕ್ಕು ತೋರದೆ ನಿಂತಳು. ಹೀಗೆ ಕೊಟಪಟ್ಟು ಸಾಕಾಗಿ ಕಡೆಗೆ ಅತಿ ನಿಷಾದದಿಂದ, ಹಾಲು ಕುಡಿಯದ ನಿನಗೆ ನನ್ನ ಪ್ರಾಣವನ್ನೆ ಒಪ್ಪಿಸುತ್ತೇನೆ” ಎಂದು ನಿಶ್ಚಯಿಸಿ ಮುಂದಿದ್ದ ಕಲ್ಲು ಕಂಬಕ್ಕೆ ತಲೆಯನ್ನೊಡ್ಡಿ ತಟ್ಟನೆ ಹಾಯ್ದ ಳು,

  • ಮಗಳಿಗೆ ನೋವಾಗುವುದಲ್ಲ” ಎಂದು ಚಂದ್ರಶೇಖರನು ಪ್ರತ್ಯಕ್ಷ ವಾಗಿ ಬಂದು ಅವಳನ್ನು ಕೈಯಿಂದ ಎತ್ತಿಕೊಂಡನು. ಬಳಿಕ ಆ ಭಕ್ತ ವತ್ಸಲನು ಅವಳು ತಂದ ಅಕ್ಷೆವಾಲನ್ನು ಸಂತೋಷದಿಂದ ಕುಡಿದನು,

ಆಗ ಕೊಡಗೂಸಿನ ಮುದ್ದು ಮುಖದಲ್ಲಿ ಎಳನಗೆಯುಕ್ಕಿತು, ನಲಸಿ ನಿಂದ ಲಿಂಗವನ್ನು ನೋಡಿದಾಗ ಅವಳ ಕಣ್ಣ ಬೆಳಕಿನಿಂದ ಲಿಂಗಕ್ಕೆ ಅಮ್ಮ ಶಾಭಿಷೇಕ ಮಾಡಿದಂತಾಯಿತು. ಅವಳು ಅನುರಾಗ ತುಂಬಿದ ವಿನೋದ ದಿಂದ, " ನಾನು ಹಸುಳೆಯೆಂದು ಪಾಲು ಕುಡಿಯದೆ ನನಗೆ ಸಂಕಟವುಂಟು ಮಾಡಿ ಕಾಡಿದೆಯಲ್ಲವೆ ? ” ಎನ್ನಲು ನಾಗಭೂಷಣನು ನಲಿದು ನಕ್ಕನು.

  • ಅಪ್ಪ ಬರಲಿ. ಇದನ್ನೆಲ್ಲ ಹೇಳುತ್ತೇನೆ, ಅಯ್ಯಾ, ಮರೆಯಬೇಡ. ಆಮೇಲೆ ನನಗೂ ನಿನಗೂ ಸಂವಾದವುಂಟು ” ಎಂದು ನುಡಿದು ಅಡ್ಡ ಬಿದ್ದು ನಗುನಗುತ್ತ ಕೊಡಗೂಸು ಮನೆಗೆ ಬಂದಳು, ಮಹೇಶ್ವರನು, “ ಬಾಲೆಯ ಮೃದು ಮಡಿ ಬಟ್ಟಲ ಹಾಲಿಗಿಂತ ಕಿವಿಗಿನಿದಾಗಿತ್ತು. ಅದರಿಂದ ಮೊದಲು ಹಾಲು ಕುಡಿಯದೆ ಅವಳ ಮುದ್ದು ಮಾತುಗಳನ್ನು ಕೇಳಿ ಆನಂದಿಸುತ್ತಿದ್ದೆ” ಎಂದು ಮೆಗೆ ಹೇಳಿದನು.

ಆಮೇಲೆ ಆ ಬಾಲೆ ದಿನ ದಿನವೂ ಭಕ್ತಿಯಿಂದ ಹಾಲು ತಂದು ಶಿವನಿಗೆರೆದು ಕುಡಿಸಿ ಮನೆಗೆ ಹೋಗುತ್ತಿದ್ದಳು. ಕೆಲವು ದಿನ ಕಳೆಯಿತು. ಒಂದು ದಿನ ಕೊಡಗೂಸು ಶಿವನಿಗೆ ಹಾಲೆರೆದು ಮನೆಗೆ ಬರುತ್ತಿದ್ದಳು. ಬೇರೂರಿಗೆ ಹೋಗಿದ್ದ ಶಿವದೇವನೂ ಅಂದು ಊರಿಗೆ ಹಿಂದಿರುಗಿ ಅದೇ ದಾರಿಯಲ್ಲಿ ಬರುತ್ತಿದ್ದವನು ಮಗಳ ಹತ್ತಿಕ ಬಂದು ಅವಳ ಕೈಯ ಬಟ್ಟಲು ಬರಿದಾಗಿದ್ದದ್ದನ್ನು ಕಂಡನು. ಕಂಡು ಕರಳಿದನು. ಮಗಳನ್ನು ಕುರಿತು, “ಎಲೆ ತಬ್ಬಲೀ, ನಿನ್ನ ಕೈಯಲ್ಲಿ ಬರಿಯ ಬಟ್ಟಲಿದೆಯಲ್ಲ ! ಹಾಲು