ಪುಟ:Kannada-Saahitya.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ-ಬಾಹುಬಲಿ { ಪ್ರಯಾಣ ಮಾಡಿತು. ವಿಜಯಾರ್ಧ ಪರ್ವತದ ಪೂರ್ವದ ಕಡೆ ಇರುವ * ಕಾಂಡಕ ಪ್ರಪಾತ' ಗುಹೆಯ ಬಳಿ ಬೀಡುಬಿಟ್ಟಿತು. ಸೇನಾಪತಿಯು ಹಿಂದಿನಂತೆಯೇ ಗುಹೆಯ ಬಾಗಿಲನ್ನು ತೆರೆದು ಬೆಂಕಿ ಆರುವ ವರೆಗೂ ಪೂರ್ವ ಮೇಚ್ಚ ಖಂಡವನ್ನು ಗೆಲ್ಲಲು ನಡೆದನು. ಆ ಆ ಸಮಯದಲ್ಲಿ ಸಮಸ್ತ ವಿದ್ಯಾಧರ ರಾಜರೂ ನಮಿ ವಿನಮಿಗಳನ್ನು ಮುಂದುಮಾಡಿಕೊಂಡು ಬಂದು ಭರತ ಚಕ್ರವರ್ತಿಯನ್ನು ಕಂಡರು. ನಮಿ ಏನಮಿಗಳು ತಮ್ಮ * ನಂಟನ್ನು ನೆನೆದು ಭರತನಿಗೆ ತಮ್ಮ ತಂಗಿಯಾದ ಸುಭದ್ರೆಯೆಂಬ ಕನ್ಯಾರತ್ನ ವನ್ನು ಪರಮ ಸಂಭ್ರಮದಿಂದ ಮದುವೆಮಾಡಿ ಕೊಟ್ಟರು. ಸೇನಾಪತಿಯ ಮೇಚ್ಚಖಂಡವನ್ನು ಗೆದ್ದು ಬಂದನು. ದಿಗ್ವಿಜಯ ಪೂರ್ಣವಾಯಿತು. ಚಕ್ರರತ್ನ ಕಾಕಿಣಿರತ್ನಗಳ ಪ್ರಕಾಶ ದಲ್ಲಿ ಸೇನಾಸಮೇತನಾಗಿ ಭರತಚಕ್ರವರ್ತಿಯು “ ಕೌಂಡಕ ಪ್ರಪಾತ ಗುಹೆಯ ಮಾರ್ಗವಾಗಿ ವಿಜಯಾರ್ಧ ಪರ್ವತವನ್ನು ದಾಟಿ ಬಂದನು. ಅದರ ದಕ್ಷಿಣದಲ್ಲಿರುವ ಕೈಲಾಸ ಪರ್ವತದ ತಪ್ಪಲಲ್ಲಿ ಬೀಡು ಬಿಟ್ಟು, ಮತ್ತೊಮ್ಮೆ ವೃಷಭನಾಥನ ದರ್ಶನಮಾಡಿದನು. ಆದಿತೀರ್ಥಂಕರನನ್ನು ಭಕ್ತಿಯಿಂದರ್ಚಿಸಿ, ಸ್ತುತಿಸಿ ಬಳಿಕ ರಾಜಧಾನಿಗೆ ಹಿಂದಿರುಗಿದನು. ನಡೆಗೆ ತಡೆ ಪಟ್ಟಂಡ ಭರತ ಮಂಡಲವನ್ನೂ ತನ್ನ ಪರಾಕ್ರಮದಿಂದ ಅಡಿಗೆರಗಿಸಿ ಭರತ ಚಕ್ರವರ್ತಿ ಹಲವು ಪಯಣಗಳಲ್ಲಿ ಅಯೋಧ್ಯಾ ಪಟ್ಟಣದ ಬಳಿಗೆ ಬಂದನು. ಅಲ್ಲಿಯವರೆಗೂ ಎಲ್ಲಿಯೂ ನಿಲ್ಲದೆ ಹಗೆಗಳನ್ನೆಲ್ಲ ಧ್ವಂಸ ಮಾಡುತ್ತ ನುಗ್ಗುತ್ತಿದ್ದ ಚಕ್ರರತ್ನ ರಾಜಧಾನಿಯ ಬಾಗಿಲಿನಲ್ಲಿ ಅಲುಗದೆ ನಿಂತುಬಿಟ್ಟಿತು. ಪುರಪ್ರವೇಶ ಮಾಡದೆ ಚಕ್ರ ನಡೆಗೆಟ್ಟು ನಿಂತಿತೆಂಬ ಸುದ್ದಿ ಭರತ ಚಕ್ರವರ್ತಿಯ ಕಿವಿ ಮುಟ್ಟಿತು. ಆತನು ಆಶ್ಚಯ್ಯ ಪಟ್ಟು ಪುರೋಹಿತ ನನ್ನು ಕರಸಿ ಕಾರಣವೇನೆಂದು ಕೇಳಿದನು.

  • raವರು ಭರತನ ತಾಯಿ ಯಶಸ್ವತಿಯ ಅಣ್ಣಂದಿರಾದ ಕಪ್ಪ ಮಹಾತಚ್ಚರ ಮಕ್ಕಳು, ಆದಿತೀರ್ಥಂಕರನ ಸೇವಾ ಮಹಿಮೆಯಿಂದ ಅವರಿಗೆ ವಿದ್ಯಾಧರ ಪದವಿ ఉంటాయత,