ಪುಟ:Kannada-Saahitya.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಬಾಹುಬಲಿ ಭರತನು ಹುಟ್ಟಿದ ಸ್ವಲ್ಪ ಕಾಲದ ಮೇಲೆ ಕಿರಿಯ ರಾಣಿ ಸುನಂದೆ ಗರ್ಭಿಣಿಯಾದಳು. ಆ ಕಾಲದಲ್ಲಿ ಆಕೆಗೆ ದಿಗ್ಗಜಗಳನ್ನು ಹೋಲುವ ಮದ್ದಾನೆಗಳ ಹೋರಾಟವನ್ನು ನೋಡಬೇಕೆಂದೂ, ಜಗಜಟ್ಟಿಗಳೆಂದು ಹೆಸರುವಾಸಿ ಪಡೆದ ಮಲ್ಲರ ಮಲ್ಲಗಾಳಗವನ್ನು ಕಾಣಬೇಕೆಂದೂ ಅತಿ ಕುತೂ ಹಲವಾಗುತ್ತಿತ್ತು. ಆ ಬಗೆಯ ಅಸಾಧಾರಣವಾದ ಬಯಕೆಗಳು ಗರ್ಭದಲ್ಲಿ ಬೆಳೆಯುತ್ತಿದ್ದ ಮಗುವಿನ ಬಾಹುಬಲವನ್ನು ಸಾರಿ ಹೇಳುವಂತಿತ್ತು. ದಿನ ತುಂಬಿದ ಬಳಿಕ ಮನುಕುಲದ ಯಶಶ್ಮಿ ಜಯಶ್ರೀಗಳು ಮೂಡಿ ಬಂದ ೬ ತೆ ಒಬ್ಬ ಕುಮಾರನು ಹುಟ್ಟಿದನು. ಆ ಸಮಯದಲ್ಲಿ ದೇವತೆಗಳೆಲ್ಲ ಆನಂದಿ ಸಿದರು. ಅರಮನೆಯ ಆನಂದವಾದ್ಯಗಳ ಜೊತೆಗೆ ದೇವಲೋಕದ ವಾದ್ಯ ಗಳ ಮೊಳಗಿದವು. ಊರಿನಲ್ಲಿ ಎಲ್ಲಿ ನೋಡಿದರೂ ಧ್ವಜ ತೋರಣಗಳನ್ನೆತ್ತಿ ಕಟ್ಟಿ ಪರಿಮಳ ಪುಷ್ಪಗಳನ್ನೆರಚಿ ಸರ್ವಾಲಂಕಾರ ಭೂಷಿತರಾಗಿ ಜನ ಆನಂ ಧೋತ್ಸವಗಳಲ್ಲಿ ಮುಳುಗಿದ್ದರು. ಮಗುವಿಗೆ ' ಬಾಹುಬಲಿ ” ಎಂದು ಹೆಸರಿಟ್ಟರು ಅದರ ಬಾಲ ಕೇಳಿ ಗಳಿಂದ ನಾಭಿರಾಜನೇ ಮೊದಲಾದವರೆಲ್ಲರೂ ಪರಮಾನಂದಭರಿತರಾದರು. ಬಾಹುಬಲಿ ಬೆಳೆ ಬೆಳೆದಂತೆ ತನ್ನ ಹೆಸರನ್ನು ಸಾರ್ಥಕ ಪಡಿಸುತ್ತಿದ್ದನು. ಜೊತೆಯ ಬಾಲಕರೊಡನೆ ಕುಸ್ತಿ ಮಾಡುವನು ; ತೋ೪* ತಟ್ಟ ಜಟ್ಟಿಗಳ ಮೇಲೆ ಬಿದ್ದು ಕಾಳಿಗಮಾಡುವನು. ಹೀಗೆ ತೋಳ್ಬಲವನ್ನು ಮೆರಸುವುದ ರಲ್ಲಿ ಮನಮೆಚ್ಚಿ ಆನಂದಿಸುತ್ತಿದ್ದನು. ನವಯೌವನದ ಕಳೆ ಅಡಿಯಿಡುತ್ತಿರಲು ಅವನ ಚೆಲುವಿಗೆ ಎಣೆಯಿಲ್ಲ ವಾಯಿತು. ಅರಳು ತಾವರೆಯನ್ನು ಹೋಲುವ ಮುಖ, ಕಮಲ ದಳದಂತಹ ಕಣ್ಣುಗಳು, ಮೇಘದಂತೆ ಗಂಭೀರವಾದ ದನಿ, ಕಪ್ಪಾದ ತಲೆಗೂದಲು, ವಿಸ್ತಾರವಾದ ಎದೆ, ಮೊಳಕಾಲವರೆಗೂ ನೀಡಿದ ಬಲವಾದ ತೋಳುಗಳು, ದುಂಡುದೊಡೆಗಳು, ತುಂಬಿದ ಮೈ ಕಟ್ಟು, ಕುಲಶೈಲದಂತೆ ಔನ್ನತ್ಯ- ಹೀಗೆ ಬಾಹುಬಲಿ ಸಕಲ ಸೌಂದರ್ಯ ಸಂಪನ್ನನಾದನು. ಅವನ ಆ ಅಸಮಾನ ವಾದ ಚೆಲುವನ್ನು ಒಮ್ಮೆ ಕಂಡವರು ಅದನ್ನೆ೦ದಿಗೂ ಮರೆಯುವಂತಿಲ್ಲ.