ಪುಟ:Kannada-Saahitya.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಕುಚೋರನೆಂಬ ಋಷಿಯ ಕಥೆ

ಮನುಷ್ಯರ ರೂಪ, ಯೌವನ,ತೇಜಸ್ಸು,ಸೌಭಾಗ್ಯ,ಆಯಸ್ಸು,ಸಂಪತ್ತು,ಸಲ್ಮೆ ಇವೇ ಮೊದಲಾದವೆಲ್ಲ ಅನಿತ್ಯಗಳು. ಯಾವಾಗ ಈ ಶರೀರವು ಸ್ವಸ್ಥವಾಗಿರುವುದೋ, ಯಾವಾಗ ಮುಪ್ಪು ಇನ್ನೂ ದೂರವಾಗಿರುವುದೋ,ಯಾವಾಗ ಇಂದ್ರಿಯಶಕ್ತಿ ಕುಗ್ಗದೆ ತಡೆಯಿಲ್ಲದ್ದಾಗಿರುವುದೋ, ಯಾವಾಗ ಆಯಸ್ಸಿಗೆ ಇನ್ನೂ ಕ್ಶಯಕಟ್ಟದಿರುವುದೋ,ಆಗಲೆ ವಿದ್ವಾಂಸನಾದವನು ಆತ್ಮಶ್ರೇಯಸ್ಸಿಗೆ ಪ್ರಯತ್ನ ಮಾಡಬೇಕು. ಮನೆ ಹೊತ್ತಿ ಬೇಯುತ್ತಿರುವಾಗ ಬಾನಿ ತೋಡುವ ಪ್ರಯತ್ನ ಮಾಡುವುದು ಅದೆಂಧದು? ಎಂದು ಮೊದಲಾಗಿ ಶಾಸ್ತ್ರ.ವಚನಗಳನ್ನು ಉದಾಹರಿಸಿ ನುಡಿದು, ತನ್ನ ನಿಶ್ಛಯವನ್ನು ದೃಢಪಡಿಸಿದನು.ಮತ್ತೆ ನೆರೆದ ಜನರನೆಲ್ಲ ಕುರಿತು,"ನಾನು ಅರಸ;ಇವರು ಆಳುಗಳು; ನನಗೇನು?-ಎಂದುಕೊಂಡು ಅರಿತು ಅರಿಯಧೆ ನಾನು ಯಾರನ್ನಾದರು ಏನನ್ನಾದರೂ ಅಂದಿದ್ದು, ಆ ಸಂಕಟ ಮನಸ್ಸಿನಲ್ಲಿ ಕೊರೆಯುತ್ತಿದ್ದರೂ ಆ ಮಾತನ್ನು ಎಲ್ಲರೂ ಮರೆತುಬಿಡಿ" ಎಂದು ಕೇಳಿಕೊಂಡು ಕ್ಶಮೆಗೊಳಿಸಿದನು.

ಬಳಿಕ ವಿದ್ಯುದಂಗನೆಂಬ ತನ್ನ ಹಿರಿಯ ಮಗನಿಗೆ ಪಟ್ಟಕಟ್ಟಿ ರಾಜ್ಯಾಭಿಷೇಕ ಮಾಡಿ "ಈತನನ್ನು ಹಿಡಿದು ನೀವೆಲ್ಲ ಸಿಖವಾಗಿ ಬಾಳಿ" ಎಂದು ಕಲ್ಪಿಸಿದನು. ಯಮದಂಡನಿಗೆ ತಳಾರಿಕೆಯನ್ನು ಕೊಟ್ಟನು.ಆಮೇಲೆ ಮಂಗಳಾಲಂಕಾರಗಳನ್ನು ಧರಿಸಿ ಪಟ್ಟದಾನೆಯನ್ನೇರಿ, ಸತಿಯರು ಸಂಗಡ ಬರುತ್ತಿರಲು ಇಕ್ಕೆಲದಲ್ಲೂ ಚಾಮರನಿಕ್ಕಿಸಿಕೊಳ್ಳುತ್ತಾ ಸಮಸ್ತಾ ರಾಜ್ಯ ಚಿಪ್ನೆಗಳೊಡನೆ ಹೊರಟು, ವಂದಿ ಮಾಗಧ ಯಾಚಕಾದಿಗಳಿಗೂ,ದೀನ ಅನಾಥ ಅಂಧಕರಿಗೂ ತುಷ್ಟಿದಾನ ಕೊಡುತ್ತಾ ಸಹಸ್ರಕೂಟ ಚೈತ್ಯಾಲಯಕ್ಕೆ ಹೋದನು.ಅಲ್ಲಿ ಆನೆಯಿಂದಿಳಿದು ಬಸದಿಯನ್ನು ಮೂರು ಸಲ ಪ್ರದಕ್ಶನೆಮಾಡಿ ದೇವರನ್ನು ವಂದಿಸಿದನು. ಬಳಿಕ ಗುಣಧರರೆಂಬ ಆಚಾರ್ಯರ ಬಳಿ ಗೈದಿ ಗುರುಭಕ್ತಿಯಿಂದ ವಂದಿಸಿ,"ಭಟಾರಾ, ಸಂಸಾರವೆಂಬ ಸಮುದ್ರದಲ್ಲಿ ಮುಳುಗಿದ್ದೇನೆ. ಮುಳುಗಬಿಡದೆ ನನ್ನನ್ನು ಮೇಲೆತ್ತಿರಿ. ದೀಕ್ಶೆಯನ್ನು ಅನುಗ್ರಹಿಸಿರಿ" ಎಂದು ನುಡಿದು ಒಡಂಬಡಿಸಿ ದೀಕ್ಶೆಪಡೆದು ತಪೋನಿರತನಾದನು. ಸೌಂದರಿ ಮಹಾದೇವಿ ಮೊದಲಾದ ಅವನ ಅರಸಿಯರೂ ತಪಸ್ಸನ್ನು ಕೈಕೊಂಡು ಘೋರ ತಪಸ್ಸಿಗೆ ತೊಡಗಿದರು.