ಪುಟ:Kannada-Saahitya.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ ಬಾಹುಬಲಿ ಭಾವಿಸಬಾರದು, ದೊಡ್ಡವರಿಗೂ ದೊಡ್ಡವರಿದ್ದೇ ಇರುವರು. ಈತ ಸಾಮಾನ್ಯನಲ್ಲ ; ಚಕ್ರವರ್ತಿ, ಬಲಸ್ಸನೊಡನೆ ಕಾಳಗ ಸಲ್ಲದು. ಆದ ರಿಂದ ಸಾಮವೇ ಸರಿ” ಎಂದು ತಿಳಿಯಹೇಳಿದರು. - ಮಾಗಧಾಮರನು ನಿಜವನ್ನರಿತು ಗರ್ವ ವುಡುಗಿ ಭರತೇಶನನ್ನು ಬಂದು ಕಂಡನು, ಕೈಗಾಣಿಕೆಗಳನ್ನು ಸಮರ್ಪಿಸಿ ಆತನಿಗೆ ಅಧೀನನಾದನು. ಭರತನೂ ಮಾಗಧನನ್ನು ಉಚಿತ ಮರ್ಯಾದೆಗಳಿ೦ದ ಸಂತೋಷಪಡಿಸಿದನು. ವಿಜಯಾರ್ಧ ಸರ್ವತವನ್ನು ದಾಟಿದ್ದು ಮಾಗಧನನ್ನು ಜಯಿಸಿ ಮರಳಿದ ಭರತೇಶನು ದಕ್ಷಿಣಮುಖವಾಗಿ ತಿರುಗಿ ನಾನಾ ದೇಶಗಳನ್ನು ಗೆಲ್ಲುತ್ತ ಮುಂಬರಿದನು. ದಕ್ಷಿಣ ಪಶ್ಚಿಮ ಸಮುದ್ರಗಳ ನಡುಗಡ್ಡೆಗಳಲ್ಲಿದ್ದ ನರತನು ಪ್ರಭಾಸಾಮರರನ್ನೂ ಮಾಗಧ ನನ್ನು ಗೆದ್ದ ರೀತಿಯಲ್ಲಿ ಅಡಿಗೆರಗಿಸಿಕೊಂಡನು. ಬಳಿಕ ಸಿಂಧನದಿಯನ್ನನು ಸರಿಸಿ ಉತ್ತರಾಭಿಮುಖವಾಗಿ ನಡೆದು ವಿಜಯಾರ್ಧ ಪರ್ವತದ ತಪ್ಪಲಿಗೆ ಬಂದು ಸೇರಿದನು, * ವಿಜಯಾರ್ಧ ಕುಮಾರನು ಚಕ್ರವರ್ತಿಯನ್ನಾದರಿಸಿ ಅಭಿಷೇಕ ಮಾಡಿದನು. ಭರತವರ್ಷದ ನಟ್ಟನಡುವೆ ಪೂರ್ವ ಪಶ್ಚಿಮ ಸಮುದ್ರಗಳ ವರೆಗೂ ಹಬ್ಬಿ ಅದನ್ನು ಉತ್ತರ ದಕ್ಷಿಣ ಭಾಗಗಳಾಗಿ ವಿಂಗಡಿಸುವುದು ಆ ವಿಜ ಯಾರ್ಧ ಪರ್ವತ, ಅಲ್ಲಿ ಬೀಡು ಬಿಟ್ಟಿದ್ದಾಗ ಗಂಗಾ ಸಿಂಧೂನದಿಗಳ ಮಧ್ಯ ಪ್ರದೇಶದ ರಾಜರೆಲ್ಲ ಭರತನನ್ನು ಬಂದು ಕೂಡಿಕೊಂಡರು. ವೃಷಭದೇವ ನಲ್ಲಿದ್ದ ಗೌರವದಿಂದಲೂ ತಮ್ಮ ನನ್ನೈನಿಂದಲೂ ಭರತನಿಗೆ ಅಧೀನರಾದರು. ದಕ್ಷಿಣ ಭರತವನ್ನೆಲ್ಲ ಗೆದ್ದ ಮೇಲೆ ಭರತನ ದೃಷ್ಟಿ ಉತ್ತರಕ್ಕೆ ಹೊರ ಳಿತು. ಆದರೆ ವಿಜಯಾರ್ಧ ಪರ್ವತವನ್ನು ದಾಟುವುದಸಾಧ್ಯ. 'ತಮಿತ್ರ ಗುಹೆ ” ಯೆಂಬ ಒಂದು ಗುಹೆಯೊಳಗೆ ಬೇಕು, ಆ ಗುಹೆಯ ಬಾಗಿಲು ಆ ಬಿಟ್ಟಿದೆ. ಏನು ಮಾಡುವುದೆಂದು ಯೋಚಿಸುತ್ತಿರುವಷ್ಟರಲ್ಲಿ ಅಲ್ಲಿನವನಾದ

  1. ಆ ಪರ್ವತದ ಅಭಿವಾನಿದೇವತೆ.