ಪುಟ:Kannada-Saahitya.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಆಳುತ್ತಿದ್ದನು. ಅವನನ್ನು ಜಯಿಸಹೊರಟ ಚಕ್ರವರ್ತಿಯನ್ನು ಕಡಲಡ್ಡ ಗಟ್ಟಿತು. ಮಾರಿ ಮುನ್ನುಗ್ಗುವೆನೆಂದು ಯತ್ನಿಸಿದ ಆತನಿಗೆ ಪುರೋಹಿತನೂ ಕುಲವೃದ್ದರೂ ಹಿತೋಪದೇಶ ಮಾಡಿದರು. ಅದರಂತೆ ಗಂಗಾಸಾಗರ ಸಂಗಮದಲ್ಲಿ ದರ್ಭೆಯ ಮೇಲೆ ಮಲಗಿ ಭರತೇಶ್ವರನು ಮೂರು ದಿನಗಳ ವರೆಗೆ ಉಪವಾಸವ್ರತವನ್ನಾಚರಿಸಿದನು. ಪುರೋಹಿತನು ಜಿನಪೂಜೆ ಯನ್ನೂ ಶಾಂತಿಕ್ರಿಯೆಗಳನ್ನೂ ನೆರವೇರಿಸಿದನು. ನಾಲ್ಕನೆಯ ದಿನ ಬೆಳಗ್ಗೆ ಭರತ ರಾಜನು ಮಂಗಳಾಲಂಕಾರ ಮಾಡಿಕೊಂಡು ದಿವ್ಯಾಸ್ತ್ರಗಳನ್ನು ಧರಿಸಿದನು. ನೀರಿನಲ್ಲಿ ನೆಲದಲ್ಲೂ ತಡೆಯಿಲ್ಲದೆ ನಡೆಯುವ ಕುದುರೆಗಳನ್ನು ಹೂಡಿದ ರಥವನ್ನು ಸಾರಥಿ ತಂದು ನಿಲ್ಲಿಸಿದನು. ಅದನ್ನೆರಿ ಆ ಮಹಾಮಹಿಮನು ಗಂಗಾ ದ್ವಾರದಿಂದ ಲವಣ ಸಮುದ್ರವನ್ನು ಪ್ರವೇಶಮಾಡಿದನು. ಕುದುರೆಗಳ ಗೊರಸು ಮುಳುಗಲಿಲ್ಲ. ಚಕ್ರ ಕೆಳಗಿಳಿಯಲಿಲ್ಲ. ಚಕ್ರದ ಚೀತ್ಕಾರವೂ ನಿಲ್ಲಲಿಲ್ಲ. ನೆಲದ ಮೇಲೆ ಹೇಗೋ ಹಾಗೆ ಅತಿ ಸುಲಲಿತ ವಾಗಿ ನೀರಿನ ಮೇಲೂ ತೇರು ನಡೆಯುತ್ತಿತ್ತು. ಹೀಗೆ ಹನ್ನೆರಡು ಯೋಜನ ನಡೆದು ತಟಕ್ಕನೆ ರಥ ನಿಂತುಬಿಟ್ಟಿತು. ಭರತನಿಗೆ ಕೋಪವುಕ್ಕಿತು, ವಜ್ರಕಾಂಡವೆಂಬ ಬಿಲ್ಲನ್ನು ಕೈಗೆತ್ತಿ ಕೊಂಡು ಹೆದೆಯೇರಿಸಿದನು ; ಅಮೋಘ ಬಾಣವನ್ನು ಹೂಡಿದನು. ಆ ಬಾಣದಲ್ಲಿ, “ಫುರು ಪರಮೇಶ್ವರ ಪುತ್ರನಾದ ಭರತ ಚಕ್ರವರ್ತಿ ಬಂದಿದ್ದಾನೆ. ಎಲ್ಲ ಭೂನಿವಾಸಿಗಳೂ ವ್ಯ೦ತರಾಮರರೂ ತಲೆ ತಗ್ಗಿಸಿಕೊಂಡು ಬಂದು ಕಾಣಬೇಕು” ಎಂಬ ಲೇಖನವನ್ನಿಟ್ಟನು ಇಟ್ಟು ಅಲ್ಲಿಂದಲೇ ಮಾಗ ಧಾಮರನ ಮೇಲೆ ಪ್ರಯೋಗಿಸಿದನು. ಬಾಣ ನೇರವಾಗಿ ಮಾಗಧನ ಸಭೆಗೆ ಹೋಗಿ ಬಿದ್ದಿತು. ಆ ಲೇಖನ ವನ್ನೊದಿಸಿ ಕೇಳಿ ಮಾಗಧನು ಕೆರಳಿದನು. “ತನ್ನ ಕುಲದ ಚಲದ ಅಗ್ಗಳಿಕೆ ಕೆಡುವಂತೆ ಮತ್ತೊಬ್ಬನಿಗೆ ತಲೆಬಾಗಿ ಬಾಳುವವನು ಬದುಕಿದ್ದರೂ ಸತ್ತಂತೆಯೇ ಸರಿ” ಎಂದು ನುಡಿದನು. ಅಂಥ ಹೇಡಿಯಾಗಲು ಹೇಸಿ ಕದನಕಾತರನಾಗಿ ಗರ್ಜಿಸಿದನು. - ಕುಲವೃದ್ಧರು ಅವನಿಗೆ ಸಮಾಧಾನ ಹೇಳಿದರು : “ಈ ಅಭಿಮಾನ ವೇನೋ ಒಳ್ಳೆಯದು. ಆದರೆ ಯಾರೊಬ್ಬರೂ ತಾನೇ ಸರ್ವಶ್ರೇಷ್ಠನೆಂದು 9 84