ಪುಟ:Kannada-Saahitya.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕನ್ನಡ ಸಾಹಿತ್ಯ ಚಿತ್ರಗಳು

೧೮

ಕೇಳಿ ಯಶಸ್ವತಿಯ ಆನಂದಕ್ಕೆ ಪಾರವಿಲ್ಲವಾಯಿತು. ಕಾಲಕ್ರಮದಲ್ಲಿ

ಆಕೆ ಗರ್ಭಿಣಿಯಾದಳು. ಆಗ ಆಕೆಊಪವನಗಳಲ್ಲಿ ವಿಹರಿಸುವುದಕ್ಕೆ ಬದ ಲಾಗಿ ಹಿಮವತ್ಪರ್ವತ ಮತ್ತು ನಿಜಯಾರ್ಧ ಪರ್ವತಗಳ ಶಿಖರಗಳಲ್ಲಿ ಆಲೆ ದಾಡಬೇಕೆಂದು ಅಫೇಕ್ಷಿಸುವಳು; ಸಮುದ್ರದಲ್ಲಿ ಜಲಕೇಳಿಯಾಡಲು ಅತ್ಯಾಸೆ ಪಡುವಳು; ಮೃದು ಮಧುರವಾದ ಸರಸವಾಕ್ಯಗಳನ್ನು ಕೇಳಲು ಬೇಸರಪಟ್ಟು ಅಸಮಸಾಹಸಿಗಳ ವೀರಕಥೆಗಳನ್ನು ಕೇಳಲು ಉತ್ಸಾಹಗೊಳ್ಳು ವಳು; ಪಂಜರದ ಗಿಳಿಗಳೊಡನೆ ಮಾತಾಡುವುದನ್ನು ಬಿಟ್ಟು ಸಿಂಹದ ಮರಿ ಗಳನ್ನು ತರಿಸಿ ನೋಡುತ್ತಿರುವಳು; ಕನ್ನಡಿಯಿದ್ದರೂ ಕತ್ತಿಯಲ್ಲಿ ಮುಖ ನೋಡಿಕೊಳ್ಳುವಳು; ಗೀತಕ್ಕೆ ಕಿವಿಗೊಡದೆ ಧನುಷ್ಟಂಕಾರವನ್ನು ಕೇಳ ಬಯಸುವಳು. ಹೀಗೆ ನೀರಜನನಿಗೆ ತಕ್ಕು ಬಯಕೆಗಳು ಆಕೆಗೆ ತಲೆದೂರು ತ್ತಿದ್ದವು.

ನವಮಾಸ ತುಂಬಿತು. ಆಕೆ ಶುಭಮುಹೂರ್ತದಲ್ಲಿ ಮನುವಂಶಕ್ಕೆ

ಕಲಶಪ್ರಾಯನಾದ ಸುಕುಮಾರನನ್ನು ಹಡೆದಳು. ಆ ಪುಣ್ಯಶಾಲಿಯ ಜನ್ಮ ದಿನದಲ್ಲಿ ಎಲ್ಲೆಲ್ಲೂ ತ್ಂಗಾಳಿ ಸುಳಿಯಿತು; ಆಕಾಶವೆಲ್ಲ ಹಾಲಿನಲ್ಲಿ ತೊಳೆ ಯಿತ್ತೋ ಎಂಬಂತೆ ಹೊಳೆಯುತ್ತಿತ್ತು. ಎಲ್ಲೆಲೂ ಹರ್ಷ ಕುಳುಕಾಡುತ್ತಿತ್ತು. ಅರಮನೆಯಲ್ಲಿನ ಸಡಗರವನ್ನಂತೂ ಹೇಳತೀರದು. ಎತ್ತಿ ಕಟ್ಟದ ಬಾವುಟ ಗಳು ಪಟಪಟನೆ ಹಾರುತ್ತಿದ್ದವು. ರತ್ನದ ತೋರಣಗಳು ಸುತ್ತಮುತ್ತ ಕಳೆ ಯೆರಚುತ್ತಿದ್ದವು. ಆನಂದಭೇರಿಗಳ ಗಂಭೀರ ಧ್ವನಿ ದಿಕ್ಕುದಿಕ್ಕಿಗೂ ಒಳಗೂ ಓಡಾಡುತ್ತಿದ್ದರು.

ನಾಭಿರಾಜನೂ ಇತರ ಹಿರಿಯರೂ ಹರ್ಷಗೊಂಡರು. ಸಮಸ್ತ

ಬಂಧು ಜನರೂ ನೆರದು ಬಹು ಸಂಭ್ರಮದಿಂದ ಜಾತಕರ್ಮೋತ್ಸವವನ್ನು ನೆರವೇರಿಸಿದರು. ಎಲ್ಲರೂ ಸೇರಿ ಕೂಸಿಗೆ ಭರತ ಎಂದು ಹೆಸರಿಟ್ಟರು.

ಭರತನ ಬಾಲ್ಯ

ಮಗು ಕಾಂತಿಯಿಂದ ಕಂಗೊಳಿಸುತ್ತ ಬಹು ಮುದ್ದಾಗಿತ್ತು. ತಾಯಿ

ತಂದೆಗಳು ಅದರ ನಸುನಗೆಗೆ ಮರುಳಾಗಿ ಹೋದರು. ಗುರುಹಿರಿಯರಿಗೆ ಆ ಮಗುವಿನ ಸುಂದರ ಮುಖಮಂಡಲವನ್ನು ಎಷ್ಟು ನೋಡಿದರೂ ತೃಪ್ತಿ