ಪುಟ:Kannada-Saahitya.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ-ಬಾಹುಬಲಿ ಕ್ಷೀರಸಮುದ್ರದಲ್ಲಿ ಹಾಕಿ ಬಂದರು. ಹೀಗೆ ' ಸರಿಸಿ ಮಣ ಕಲ್ಯಾಣ ? ವನ್ನು ನೆರವೇರಿಸಿ ಮುನೀಂದ್ರನ ಪಾದಗಳಿಗೆರಗಿ ಸ್ವರ್ಗಕ್ಕೆ ನಡೆದು, ಭರ ತನೂ ಭಕ್ತಿಯಿಂದ ಆತನನ್ನು ಪೂಜಿಸಿ ರಾಜಧಾನಿಗೆ ಹಿಂದಿರುಗಿದನು. - ಆದಿನಾಥನ ತಪಸ್ಸು - ಆದಿನಾಥನು ಮೌನ ಮತ್ತು ಅನಶನ ವ್ರತಗಳನ್ನು ಧರಿಸಿ ಧ್ಯಾನಾ ಸಕ್ತನಾದನು. ' ಇನ್ನು ಆರು ತಿಂಗಳು ಕಳೆದಲ್ಲದೆ ಕೈಯೆತ್ತುವುದಿಲ್ಲ ? ಎಂದು ಸಂಕಲ್ಪಿಸಿ ಪ್ರತಿಮಾಯೋಗವಲ್ಲಿ ನಿಂತನು. ಏನೇನೋ ಅಡ್ಡಿಗಳು ಬಂದವು. ಆದರೂ ಆತನ ಧ್ಯಾನಕ್ಕೆ ಚ್ಯುತಿ ಬರಲಿಲ್ಲ. ಆತನ ತಪಸ್ಸು ವೃದ್ಧಿಯಾಗುತ್ತ ಬಂದಂತೆಲ್ಲ ಅದರ ಪ್ರಭಾವದಿಂದ ಅಲ್ಲಿದ್ದ ಸಮಸ್ತ ಪ್ರಾಣಿ ವರ್ಗವೂ ಜಾತಿ ವೈರವನ್ನು ತೊರೆದು ಆ ಕಾಡಿನಲ್ಲಿ ಅನ್ನೋನ್ಯ ಪ್ರೀತಿಯಿಂದ ಬಾಳುತ್ತಿದ್ದವು. ಆರು ತಿಂಗಳು ಕಳೆದ ಮೇಲೆ ಧ್ಯಾನವನ್ನು ಮುಗಿಸಿ ಚರಿಗೆಗೆ ಹೊರ ಟನು. ಉತ್ತಮ ಆಹಾರಕ್ಕಾಗಿ ದೇಶದೇಶಗಳನ್ನು ಸಂಚರಿಸಿದನು. ಜನರು ಅ೦ ದ ಮುನಿಗೆ ಭಿಕ್ಷೆ ನೀಡಲು ಯೋಗ್ಯವಾದ ವಸ್ತು ಯಾವುದೆಂದರಿಯದೆ ಬಟ್ಟೆ ಬರೆ ಊಟ ತಿಂಡಿಗಳನ್ನು ಅರ್ಪಿಸಬಂದರು, ಮುನೀಶ್ವರನು ಯಾವು ದನ್ನೂ ಸ್ವೀಕರಿಸಲಿಲ್ಲ. ಕಡೆಗೆ ಹಸ್ತಿನಾವತಿಯ ಆರಸನಾದ ಶ್ರೇಯಾಂಸ ನೆಂಬುವನು ಇಷ್ಟಾರ್ಥವನ್ನು ಸಲ್ಲಿಸಲು ಕಲ್ಪವೃಕ್ಷವೇ ಹತ್ತಿರ ಬರುತ್ತಿರು ವುದೋ ಎಂಬಂತೆ ಬರುತ್ತಿರುವ ಆ ಮುನೀಂದ್ರನಿಗೆ ಪರಿಶುದ್ಧವಾದ ಕಬ್ಬಿನ ಹಾಲನ್ನು ಸಮರ್ಪಿಸಿದನು. ಭಕ್ತಿಯಿಂದರ್ಪಿಸಿದ ಆ ನಿರ್ದುಷ್ಟ ರಸವನ್ನು ಸ್ವಾಮಿ ಪಾನ ಮಾಡಿದನು. ಆಗ ಪಂಚಾಶ್ಚಯ್ಯಗಳಾದವು. ಋಷಭಯೋಗಿಯು ಹಲವು ಸಂವತ್ಸರಗಳವರೆಗೆ ದೇಶಾಟನೆ ಮಾಡು ತಿದ್ದು ಕಡೆಗೆ ಪುರಿಮತಾಳವೆಂಬ ಪಟ್ಟಣದ ಹೊರ ಉದ್ಯಾನದಲ್ಲಿ ಘೋರ ತಪಸ್ಸಿಗೆ ತೊಡಗಿದನು. ಕೇವಲ ಜ್ಞಾನೋತ್ಪತ್ತಿ ಹೀಗೆ ತಪೋನಿರತನಾಗಿರಲು ಋಷಭಯೋಗಿಯ ಕರ್ಮಬೀಜವೆಲ್ಲ