ಪುಟ:Kannada-Saahitya.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಕೃತಮಾಲನೆಂಬ ಅಮರನೊಬ್ಬನು ಬಂದು ಆ ಗವಿಯ ಬಾಗಿಲು ತೆರೆಯುವ ಗುಟ್ಟನ್ನು ತಿಳಿಸಿ ಕೊಟ್ಟನು.

  • ಚಕ್ರವರ್ತಿಯು ಅವನ್ನೆಲ್ಲ ಸೇನಾಪತಿಗೆ ತಿಳಿಯ ಹೇಳಿದನು. ಆತನು ತುರಂಗ ರತ್ನ ವನ್ನೇರಿ ನಡೆದು ವಜ್ರ ಕವಾಟವನ್ನು ದಂಡರತ್ನ ದಿಂದ ಗಟ್ಟಿ ಯಾಗಿ ಬಡಿದನು. ತಕ್ಷಣ ಬೆಟ್ಟ ಬಿರಿದು ಬಾಯ್ದಿಡುವುದೋ ಎಂಬಂತೆ, ನೆಲ ನೊಂದು ನರಳುವುದೋ ಎಂಬಂತೆ, ಅದ್ಭುತವಾದ ಅಬ್ಬರ ಕೇಳ ಬಂತು. ವಜ್ರದರೆಗಳು ಪಕ್ಕಕ್ಕೆ ಸರಿದು ನಿಲ್ಲಲು ಒಳಗಿನಿಂದ ಬೆಂಕಿಯುರಿ ಭುಗಿಲೆಂದು ಹೊರಹೊಮ್ಮಿತು, ಅಶ್ವರತ್ನ ಒಂದೇ ಹಾರಿಗೆ ಹನ್ನೆರಡು ಯೋಜನ ಹಾರಿ ದೂರ ಸರಿಯಿತು.

ಆ ಬಳಿಕ ಸೇನಾಪತಿಯು ಪಶ್ಚಿಮ ಮೇಚ್ಛಖಂಡದ ಮೇಲೆ ದಂಡೆತ್ತಿ ನಡೆದನು, ಆ ಖಂಡವನ್ನೆಲ್ಲ ಮೂರು ಸಾರಿ ಬಳಸಿ ಅಲ್ಲಿನ ರಾಜಾಧಿರಾಜ ರನ್ನೆಲ್ಲ ಗೆದ್ದು, ಮುಖ್ಯರಾದವರನ್ನು ಮುಂದಿಟ್ಟು ಕೊಂಡು ಭರತಚಕ್ರ ವರ್ತಿಯ ಸನ್ನಿಧಿಗೆ ಕರೆತಂದನು, ಅಷ್ಟರಲ್ಲಿ ಆರು ತಿಂಗಳು ಕಳೆಯಿತು, ಗುಹೆಯ ಬೆಂಕಿಯೂ ಆರಿತ್ತು. ತಮಿಸ್ರಗುಹೆ ಹನ್ನೆರಡು ಯೋಜನ ಅಗಲವಾಗಿ ಎಂಟು ಯೋಜನ ಎತ್ತರವಾಗಿ ಕತ್ತಲೆ ತುಂಬಿ ಬಹು ಭಯಂಕರವಾಗಿತ್ತು. ಅದರ ನಡುವೆ ಸಿಂಧೂನದಿ ಅಂತರ್ಗಾಮಿಯಾಗಿ ಹರಿಯುತ್ತಿತ್ತು, ಭರತ ಚಕ್ರವರ್ತಿ ಆದರ ಬಾಗಿಲ ಬಳಿ ತಕ್ಕ ಕಾಸನ್ನೆರ್ಪಡಿಸಿ ಪಡೆ ಮುನ್ನುಗ್ಗಲೆಂದು ಅಪ್ಪಣೆಮಾಡಿ ದನು. ಒಳಗಿನ ಕಗ್ಗತ್ತಲೆಯನ್ನು ಕಂಡು ಪಡೆ ನಡುಗಿ ಹಿಂಜರಿಯಿತು. ಆಗ ಪುರೋಹಿತನು ಗವಿಯ ಇಕ್ಕೆಲದ ಗೋಡೆಗಳಲ್ಲೂ ಕಾಕಿಣಿ ರತ್ನಗಳನ್ನು ಮೆಟ್ಟಿಸಿ ಸೂರ್ಯ ಚಂದ್ರಮಂಡಲಗಳನ್ನು ಯೋಜನಕ್ಕೊಂದರಂತೆ ರಚಿಸಿ ದನು. ಅವುಗಳ ಬೆಳಕಿನಲ್ಲಿಯೂ ಚಕ್ರರತ್ನದ ಉಜ್ವಲ ಕಾಂತಿಯಲ್ಲಿಯೂ ಕತ್ತಲೆಯೆಲ್ಲ ಕರಗಿ ಹೋಯಿತು. ಸೇನೆ ನಿರಾತಂಕವಾಗಿ ಗವಿಯನ್ನು ಪ್ರವೇ ಶಿಸಿ ಎರಡಾಗಿ ಒಡೆದು ಸಿಂಧೂನದಿಯ ಇಕ್ಕೆಲಗಳಲ್ಲೂ ಮುಂದುವರಿಯ ತೊಡಗಿತು. ಗುಹೆಯಲ್ಲಿ ಅರ್ಧದಷ್ಟು ದೂರ ಸಾಗಿದ ಮೇಲೆ ಮತ್ತೊಂದು ತೊಂದರೆ ಅಡ್ಡಬಂತು. ಗುಹೆಯ ಗೋಡೆಯ ಎರಡು ಕಡೆಗಳಿಂದಲೂ ಎರಡು ನದಿ