ಪುಟ:Kannada-Saahitya.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ-ಬಾಹುಬಲಿ ಎಂದು ಓದಿದನೋ ಇಲ್ಲವೋ, ಬಾಹುಬಲಿ, “ಸಾಕು, ನಿಲ್ಲಿಸು. ಕಾರ್ ವೇನೆಂಬುದು ಆಮೇಲೆ ತಿಳಿಯಲಾಗುವುದು. ಮಹಾರಾಜನು ಅಯೋಧ್ಯಾ ಪಟ್ಟಣದಲ್ಲಿ ಸುಖವಾಗಿದ್ದಾನೆಯೇ, ಹೇಳು, ಚಕ್ರೇಶ್ವರನಿಗೆ ನಾನಾ ಚಿಂತೆ, ಹೇಗಾದರೂ ನಮ್ಮನ್ನು ನೆನೆದನಲ್ಲಾ ! ದಿಗ್ವಿಜಯ ತಡೆಯಿಲ್ಲದೆ ನಡೆಯಿ ತಷ್ಟೆ ? ಭೂವಲ್ಲಭನ ಭುಜಬಲಕ್ಕೆ ಚ್ಯುತಿಯಿಲ್ಲ ತಾನೆ ? ಅರಸುಗಳೆಲ್ಲ ತಗ್ಗಿ ಬಂದರೆಂದೂ ದಿಕ್ಕುಗಳೆಲ್ಲ ಅಳುಕಿದವೆಂದೂ ಲೋಕವೇ ಹೊಗಳುತ್ತಿರಲು ಕೇಳಿ ಆನಂದಿಸುತ್ತಿದ್ದೇವೆ. ಅಲ್ಲದೆ, ಹೇಳು, ಎಂದು ಭರತನ ದೂತನನ್ನು ಕುರಿತು ನುಡಿದನು. - ಆ ದೂತನು, “ ದೇವಾ, ನಿಮ್ಮಣ್ಣನ ದಿಗ್ವಿಜಯ ವೃತ್ತಾಂತವನ್ನು ಕೇಳಲು ನಿಮಗೆ ತುಂಬ ಆನಂದವಲ್ಲವೆ, ಅದನ್ನು ಪೂರ್ಣವಾಗಿ ವಿವರಿಸಲು ನನಗೆ ಸಾಧ್ಯವಿಲ್ಲ. ಸಂಕ್ಷೇಪವಾಗಿ ಹೇಳುತ್ತೇನೆ ಎಂದು ಚಕ್ರವರ್ತಿಯ ವಿಜಯಯಾತ್ರೆಯನ್ನು ಬಣ್ಣಿಸತೊಡಗಿದನು ; “ ನಿಮ್ಮಣ್ಣನ ಪುರು ಪರ ಮೇಶ್ವರನ ಕೇವಲ ಜ್ಞಾನಪೂಜೆಯನ್ನೂ ಚಕ್ರಪೂಚೆಯನ್ನೂ ನೆರವೇರಿಸಿ, ಸಾಹಸ ಮುಗಿಲು ಮುಟ್ಟುವಂತೆ ತನ್ನ ಪ್ರತಾಪವನ್ನು ತೋರಿಸಲೆಳಸಿ ದಿಕ್ಕಿ ಜಯಕ್ಕೆ ಹೊರಟನು. ಎದುರಿಸುವ ಜಟ್ಟಿಗರು ಯಾರೂ ಇಲ್ಲದಂತೆ ಸಕಲ ದಿಕ್ಕಕ್ರವನ್ನೂ ಗೆಲ್ಲಲು ಸಮರ್ಥವಾದ ಚಕ್ರವನ್ನೊಡಗೊಂಡು ನಡೆದನು. ಆ ವೈಭವವೇನು ಸಾಮಾನ್ಯವೇ ? ಗಿರಿದುರ್ಗ ಜಲದುರ್ಗ ವನದುರ್ಗಗಳಾವುವೂ ಆತನಿಗೆ ಅಡ್ಡಿಯಾಗ ಲಿಲ್ಲ, ಪೂರ್ವ ದಕ್ಷಿಣ ಪಶ್ಚಿಮ ಸಮುದ್ರ ತೀರಗಳ ದೇಶಾಧಿಪತಿಗಳನ್ನೆಲ್ಲ ಆಡಿಗೆರಗಿಸಿದನು. ರಥವೇರಿ ಸಮುದ್ರದಲ್ಲಿ ನುಗ್ಗಿ ಅಲ್ಲಿನ ವ್ಯ೦ತರಾಮರರನ್ನು ಬಾಣವೊಂದರಿಂದಲೆ ಗೆದ್ದು ಬಂದನು, ವಿಜಯಾರ್ಧಕುಮಾರನನ್ನೂ ಕೃತ ಮಾಲಾಮರನನ್ನೂ ಅಧೀನಮಾಡಿಕೊಂಡನು. ತಮಿಶ್ರಗುಹೆಯ ಮ ಕವಾಟವನ್ನು ಭೇದಿಸಿದನು. ಉತ್ತರಭರತದಲ್ಲಿ ಮಾರಾಂತ ಬಲಾಕಾವರ್ತ ರನ್ನೂ ಅವರ ನೆರವಿಗೆ ಬಂದ ಮೇಘಮುಖರನ್ನೂ ಆಡಗಿಸಿದನು, ಸಿಂಧೂ ದೇವಿಯಿಂದ ಅಭಿಷೇಕಗೊಂಡು ಹಿಮವತ್ಕುಮಾರನ ಕಾಣಿಕೆಯನ್ನು ಸ್ವೀಕ ರಿಸಿ ವೃಷಭಾದ್ರಿಯಲ್ಲಿ ಅಪ್ರತಿಹತವಾದ ತನ್ನ ವಿಜಯದ ಪ್ರಶಸ್ತಿಯನ್ನು ಕೆತ್ತಿ ಸಿದನು. ಬಳಿಕ ಗಂಗಾದೇವಿಯೊಪ್ಪಿ ಒದ ಅನರ್ಘರತ್ನಗಳನ್ನು ಸ್ವೀಕರಿಸಿ