ವಿದ್ಯುಚ್ಚೋರನೆಂಬ ಋಷಿಯ ಕಥೆ
ಮುಕ್ತರಾದ ದೊಡ್ಡವರ ಸಂಗತಿಗಳು ಆ ಎಲ್ಲ ಕಥೆಗಳಲ್ಲಿಯೂ ಬರುತ್ತವೆ. ಧರ್ಮ ಮತ್ತು ತಪಸ್ಸಿನ ವಿಷಯಗಳನ್ನು ಹೇಳುವ ಆ ಕಥೆಗಳಲ್ಲಿ ಜನರ ನಡವಳಿಕೆಗೆ ಸಂಬಂಧಪಟ್ಟ ಎಷ್ಟೋ ಸಂಗತಿಗಳು ಗೊತ್ತಾಗುತ್ತವೆ. ಎಲ್ಲ ಕಥೆಗಳೂ ಚೆನ್ನಾಗಿವೆ.
"ವಡ್ಡಾರಾಧನೆ” ಎಂದರೆ “ ವೃದ್ಧಾರಾಧನೆ ದೊಡ್ಡವರ ಪೂಜೆ ” ಎಂದರ್ಥ. ಕಠಿನವಾದ ತಪಸ್ಸಿನಲ್ಲಿ ತೊಡಗಿದ ಜೈನ ಸನ್ಯಾಸಿಗಳು ಈ ಕಥೆಗಳಲ್ಲಿ ಹೇಳಿರುವ ಹಿರಿಯರು ಎಂಥೆಂಥ ಕಷ್ಟಗಳನ್ನು ಸಹಿಸಬೇಕಾಯಿತೆಂಬುದನ್ನು ಕೇಳುತ್ತ ತಾವೂ ಧೈಯ್ಯದಿಂದ ಕಷ್ಟಗಳನ್ನು ತಾಳಿಕೊಳ್ಳುತ್ತಿದ್ದರಂತೆ. ಹಿರಿಯರ ಒಳ್ಳೆಯ ಗುಣಗಳನ್ನು ನೆನೆದು ಅವರು ನಡೆದಂತೆ ನಡೆಯುವುದೇ ನಾವು ಅವರಿಗೆ ಮಾಡುವ ನಿಜವಾದ ಪೂಜೆ. ಅದಕ್ಕಾಗಿಯೇ ಈ ಪುಸ್ತಕಕ್ಕೆ 'ವಡ್ಡಾರಾಧನೆ ' ಎಂದು ಹೆಸರಿಟ್ಟಂತೆ ತೋರುತ್ತದೆ.
ನಮಗೆ ಇದುವರೆಗೆ ಸಿಕ್ಕಿರುವ ಕನ್ನಡ ಗ್ರಂಥಗಳಲ್ಲೆಲ್ಲ ಈ ವಡ್ಡಾರಾಧನೆಯೇ ಬಹು ಹಳೆಯದು. ಇದು ಕ್ರಿ.ಶ. ಐದು ಅಥವಾ ಆರನೆಯ ಶತಮಾನದಲ್ಲಿ ಬರೆದದ್ದಾಗಿರಬೇಕು. ಇನ್ನೂ ಹಿಂದಿನ ಕಾಲದ್ದಾಗಿದ್ದರೂ ಇರಬಹುದು. ಇದರ ಭಾಷೆ ಈಗ ನಾವು 'ಹಳಗನ್ನಡ ' ಎನ್ನುತ್ತೇವಲ್ಲ ಅದಕ್ಕೂ ಹಳೆಯದು. ನಾಲ್ಕು ಐದನೆಯ ಶತಮಾನದ ಶಾಸನಗಳಲ್ಲಿ ಕೆಲವು ಕಡೆ ಇಂಥ ಭಾಷೆ ಕಂಡುಬರುತ್ತದೆ. ಇದನ್ನು 'ಪೂರ್ವದ ಹಳಗನ್ನಡ ” ಎನ್ನಬಹುದು.
ಇದನ್ನು ಬರೆದವರು 'ರೇವಾಕೋಟ್ಯಾಚಾರ್ಯ'ರೆಂಬ ಜೈನಗುರುಗಳು.]