ಪುಟ:Kannada-Saahitya.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪ ಕನ್ನಡ ಸಾಹಿತ್ಯ ಚಿತ್ರಗಳು ಕೌಶಲ್ಯಕ್ಕೂ ಸಭೆಯೆಲ್ಲ ಬೆರಗಾಯಿತು, ನಿಸ್ಸ೦ಗನಾದ ಆದಿನಾಥನೇ ಆ ಸೊಗಸಿಗೆ ಮನಸೋತು ನೋಡುತ್ತಿದ್ದನು. ಹಾಗೆ ನೋಡುತ್ತಿದ್ದಾಗ ಆ ನೀಳಾಂಜನೆಗೆ ಆಯಸ್ಸು ಮುಗಿಯಿತು. ಆಡುತ್ತಾಡುತ್ತ ಆಕೆ ಮಿಂಚಿನಂತೆ ತಟಕ್ಕನೆ ಮಾಯವಾದಳು, ರಸಭಂಗ ವಾದೀತೆಂದು ಇಂದ್ರನು ತನ್ನ ಶಕ್ತಿಯಿಂದ ಅವಳಂತೆಯೇ ಮತ್ತೊಬ್ಬಳನ್ನು ಸೃಷ್ಟಿಸಿ ನರ್ತನವನ್ನು ಮುಂದುವರಿಸಿದನು. ಅಲ್ಲಿ ನೆರೆದ ನರರಾಗಲಿ ಸುರ ರಾಗಲಿ ಅದನ್ನು ಅರಿಯಲಿಲ್ಲ ; ಮೊದಲಿನ ನೀಳಾಂಜನೆಯೆಂದೇ ಭಾವಿಸಿ ದ್ದರು. ಆದಿನಾಥನಿಗೆ ಮಾತ್ರ ಆ ಗುಟ್ಟು ಗೊತ್ತಾಗಿ ಹೋಯಿತು. ಅದನ್ನು ಕಂಡು ಋಷಭಸ್ವಾಮಿಯು “ ದೇಹ ಎಷ್ಟು ಅನಿತ್ಯವಾದ್ದು !” ಎಂದು ಆಶ್ಚರ್ಯಪಟ್ಟನು. ಸಂಸಾರದ ಅಸ್ಥಿರತೆ ಚೆನ್ನಾಗಿ "ಮಂದಾ ಯಿತು, ಇನ್ನು ನನಗೆ ಈ ಭೋಗ ಭಾಗ್ಯಗಳೊಂದೂ ಬೇಡ ' ಎಂದು ನಿಶ್ಚಯಮಾಡಿ ಎಲ್ಲವನ್ನೂ ತೊರೆದನು. ಮುಕ್ತಿಯನ್ನು ಸಾಧಿಸಬೇಕೆಂದು ಸಂಕಲ್ಪಿಸಿ ತಪಸ್ಸಿಗೆ ಹೊರಡಲು ಸಿದ್ದನಾದನು. ಬಳಿಕ ಭರತನನ್ನು ಕರಸಿ ಆತನಿಗೆ ಪಟ್ಟಾಭಿಷೇಕ ಮಾಡಿ ರಾಜ ಪದವಿ ಯನ್ನಿತ್ತನು. ಬಾಹುಬಲಿಗೆ ಯುವರಾಜಪದವಿಯನ್ನು ಕೊಟ್ಟನು. ಭರ ತನು ಅಯೋಧ್ಯಾ ಪಟ್ಟಣದಲ್ಲಿಯ ಬಾಹುಬಲಿ ಮೌದನಪುರದಲ್ಲಿಯೂ ಆಳುತ್ತಿರುವಂತೆ ನಿಯಮಿಸಿದವ. ಉಳಿದ ಮಕ್ಕಳಿಗೂ ಭೂಮಂಡಲವನ್ನು ಹಂಚಿಕೊಟ್ಟು ಒಬ್ಬೊಬ್ಬರನ್ನು ಒಂದೊಂದು ಕಡೆ ನಿಲ್ಲಿಸಿದನು. ಬಂಧು ಗಳಲ್ಲರಿಗೂ ಉಚಿತ ಸತ್ಕಾರ ಮಾಡಿ ತಾಯಿತಂದೆಗಳ ಅಪ್ಪಣೆ ಪಡೆದು ತಸ ಸ್ಸಿಗೆ ಹೊರಟನು. ಆಗ ದೇವತೆಗಳು ಮತ್ತೊಮ್ಮೆ ಋಷಭಸ್ವಾಮಿಗೆ ಅಭಿಷೇಕ ಮಾಡಿ ದರು. ಆನಂತರ ಪಲ್ಲಕ್ಕಿಯೊಂದನ್ನು ಅಣಿಮಾಡಿ ತಂದರು. ಋಷಭ ಸ್ವಾಮಿ ಅದನ್ನು ಹತ್ತಿದ ಬಳಿಕ ಏಳಡಿಗಳಷ್ಟು ದೂರ ಕ್ಷತ್ರಿಯ ರಾಜರು ಅದನ್ನು ಹೊತ್ತು ನಡೆದರು. ಬಳಿಕ ದೇವತೆಗಳು ತಮ್ಮ ಕೈಗೆ ತೆಗೆದು ಕೊಂಡು ಆಕಾಶ ಮಾರ್ಗದಲ್ಲಿ ಸಂಭ್ರಮದಿಂದ ನಡೆದರು. ಊರ ಹೊರ ಗಿನ ವನದಲ್ಲಿ ಪಲ್ಲಕ್ಕಿಯನ್ನಿಳಿಸಲು ಆದಿನಾಥನು ವಿಧಿವಿಹಿತವಾಗಿ ದೀಕ್ಷೆ ಯನ್ನು ಕೈಕೊಂಡನು. ಆತನು ಕಿತ್ತೆಸೆದ ಕುರುಳನ್ನು ಪೂಜಿಸಿ ದೇವತೆಗಳು