ಪುಟ:Kannada-Saahitya.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ-ಬಾಹುಬಲಿ ವಾರ್ತೆ, ಇದಕ್ಕೇಕಿಷ್ಟು ಮಾತು ? - ಅವರ ಬಳಿಗೆ ನಿನ್ನ ಶಾಸನವನ್ನು ಹೊತ್ತ ಹರಿಕಾರರನ್ನು ಕಳಿಸು' ಎಂದು ಪುರೋಹಿತನು ಸಲಹೆಕೊಟ್ಟನು. ಭರತೇಶ್ವರ ಚಕ್ರವರ್ತಿಯ ಹರಿಕಾರರು ಆತನ ತಮ್ಮಂದಿರ ಬಳಿ ಹೋಗಿ, “ ಈ ಭೂಮಂಡಲ ಸಾಮ್ರಾಜ್ಯವು ನನ್ನೊಬ್ಬನ ಭೋಗಕ್ಕಾಗಿ ಮಾತ್ರವೇ ಅಲ್ಲ, ನಿಮ್ಮೆಲ್ಲರಿಗೂ ಹಿರಿಯಣ್ಣನಾದ ನಾನು ತಂದೆಯ ಸಮಾನ ವೆಂದು ತಿಳಿದು ವಿನಯವನ್ನು ತೋರಿಸಿನಾವೆಲ್ಲಾ ಒಟ್ಟಿಗೆ ಇರೋಣ, ಬನ್ನಿ' ಎಂಬ ಒಡೆಯನ ಅಪ್ಪಣೆಯನ್ನು ನೆತ್ತಿಯಲ್ಲಿ ಹೊತ್ತು ಬಂದು ಚಕ್ರ ವರ್ತಿಯ ಪಾದಕ್ಕೆರಗಿರಿ ” ಎಂದು ತಿಳಿಸಿದರು. ಅವರೆಲ್ಲರೂ ರಾಜಶಾಸನವನ್ನು ಕೇಳಿ ದೂತರಿಗೆ ಮರ್ಯಾದೆಮಾಡಿ ಕಳಿಸಿಕೊಟ್ಟರು. ಬಳಿಕ, “ಇದುವರೆಗೂ ಹಿರಿಯಣ್ಣ, ಗುರು, ತಂದ-ಎಂದು ಭರತನಿಗೆ ನಮಸ್ಕಾರ ಮಾಡುತ್ತಿದ್ದೆವು. ಈಗ ಆಳು, ಅರಸ ' ಎಂಬ ಭೇದವುಂಟಾಯಿತೆ ! ಛೇ ! ಇದೆಂಥ ಪ್ರೀತಿ ! ತಂದೆ ಕೊಟ್ಟ ರಾಜ್ಯಕ್ಕೆ ಇವ ನಿಗೆ ನಾವು ಕಿಂಕರರಾಗಬೇಕೇ ? ಇದು ಅಕ್ಕಿ ಕೊಟ್ಟು ಎಂಜಲನ್ನ ತಿಂದ ಹಾಗಲ್ಲವೆ ? ಇಂದ್ರ ವಂದಿತನಾದ ಪುರುದೇವನಿಗೆ ಮಕ್ಕಳಾಗಿ ಪರಮ ಪುರು ಷಾರ್ಥವನ್ನೇ ಪಡೆಯುತ್ತೇವೆ. ಈ ರಾಜ್ಯಭಾರ ವ್ಯರ್ಥವಾದ ಭಾರ” ಎಂದು ನಿಶ್ಚಯಿಸಿ ರಾಜ್ಯವನ್ನು ತೊರೆದು ಆದಿದೇವನ ಆಸ್ಥಾನಕ್ಕೆ ಹೊರಟು ಹೋದರು, ಹೋಗಿ, “ ದೇವಾ, ನೀನು ನನಗೆ ರಾಜ್ಯವನ್ನು ಕೊಟ್ಟೆ. ಓಡ ಹುಟ್ಟಿದ ಕಾರಣ ಭರತನು ' ನನಗೆರಗಿ ” ಎಂದು ಪೀಡಿಸುತ್ತಿದ್ದಾನೆ. ನಿನ್ನಡಿ ಗೆರಗಿದ ನಾವು ಮತ್ತಾರಿಗೂ ಎರಗಲಾರೆವು. ಆ ಭರತನನ್ನೂ ಅಡಿಗೆರಗಿಸುವ ತಪಸ್ಸನ್ನು ನಮಗೆ ದಯಪಾಲಿಸು ” ಎಂದು ಬೇಡಿ ದೀಕ್ಷೆ ಹೊಂದಿದರು. - ಬಾಹುಬಲಿಗೆ ರಾಯಭಾರ ಆ ಸುದ್ದಿಯನ್ನು ಕೇಳಿ ಭರತನಿಗೆ ಪರಮಾಶ್ಚರ್ಯವಾಯಿತು. ಅವರ ಆ ನಡವಳಿಕೆಯನ್ನು ಮನಸ್ಸಿನಲ್ಲೇ ಶ್ಲಾಘಿಸಿದನು. “ಒಬ್ಬ ತಾಯ ಹೊಟ್ಟೆ ಯಲ್ಲಿ ಹುಟ್ಟಿದವರಾದರೂ ಇವರು ನನಗೆ ಎರಗಲಿಲ್ಲ. ಇನ್ನು ಆ ಬಾಹುಬಲಿ ನನಗೆ ತಗ್ಗು ವನ ? ಸೂರ್ಯಕಾಂತಮಣಿ ಬಿಸಿಲಿಗೆ ಮಾರುರಿಯುವಂತೆ