ಪುಟ:Kannada-Saahitya.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________


ಕನ್ನಡ ಸಾಹಿತ್ಯ ಚಿತ್ರಗಳು ನಖ ವಿನಮಿ ಮೊದಲಾದ ವಿದ್ಯಾಧರರನ್ನೆಲ್ಲ ಆಜ್ಞಾ ವಿಧೇಯರನ್ನಾಗಿ ಮಾಡಿ ದನು. ಕಡೆಗೆ ಕಾಂಡಕ ಪ್ರಪಾತ ಗುಹೆಯ ವಜ್ರದ ಬಾಗಿಲನ್ನು ಭೇದಿಸಿ ಕೊಂಡು ವಿಜಯರ್ಧ ಪರ್ವತವನ್ನು ದಾಟಿ ಬಂದನು. ಹೀಗೆ ದೇವಾಸುರ ಖೇಚರಾದಿಗಳನ್ನೆಲ್ಲ ಆಜ್ಞಾವರ್ತಿಗಳಾಗಿ ಮಾಡಿಕೊಂಡು ದಿಗ್ವಿಜಯವನ್ನು ಪೂರ್ಣಮಾಡಿದನು. ರಾಜಧಾನಿಗೆ ಹಿಂದಿರುಗಿ ಆ ಭರತ ಚಕ್ರವರ್ತಿ, ' ನನ್ನ ಪ್ರಿಯ ತಮ್ಮ ನಿಲ್ಲದೆ ಈ ಸಾಮ್ರಾಜ್ಯವೆಲ್ಲ ಬಿಮ್ಮೆನಿಸುತ್ತಿದೆ. ಅವನೊಬ್ಬ ನನಗೆರಗದಿದ್ದರೆ ಈ ಚಕ್ರವರ್ತಿ ಪದವಿಯೂ ದೊಡ್ಡದಲ್ಲ' ಎಂದು ಬೆಸಸಿ ನನ್ನನ್ನು ತಮ್ಮಲ್ಲಿಗೆ ಅಟ್ಟಿದನು. ಸಹಜ, ಕೃತ್ರಿಮ-ಎಂದು ವಿನಯ ಎರಡು ವಿಧ. ಅವೆರಡೂ ತಿಳಿದವರನ್ನು ಬೇರೆ ಬೇರೆ ರೀತಿಯಿಂದ ಮೆಚ್ಚಿ ಸುವುವು. ದೇವಾ, ನಿನ್ನಲ್ಲಿ ಆವೆರಡೂ ಉಂಟು” ಎಂದು ನುಡಿದು ಸುಮ್ಮನಾದನು. ಬಾಹುಬಲಿಯ ದರ್ಪೂಕ್ಕಿ ದೂತನ ಆ ಮಾತುಗಳನ್ನು ಕೇಳಿ ಬಾಹುಬಲಿಯ ಕ್ರೋಧ ಉಕ್ಕೇ ರಿತು, ಕೋಪವನ್ನೊಳಗೊಂಡ ಮುಗುಳುನಗೆ ನಕ್ಕು ಹೇಳತೊಡಗಿದನು :

  • ನಮ್ಮ ಮನಸ್ಸನ್ನರಿಯಲು ಮೊದಲು ಸಾಮವನ್ನು ನುಡಿದೆ. ಆಮೇಲೆ ಭೇದ ದಂಡಗಳನ್ನೂ ಸೂಚಿಸಿದೆ. ತಿದ್ದಿ ಅಚ್ಚು ಕಟ್ಟಾಗಿ ಆಡುವ ಮಾತಿನ ಬಳ್ಮೆ ನಿನಗೆ ಚೆನ್ನಾಗಿದೆ. - ನಿನ್ನ ದೊರೆಯ ದಿಗ್ವಿಜಯದ ಉನ್ನತಿಯನ್ನು ಹೊಗಳಿ ಹೊಗಳಿ ಮೈ ಮರೆತುಹೋದೆಯಲ್ಲವೆ ! ಅದು ಅವನ ಭಂಗವನ್ನ ಎತ್ತಿ ತೋರಿಸುವಂತಾ ಯಿತು. ಚಕ್ರವನ್ನು ಮುಂದಿಟ್ಟು ಕೊಂಡು ಲೋಕವನ್ನೆಲ್ಲ ಸುತ್ತಿ ತೊಳಲಿ ದ್ದನ್ನೂ, ತಾನು ಹೂಳದ ನಿಧಿಯನ್ನು ಕಿತ್ತು ತಂದಂತೆ ವಸ್ತುಗಳನ್ನು ಹೊತ್ತು ತಂದದ್ದನ್ನೂ ಏನೆಂದು ಹೊಗಳುವೆಯೋ ಕಾಣೆ, ಸಮುದ್ರದ ದಡ ದಲ್ಲಿ ಹಸಿದು ಬಿದ್ದಿದ್ದು ಉದಕಮಂತ್ರದ ಬಲದಿಂದ ಕಡಲಿನಲ್ಲಿ ನುಸುಳಿದಾಗ ಅಮರರು ಕರುಣೆಯಿಂದ ಅವನಿಗೆ ಧನವನ್ನು ಕೊಟ್ಟರು ; ಅಂಜಿ ಕೊಟ್ಟರೆ ? ಉತ್ತರ ಭರತದಲ್ಲಿ ಅವನಿಗೆ ಆದ ಆಪತ್ತು ನಿನಗೆ ತಿಳಿಯದೆಂದು ತೋರು ಇದೆ, ಬಳಕಾವರ್ತರು ಮುತ್ತಿ ಇವನ ಪಡೆ ಗೋಳು ಕರೆಯುವಂತೆ ಮಾಡ