ಪುಟ:Kannada-Saahitya.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಸಾಹಿತ್ಯ ಚಿತ್ರಗಳು ನೆಲಕ್ಕೆ ಚೆಲ್ಲಿತೋ ? ನೀನೆ ಕುಡಿದೆಯೋ ? ಇಲ್ಲ, ನಿನ್ನೊಡನಾಡಿಗಳಿಗೆ ಎರೆದು ಬಿಟ್ಟಿ ಯೊ ? ಹೇಳು ” ಎಂದು ಆಗ್ರಹಿಸಿ ನುಡಿದನು, ತಂದೆ ಕೋಪಿಸಿ ನುಡಿಯುತ್ತಿದ್ದರೂ ಹುಡುಗಿ ಹೆದರದೆ ಧೈರ್ಯವಾಗಿ ನಿಂತಳು. ( ಅಪ್ಪಾ, ನೀನು ಹೇಳಿದ್ದಂತೆ ಬಟ್ಟಲು ಹಾಲನ್ನು ತೆಗೆದು ಕೊಂಡು ಹೋಗಿ ಮುಂದಿಟ್ಟಿ, ಕುಡಿದ ತ್ರ್ಯಂಬಕ, ಅದರಿಂದ ಬರಿಯ ಬಟ್ಟಲನ್ನು ತರುತ್ತಿದ್ದೇನೆ. ದಿನದಿನವೂ ಹೀಗೆಯೆ ಶಿವ ಹಾಲು ಕುಡಿಯು ತ್ತಾನೆ. ಸುಳ್ಳಲ್ಲ ; ನಿಜ ” ಎಂದಳು. ಅದನ್ನು ಕೇಳಿ ಆ ತಂದೆ, “ಹಾಲನ್ನು ಶಿವ ಕುಡಿಯುತ್ತಾನೆಯೆ ? ಸುಳ್ಳು ಸುಳ್ಳು” ಎಂದನು. “ ಅತಿ ವೃದ್ದ ರಾದ ಭಕ್ತರು ಸದಾಕಾಲವೂ ಪ್ರಾರ್ಥಿಸಿದರೂ ಶಿವನು ಆಯೋಗಿಸುವುದು ದುರ್ಲಭ. ಏನೂ ಅರಿಯದ ಬುದ್ದಿಯಲ್ಲದ ಹುಡುಗಿಯ ಮಾತು ಕೇಳಿ ಹಾಲು ಕುಡಿಯುತ್ತಾನೆಯೆ ??” ಎಂದು ತನ್ನ ಮನಸ್ಸಿನಲ್ಲಿ ಆಲೋಚಿಸಿ ದನು, “ ಶಿವನಿಗೆ ಇವಳು ಹಾಲು ಕೊಡುವುದನ್ನು ನಾಳೆ ನೋಡುತ್ತೇನೆ” ಎಂದು ನಿರ್ಧರಿಸಿ ಮಗಳೊಡನೆ ಮನೆಗೆ ಬಂದನು. ಮರುದಿನ ಬೆಳಗ್ಗೆ ಎಂದಿನಂತೆ ಹೊಂಬಟ್ಟಲಿನಲ್ಲಿ ಹಾಲು ತುಂಬಿ ಕೊಂಡು ಹೊರಟು ಮಗಳೊಡನೆ ಶಿವದೇವನೂ ದೇವಾಲಯಕ್ಕೆ ಹೋಗಿ ಶಿವನೆದುರಿಗೆ ನಿಂತು ನೋಡುತ್ತಿದ್ದನು. ಕೊಡಗೂಸು ಮೃಡನಿಗೆರಗಿ ಹಾಲನ್ನು ಮುಂದಿಟ್ಟು ಕೈ ಮುಗಿದು ಆರೋಗಿಸೆಂದು ಬಿನ್ನಹ ಮಾಡಿದಳು. ಹರನು ಆ ಭಕ್ತಿಯ ಮಹಿಮೆಯನ್ನು ಧರೆಗೆಲ್ಲ ತೋರಬೇಕೆಂದು ಹಾಲು ಕುಡಿ ಯದೆ ಸುಮ್ಮನಿದ್ದನು. ಆಗ ತರಳೆ ಅಂಜಿ ನಡುಗಿದಳು. ಅದನ್ನು ಕಂಡು ತಂದೆ ಕೋಪಗೊಂಡು, “ ನೀನೇ ಕುಡಿದು ಹಾಲನ್ನು ಶಿವ ಕುಡಿದನಂದು ಹುಸಿ ನುಡಿದೆಯಲ್ಲ. ಪಾತಕಿ, ನಿನ್ನನ್ನು ಕಡಿದಿಕ್ಕದೆ ಬಿಡುತ್ತೇನೆಯೇ ?ಎಂದು ಉಗ್ರವಾಗಿ ನುಡಿಯುತ್ತ ಹೊಡೆಯಲು ಮೇಲೆ ನುಗ್ಗಿದನು. ಹುಡುಗಿಗೆ ಮಹಾಭಯವುಂಟಾಯಿತು. ಗಡಗಡನೆ ನಡುಗುತ್ತೆ, * ಹಾ, ಮಹೇಶ್ವರಾ ! ಹಾ, ನಂದೀಶ್ವರಾ ! ನೀನೆ: ಸವೃತಿ ಕಾಪಾಡು » ಎಂದು ಚೀರಿದಳು. ಆಗ ಸೋಮಶೇಖರನು, 11 ಅಂಜದಿರು ಮಗಳೇ ! !!