ಪುಟ:Kannada-Saahitya.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ-ಬಾಹುಬಳಿ ಗಳು ಹರಿದು ಬಂದು ಸಿಂಧುವಿಗೆ ಕೊಡುತ್ತ ದಾರಿಯನ್ನು ಕಟ್ಟಿಬಿಟ್ಟಿವೆ. ಒಂದರ ನೀರು ತಳದ ಮರಳನೂ ಹೊತ್ತು ಮೇಲಕೆ ನೆಗೆಯುವುದು : ಇನ್ನೊಂದರ ನೀರು ಚೂರು ಚೆಂಡು ಬಿದ್ದರೂ ಅದನ್ನು ತಳಕ್ಕೆ ಮುಳುಗಿಸಿ ಬಿಡುವುದು. ಈ ವಿಚಿತ್ರದ ಹೊಳೆಗಳನ್ನು ಹಾಯುವುದು ಹೇಗೆಂದು ಬಗೆ ಹರಿಯಲಿಲ್ಲ. ಚಕ್ರವರ್ತಿ ಸ್ಥಪತಿರತ್ನ ನಿಗೆ ಹೇಳಿಕಳಿಸಿದನು. ಆತ ಬಂದು ಚೆನ್ನಾಗಿ ಪರೀಕ್ಷಿಸಿ ಗಾಳಿಯ ವಿಚಿತ್ರ ಗತಿಯಿಂದ ಅಂಥ ವೈಚಿತ್ರ್ಯವುಂಟಾಗಿದೆ ಯೆಂದರಿತು ಬಿನ್ನಯಿಸಿದನು. ಬಳಿಕ ಅಮಾನುಷಾರಣ್ಯಗಳಿಂದ ಮರ ಗಳನ್ನು ತರಿಸಿ ನದಿಗಳಿಗೆ ಸೇತುವೆ ಕಟ್ಟದನು. ಸೇನೆ ಸೇತುವೆಯ ಮೇಲೆ ಸರಾಗವಾಗಿ ನಡೆಯಿತು, ತಮಸ ಗುಹೆಯ ಉತ್ತರ ದ್ವಾರವನ್ನು ಅನಾಯಾಸವಾಗಿ ತೆಗೆದು ಚಕ್ರವರ್ತಿ ಉತ್ತರ ಭರತಕ್ಕೆ ಪ್ರವೇಶ ಮಾಡಿದನು. ಉತ್ತರ ಭರತ ವಿಜಯ ಮೊದಲು ಸಿಂಧೂನದಿಯ ಪಶ್ಚಿಮ ಖಂಡವನ್ನು ಮುತ್ತಿ ಅಲ್ಲಿನ ದೊರೆ ಗಳನ್ನೆಲ್ಲ ಸೇನಾಪತಿಯೇ ಗೆದ್ದು ಬಂದನು. ತರುವಾಯ ಭರತ ಚಕ್ರ ಶ್ವರನು ಮಧ್ಯಮ ಖಂಡಕ್ಕೆ ನುಗ್ಗಿ ದನು. ಅಲ್ಲಿ ಬಳಾಕಾವರ್ತರೆಂಬ ಇಬ್ಬರು ಮೇಚ್ಛರಾಜರು ಮಲೆತು ನಿಂತರು. ತಮ್ಮ ಬಲಗಳನ್ನೊಂದುಗುಡಿಸಿ ಚಕ್ರ ವರ್ತಿಯನ್ನು ಲೆಕ್ಕಿಸದೆ ಯುದ್ಧಕ್ಕೆ ಸಿದ್ಧರಾದರು. ಅವರ ಮಂತ್ರಿಗಳು ಆಲೋಚನೆ ಮಾಡಿ, ಈತನು ವಿಜಯಾರ್ಧ ಪರ್ವತವನ್ನು ದಾಟಿ ಬಂದಿರು ವುದರಿಂದ ಮಹಾಮಹಿಮನೇ ಆಗಿರಬೇಕು, ಈತನೊಡನೆ ಎದುರು ನಿಂತು ಕಾದುವುದು ಉಚಿತವಲ್ಲ. ಗಹನವಾದ ನಮ್ಮ ದುರ್ಗಗಳಲ್ಲಿ ನೆಲೆ ನಿಂತು ಈತನ ಸೈನ್ಯಕ್ಕೆ ಕಿರುಕುಳ ಕೊಡೋಣ. ನಮ್ಮ ದುರ್ಗಗಳ ಮೇಲೆ ದಂಡು ನುಗ್ಗಿಸಿದರೆ ಅದರ ಆಟ ಸಾಗದು ” ಎಂದು ಸಲಹೆ ಹೇಳಿದರು. ಬಳಾಕಾ ವರ್ತಕು ಅದೇ ನೀತಿಯನ್ನನುಸರಿಸಿದರು. ದುರ್ಗದ ರಕ್ಷಣೆ ಹೊಂದಿದ ಬಳಾಕಾವರ್ತರು ತಮ್ಮ ಕುಲದೇವತೆ ಗಳಾದ ಮೇಘಮುಖರೆಂಬ ನಾಗದೇವತೆಗಳನ್ನು ಪೂಜಿಸಿ ಪ್ರಾರ್ಥಿಸಿ ಕೊಂಡರು. ಆ ನಾಗದೇವತೆಗಳು ಅದ್ಭುತ ಮೇಘಾಕಾರದಿಂದ ಬಂದು