ಪುಟ:Kannada-Saahitya.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜೋಳರು ಕೊಡಗೂಸು ಎಂದು ಬೇಗ ಅಭಯ:ಕೊಟ್ಟನು. ಕೃಪಾನಿಧಿಯಾದ ಶಂಕರನು ಮನಸ್ಸಿ ಗೊಪ್ಪಿ ಸೊಗಸುವ ಆ ಅಮ್ಮ ಥರಸವನ್ನು ಕುಡಿದನ: . ಬಳಿಕ ಆ ಕೊಡಗೂಸನ್ನು ಕೃಪಾಕಟಾಕ್ಷದಿಂದ ನೋಡಿ, ಕೈ ನೀಡಿ ಸೆಳೆದು ಬಿಗಿಯಪ್ಪಿಕೊಂಡು, ಗೌರೀಕಾಂತನು ಅವಳನ್ನು ತನ್ನೊಡಲಿನಲ್ಲಿ ಜೋಕೆಯಿಂದ ಇರಿಸಿಕೊಂಡನು. ಶಿವಲಿಂಗದಲ್ಲಿ ಒಳಹೊಗುತ್ತಿರುವ ಮಗ ಳನ್ನು ಕಂಡು ತಂದೆ, " ಎಟಿ, ಹೆಣಗಬೆಡ ” ಎಂದು ಚಂಡಿಕೆ ಹಿಡಿದೆಳೆ ಧನು, ಜಡೆ ಮಾತ್ರ ಹೊರಗುಳಿಯಿತು; ಲೋಕವೆಲ್ಲ ಮೆಟ್ಟಿ ಕೊಂಡಾಡು ವಂತೆ ಕೊಡಗೂಸು ಲಿಂಗದೊಳಹೊಕ್ಕಳು. ಪಾಪಹರನಾದ ಪರಮೇಶ್ವರನು ಪ್ರೀತಿಯಿಂದ ತನಗೆ ಹಾಲು ಕೊಟ್ಟು ಮುಗ್ಧ ಭಕ್ತಿಗೆ ಸೊಗಸಾದ ಅಮೃತ ವನ್ನು ಕೊಟ್ಟು ಕಾಪಾಡಿದನು | ಹಿ ನ್ನು ಡಿ ಈ ಕಥೆ ವೃಷಭೇಂದ್ರ ವಿಜಯವೆಂಬ ಕಾವ್ಯದಿಂದ ಆಯ್ದು ಕೊಂಡದ್ದು. ವೃಷಭೇಂದ್ರ ವಿಜಯದಲ್ಲಿ ಬಸವಣ್ಣನವರ ಚರಿತ್ರೆಯನ್ನು ನಿರೂಪಿಸಿದೆ, ಹರಿಹರನ (ಬಸವರಾಜ ದೇವರ ರಗಳೆ ” ಯಲ್ಲಿನ ಕಥೆಗೆ ಈ ಗ್ರಂಥದಲ್ಲಿನ ಕಥೆಗೂ ಹಲವು ವ್ಯತ್ಯಾಸಗಳಿವೆ. ಬಸವಣ್ಣನವರ ಜೀವನಕ್ಕೆ ಸಂಬಂಧಿಸಿದ ಇನ್ನೂ ಕೆಲವು ಭಕ್ತರ ಕಥೆಗಳೂ ಇಲ್ಲಿ ದೊರೆಯುತ್ತವೆ. ಕೊಡಗೂಸಿನ ಕಥೆಯನ್ನು ಬಸವಣ್ಣನವರು ಹೇಳಿದಂತೆ ವರ್ಣಿಸಿದೆ, ಇದನ್ನು ಬರೆದವನು ಷಡಕ್ಷರದೇವ, ಇವನು ಯಳಂದೂರು ವಶಕ್ಕೆ ಸ್ವಾಮಿ ಯಾಗಿದ್ದನು. ಇವನ ಕವಿತೆ ಅಲಂಕಾರ ಚಮತ್ಕಾರ ಪೂರ್ಣವಾಗಿ ಪಂಡಿತರಂಜಕ ನಾf}ದ. _ರಾಜಶೇಖರವಿಳಾಸ, ವೃಷಭೇಂದ್ರ ವಿಜಯ, ಶಬರ ಶಂಕರವಿಲಾಸ-ಎಂಬವು ಇವನ ಕೃತಿಗಳು. ಇವೆಲ್ಲ ಪ್ರೌಢಶೈಲಿಯ ಚಂಪೂ ಕಾವ್ಯಗಳು ; ಹಳಗನ್ನಡದಲ್ಲಿ ರಚಿತವಾಗಿವ. ಇವನ ಕಾಲ ಕ್ರಿ. ಶ. ೧೭ ನೆಯ ಶತಮಾನದ ಉತ್ತರಾಧ,