ಪುಟ:Kannada-Saahitya.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಕನ್ನಡ ಸಾಹಿತ್ಯ ಚಿತ್ರಗಹಳು

   ದಂತೆ ನೋಡಿಕೊಳ್ಳಿ"ಎಂದು ತೋರಿಸಿದನು.ಅವರೆಲ್ಲ ತಮ್ಮ ತಮ್ಮ ಒಡವೆಗಳನ್ನು ಹುಡುಕಿ ತೆಗೆದುಕೊಂಡರು.
     ಆಮೇಲೆ ವಿದ್ಯುಚ್ಚೋರನು ಹಾರವನ್ನು    ತೆಗೆದುಕೊಂಡು ಹೋಗಿ ದೊರೆಗೆ ಒಪ್ಪಿಸಿದನು.ಆಗ ಆತನ"ಮಾಘಮಾಸದ ರಾತ್ರಿಯಲ್ಲಿ,ನಾಲ್ಕು ಚಾವದಲ್ಲಿಯೂ ಘೋರವಾದ ಮೂವತ್ತೆರೆಡು ದಂಡೆಗಳನ್ನು ಹೇಗೆ ಸೈರಿಸಿದೆ?"ಎಂದು ಕೇಳಿದನು.ಅದಕ್ಕೆ ವಿದ್ಯುಚ್ಚೋರನಿಂತೆಂದನು:
      "ದೇವಾ,ಕಿರಿಯವನಾಗಿದ್ದಾಗ ಒಂದು ದಿವಸ ನನ್ನನ್ನು ಓದಿಸುವ ಓಜರೊಡನೆ ಸಹಸ್ರಕೂಟ ಚೈತ್ಯಾಲಯಕ್ಕೆ ನಾನೂ ಹೋಗಿದ್ದೆ.ಓಜರು ದೇವರನ್ನು ವಂದಿಸಿಹೋದರು.ಅವರು ಬರುವವರೆಗೂ ನಾನು ಚರಿತ್ರೆ ಪುರಾಣಗಳನ್ನು ವ್ಯಾಖ್ಯಾನ ಮಾಡುತ್ತಿದ್ದೆ ಶಿವಗುಪ್ತರೆಂಬ ಆಚಾರ್ಯರ ಹತ್ತಿರ ಕುಳಿತಿದ್ದು ಅವರ ವ್ಯಾಖ್ಯಾನವನ್ನು ಕೇಳುತ್ತದ್ದೆ. ಅವರು ಹೀಗೆ ಹೇಳುತ್ತಿದ್ದರು:'ವ್ರತ ಶೀಲ ಚಾರಿತ್ರ ಗುಣಗಳಲ್ಲದವರು,ಜೀವಗಳನ್ನು ಕೊಲ್ಲುವವರು,ಬೇಟೆಯಾಡುವವರು,ರಾಗ ದ್ವೇಷ ರೋಭಗಳಿಂದ ಸುಳ್ಳಾಡುವವರು,ಜೀವಿಗಳಿಗೆ ಸಂತಾನವನ್ನೂ ವಧೆಯನ್ನೂ ಮಾಡುವವರು,ಮಧ್ಯ ಮಾಂಸಗಳನ್ನು ಸೇವಿಸುವವರು-ಇವರೇ ಮೊದಲಾದವರೆಲ್ಲ ನರಕಗಳಲ್ಲಿ ಹುಟ್ಟಿ ದುಃಖವನ್ನನುಭವಿಸುತ್ತಾರೆ'ಎಂದು ಹೇಳಿ ಆ ನರಕ ದುಃಖಗಳನ್ನೆಲ್ಲ ವಿವರಿಸಿದರು.ಮುಂದುವರಿಸಿ,'ಮತ್ತೂ ದಾನ,ಪೂಜೆ,ಶೀಲ,ಉಪವಾಸ-ಎಂಬ ಈ ನಾಲ್ಕು ಬಗೆಯ ಶ್ರಾವಕ ಧರ್ಮಗಳನ್ನು ನಡೆಸುವವರೂ,ತಪಸ್ಸು ಮಾಡುವವರೂ,ಸ್ವರ್ಗ ಮೋಕ್ಷ ಸುಖಗಳನ್ನು ಪಡೆಯುತ್ತಾರೆ'ಎಂದು ಹೇಳಿದರು.ಅದನ್ನು ಕೇಳಿ ಆ ಭಟಾರರ ಪಕ್ಕದಲ್ಲಿ ಶ್ರಾವಕ ಧರ್ಮಗಳನ್ನು ಕೈಕೊಂಡನು.'ಅಂತರಂಗ ಬಹಿರಂಗಗಳಲ್ಲಿ ಯಾವ ಪರಿಗ್ರಹವೂ ಇಲ್ಲದಿರುವುದೇ ತಪಸ್ಸು'ಎಂಬಿವೇ ಮೊದಲಾದ ತತ್ತ್ವಗಳನ್ನು ತಿಳಿದುಕೊಂಡೆನು;ಸಮ್ಯಕ್ತ್ವವ ಕೈಕೊಂಡೆನು;ವ್ರತಗಳನ್ನು ತಾಳಿದೆನು.ಆಗ ಕೇಳಿದ್ದ ನರಕ ದುಃಖಗಳ ಶತಸಹಸ್ರಭಾಗಕ್ಕೂ ಇವು ಸಮವಲ್ಲವೆಂದು ಈ ಮೂವತ್ತೆಲಡು ದಂಡನೆಗಳನ್ನೂ ಸೈರಿಸಕೊಂಡೆನು"ಎಂದನು.
    ಅದನ್ನು ಕೇಳಿ ಅರಷನು,"ನಿನ್ನನ್ನು ಮೆಚ್ಚಿದೆ.ಬೇಡಿಕೊ.ನೀನು ಬೇಡಿ