ಪುಟ:Kannada-Saahitya.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ರಾದ ಹೆಂಡಿರು ಮಕ್ಕಳಲ್ಲೂ ಧನಸಮೂಹದಲ್ಲ ಆಸೆ ತೊರೆದು ಕಾಳಗಕ್ಕೆ ಬರಲಿ, ಯಾರು ಹೆಚ್ಚು ಎನ್ನುವುದನ್ನು ನೀನು ಕಾಣುತ್ತೀಯೆ.” ಹೀಗೆ ದರ್ಫೋಕ್ತಿಗಳನ್ನಾಡಿ ಚಕ್ರವರ್ತಿಯ ದೂತನನ್ನು ಉಚಿತ ರೀತಿ ಯಲ್ಲಿ ಸತ್ಕರಿಸಿ ಹಿಂದಕ್ಕೆ ಕಳಿಸಿದನು. ಯುದ್ಧ ಸನ್ನಾಹ ಆ ದೂತನು ಸಾಕೇತಪುರವನ್ನು ಸೇರಿ ಆಸ್ಥಾನದಲ್ಲಿದ್ದ ಚಕ್ರವರ್ತಿ ಯನ್ನು ಕಂಡು ನಮಸ್ಕರಿಸಿ ನಡೆದದ್ದನ್ನೆಲ್ಲ ವಿವರಿಸಿದನು. “ ರಾಜಾಧಿರಾಜಾ, ಪಟ್ಟಂಡ ಭೂಮಂಡಲವೂ ನಿನ್ನಡಿಗೆರಗಿದ್ದು ಸಾಲದೆ ? ಮಿತಿಮೀರಿದ ಈ ಹಗಾರನಿಂದೇನೆಂದು ಕಡೆಗಣಿಸಿ ಸುಮ್ಮನಿದ್ದು ಬಿಡುವುದು ಉಚಿತ. ಹಾಗೆ ಮಾಡಿದರೆ ಮರ್ಯಾದೆಯನ್ನು ಕಾದ ನಿಮ್ಮ ದೊಡ್ಡತನ ಲೋಕದಲ್ಲೆಲ್ಲ ಹರಡುವುದು. ನೀವು ಕೋಪಗೊಂಡರೆ ನಿಮ್ಮ ತಮ್ಮ ನಿನಗೆರಗುವುದಿಲ್ಲ. ಇದು ನಿಜ. ಎಂದು ನುಡಿದನು. ಕೇಳಿ ಚಕ್ರವರ್ತಿ, “ ನಮ್ಮ ದಿಗ್ವಿಜಯ ತುದಿಮುಟ್ಟಿತು. ಈಗ ನಮ್ಮ ದಾಯದನು ನನ್ನೊಡನೆ ಕಾದಬೇಕೆಂದು ಉಬ್ಬಿ ನಿಂತಿದ್ದಾನೆ. ಕದನ ಬೇಡವೆಂದು ಬಿಡುವುದು ಕ್ರಮವಲ್ಲ. ಅವನ ಭುಜಬಲವನ್ನೂ ನೋಡೋಣ? ಎಂದು ಆಸ್ಥಾನದಿಂದ ಎದ್ದನು. ಭರತ ಬಾಹುಬಲಿಗಳಿಬ್ಬರೂ ಸೇನೆಗಳನ್ನು ಸಿದ್ಧಮಾಡಿಕೊಂಡರು, ಚಕ್ರವರ್ತಿಯ ವಿಜಯ ಸೈನ್ಯ ರಾಜಧಾನಿಯಿಂದ ಪೌದನಪುರಕ್ಕೆ ಪ್ರಯಾಣ ಮಾಡಿತು, ಬಾಹುಬಲಿಯ ಪಡೆ ಅದನಡ್ಡಗಟ್ಟಿತು, ಅಣ್ಣ ತಮ್ಮಂದಿ ರಿಬ್ಬರೂ ಧನುರ್ಧಾರಿಗಳಾಗಿ ಎದುರು ಬದುರು ನಿಂತರು. - ಮಂತ್ರಿಗಳ ಸಂಧಾನ ಇನ್ನೇನು ಕದನ ಮೊದಲಾಗಬೇಕು ಎನ್ನುವಷ್ಟರಲ್ಲಿ ಎರಡು ಕಡೆಯ ಮುಖ್ಯ ಮಂತ್ರಿಗಳೂ, “ ಈ ಇಬ್ಬರರಸುಗಳೊ ಚರಮ ದೇಹಧಾರಿಗಳು, ಇವರು ಯುದ್ಧಕ್ಕೆ ತೊಡಗಿದರೆ ಸಕಲ ಸೈನ್ಯವೂ ನಾಶವಾಗುವುದು. ಜನ ಸಂಹಾರಕ್ಕೆ ಕಾರಣವಾಗುವ ಯುದ್ಧ ಬೇಡ, ಧರ್ಮ ಯುದ್ಧವೇ ನಡೆಯಲಿ?