ಪುಟ:Kannada-Saahitya.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ-ಬಾಹುಬಲಿ ಅಲ್ಲವೇ ? ಮೇಘಮುಖರ ಜಲವರ್ಷದಲ್ಲಿ ಕೊಡಚರ್ಮಗಳ ಮರೆಹೊಕ್ಕು ಗೂಡು ಹೊಕ್ಕಂತೆ ಅಡಗಿದ್ದ ನಮ್ಮ ಗ್ರಜನ ದಿಗ್ವಿಜಯ ಪರಾಕ್ರಮ ಬಹು ಮಹತ್ವದ್ದೇ ಸರಿ ! ತನ್ನ ಪ್ರಶಸ್ತಿಯನ್ನು ಕೆತ್ತಿಸಿದನೆಂದೆ. ಪೂರ್ವ ಚಕ್ರ ವರ್ತಿಗಳ ಪ್ರಶಸ್ತಿಯನ್ನಳಿಸಿಯಲ್ಲವೇ, ತನ್ನದನ್ನು ಕೆತ್ತಿಸಿದ್ದು ? ಯಶಸ್ಸೇ ನಿಜವಾದ ಧನ, ಅದನ್ನು ಈ ರೀತಿ ಅಳಿಸಿ ಕೆಡಿಸಿದವನು ಪಡೆದ ಧನ ಅದೆಂಥ ಧನ ? ಹಿರಿಯಣ್ಣನಿಗೆ ಪ್ರೀತಿಯಿಂದ ಎರಗುವುದೇನವಮಾನವಲ್ಲ. ಆದರೆ ಅವನು ನೆತ್ತಿಯ ಮೇಲೆ ಕತ್ತಿಯ ಬಲದಿಂದ ಎರಗಿಸಕೊರಟಿದ್ದಾನೆ. ಹೀಗಿರುವಾಗ ನಾವು ಭರತನಿಗೆರಗುವುದು ಹೇಡಿತನವಾದೀತು, ಅಣ್ಣ ತಮ್ಮಂ ದಿರು ಹೊಂದಿಕೊಂಡಿದ್ದರೆ ವಿನಯ, ಪ್ರೀತಿ---ಎಲ್ಲ ಒಪ್ಪುತ್ತದೆ. ಈಗ ಭರ ತನು ನನ್ನ ಹೆಸರು ಕೇಳಿದರೂ ಸೈರಿಸಲಾರ. ಅ೦ಥವನಿಗೆ ತಲೆಬಾಗಿ ಲೋಕ ದಿಂದ ನಗಿಸಿಕೊಳ್ಳುವವನಲ್ಲ, ನಾನು, ಭರತನು ಷಟ್ಟಂಡ ಚಕ್ರವರ್ತಿಯೆಂಬ ವೈಭವವನ್ನು ದೂರದಲ್ಲಿ ಕೇಳಿ ವಿಶ್ವಾಸದಿಂದಿರುವ ಈ ಬಂಧುತ್ವ ವೇ ಸಾಕು, ಕರೆದರೆ ಏನಪ್ಪಣೆ ? ಎನ್ನು ವ ' ಜೀಯ, ದೇವಾ, ಮಹಾಪ್ರಸಾದ' ಎನ್ನುವ ದೈನ್ಯಕ್ಕೆ ನಾನು ಮೈಯೊಡು ನವನಲ್ಲ, ಆಳು, ಅರಸ' ಎಂಬ ಭೇದ ನಮಗೇಕೆ ? ಆದಿದೇವನಾದ ಪುರುದೇವನು ಕೊಟ್ಟಿರುವ ರಾಜ್ಯಕ್ಕೆ ಯಾರ ಹಂಗೇನು ? ತಂದೆ ರಾಜ್ಯವನ್ನು ಕೊಟ್ಟಾಗ ನನಗೂ ಅವನಿಗೂ ಇಬ್ಬರಿಗೂ ' ರಾಜ' ಎಂಬ ಹೆಸರನ್ನು ಕೊಟ್ಟನು. ಈಗ ತಾನು ' ರಾಜಾಧಿರಾಜ 'ನೆಂಬ ಹೆಮ್ಮೆಯ ಹೆಸರನ್ನಿಟ್ಟುಕೊಂಡಿದ್ದಾನೆ! ಚಕ್ರ ಹುಟ್ಟ ಚಕ್ರವರ್ತಿಯಾದ ಮಾತ್ರಕ್ಕೆ ನನ್ನ ಮೇಲೇಕೆ ಈ ಆಕ್ರಮಣವನ್ನು ತೋರಬೇಕು ? ಹುರು ಇಲ್ಲದ ಈ ಮಾತನ್ನು ಸರಿಸಮನಾದ ನನಗೆ ಹೇಳುವುದೆ ? ಭರತ ಬಾಹುಬಲಿ ಗಳಿಬ್ಬರೂ ಪುರುತನಯರು. ಅವರಲ್ಲಿ ಯಾರಳವು ಎಷ್ಟೆಂಬುದನ್ನು ಲೋಕ ವರಿಯುವಂತೆ ತೂಗಿ ತೋರಿಸುವ ತಕ್ಕಡಿ ಈ ನನ್ನ ತೋಳು, ಪಟ್ಟಂಡ ಭೂಮಂಡಲವನ್ನೂ ಗೆದ್ದ ಅಖಂಡಪ್ರತಾಪನಾದ ಚಕ್ರ ವರ್ತಿಯು, ತನ್ನ ಆರು ಬಲಗಳನ್ನೂ ಕೂಡಿಕೊಂಡು ಬರಲಿ, ಪ್ರಾಣಪ್ರಿಯ