ವಿಷಯಕ್ಕೆ ಹೋಗು

ಪುಟ:Kannada-Saahitya.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕನ್ನಡ ಸಾಹಿತ್ಯ ಚಿತ್ರಗಳು


ಕಾಣಲಾಗುತ್ತಿರಲಿಲ್ಲ. ಇವನನ್ನು ಬಹಳ ಹೊತ್ತು ಹುಡುಕಿ ಕಾಣದೆ ದೆಸೆಗೆಟ್ಟು ಬೇಸತ್ತೆನು. ಆಗ ' ಆಗಲಿ. ಮಗನೇ, ನೀನು ತಳಾರನಾದಾಗ ನಿನ್ನ ಕಾಸಿನಲ್ಲಿ ಕದ್ದು ನಿನ್ನನ್ನು ಕೊಲ್ಲಿಸದಿದ್ದರೆ ಏನಾಯಿತು !” ಎಂದು ನುಡಿದೆನು. ಅದಕ್ಕೆ ಈತನೂ ಹೀಗೆಂದನು : 'ಆಗಲಿ. ಮಗನೇ, ನೀನು ನಾನು ತಳಾರು ಮಾಡುವಾಗ ಕದ್ದರೆ ನಿನ್ನನ್ನು ಹಿಡಿದು ಕಟ್ಟಿ, ಕಳ್ಳರ ದಂಡನೆಯಿಂದ ದಂಡಿಸದಿದ್ದರೆ ಏನಾಯಿತು !' ಎಂದು ನುಡಿದನು. ' ಈ ಮಾತನ್ನು ಮರೆಯಬೇಡ' ಎಂದು ಇಬ್ಬರೂ ಒಬ್ಬರನ್ನೊಬ್ಬರು ಮೂದಲಿಸಿ ಪ್ರತಿಜ್ಞೆ ಮಾಡಿದೆವು.

" ಕೆಲವು ಕಾಲ ಕಳೆದ ಮೇಲೆ ನಮ್ಮ ತಂದೆ ನನಗೆ ಪಟ್ಟಕಟ್ಟಿ ತಪ್ಪಸಿಗೆ ಹೋದನು. ಈತನ ತಂದೆಯೂ ತನ್ನ ವಂಶಕ್ರಮದ ಅಧಿಕಾರವನ್ನು ಈತನಿಗೆ ಕೊಟ್ಟು ಅರಸನೊಡನೆ ತಪಸ್ಸಿಗೆ ನಡೆದನು. ನಾನು ರಾಜನಾದೆ ; ಈತನು ತಳಾರನಾದನು. ಹೀಗೆ ಸುಖದಲ್ಲಿ ಇಬ್ಬರಿಗೂ ಕಾಲ ಕಳೆಯುತ್ತಿತ್ತು. ಮತ್ತೆ ಒಂದು ದಿವಸ ಈತ ತನ್ನ ಮನಸ್ಸಿನಲ್ಲಿ ಹೀಗೆಂದುಕೊಂಡನು :- ' ನಮ್ಮರಸ ಕಳ್ಳ; ನಾನು ಈ ಪಟ್ಟಣದಲ್ಲಿ ತಳಾರು ಮಾಡುತ್ತಿದ್ದೇನೆ. ಇದು ಕಾರ್‍ಯ ಒಳ್ಳೆಯದಲ್ಲ' ಎಂದು ನನಗಂಜಿ ನಾಡು ಬಿಟ್ಟು ಬಂದು ನಿಮಗೆ ಆಳಾದನು. ನಾನೂ ಈತನನ್ನು ನಾನಾಳುವ ದೇಶದ ಎಂಟು ದಿಕ್ಕಿನ ಗ್ರಾಮ ನಗರಾದಿಗಳಲ್ಲೆಲ್ಲ ಹುಡುಕಿಸಿ ಕಾಣದೆ, ಪರಮಂಡಲಗಳಲ್ಲಿಯೂ ಹುಡುಕಿಸಿದೆನು. ಎಲ್ಲಿಯೂ ಕಾಣದಿರಲು ಇಲ್ಲಿಗೆ ಚರರನ್ನಟ್ಟಿದೆನು. ಅವರು ಹುಡುಕಿ ಬಂದು, ' ದೇವಾ, ಮಿಥಿಳೆಯೆಂಬ ಪಟ್ಟಣ. ಅದನ್ನಾಳುವವನು ನಾಮರಥನೆಂಬರಸ. ಆತನಿಗೆ ಯಮದಂಡನು ಆಳಾಗಿ ಪಟ್ಟಣದ ಕಾಪು ಪಡೆದು ಸುಖವಾಗಿದ್ದಾನೆ ” ಎಂದು ಹೇಳಿದರು.

“ ಆ ಮಾತನ್ನು ಕೇಳಿ ನಾನು ಪುರುಷೋತ್ತಮನೆಂಬ ಮಂತ್ರಿಗೆ 'ಮಿಥಿಳಾ ಪಟ್ಟಣಕ್ಕೆ ಯಾರೂ ಅರಿಯದ ಹಾಗೆ ಹೋಗಿ ಯಮದಂಡನನ್ನು ಕರೆದುಕೊಂಡು ಬರುತ್ತೇನೆ' ಎಂದು ಹೇಳಿದೆನು. ಹೇಳಿ ವಜ್ರಸೇನನೆಂಬ ಹೆಗ್ಗಡೆಯನ್ನು ಕರಸಿ, 'ನಾನು ಒಂದು ಮದೆವಾರ್ತೆಗಾಗಿ ಹೋಗಿಬರುತ್ತೇನೆ. ನಾನು ಬರುವವರೆಗೂ ರಾಜ್ಯವನ್ನು ಪಾಲಿಸುತ್ತಿರು' ಎಂದು ಏರ್ಪಡಿಸಿ ಸಮಸ್ತ ರಾಜ್ಯಭಾರವನ್ನೂ ಒಪ್ಪಿಸಿಕೊಟ್ಟನು. ಬಳಿಕ ಅರ್ಧರಾತ್ರಿಯಲ್ಲಿ ಯಾರೂ ಅರಿಯದ ಹಾಗೆ ಒಬ್ಬನೇ ಹೊರಟು ಬಂದು ಈ ಪಟ್ಟಣವನ್ನು