ಪುಟ:Kannada-Saahitya.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಮೊದಲು ದೃಷ್ಟಿಯುದ , ಒಬ್ಬರನ್ನೊಬ್ಬರು ಎವೆಯಿಕ್ಕದೆ ನೋಡುತ್ತ ನಿಂತರು. ಬಾಹುಬಲಿ ಕಣ್ಣಿನಲ್ಲಿ ಹೀರಿಬಿಡುವಂತೆ ಭರತನನ್ನು ಅಲುಗದೆ ನೋಡುತ್ತಿದ್ದನು. ಆ ತೇಜಸ್ಸನ್ನು ಸೈರಿಸಲಾರದೆ ಭರತರಾಜನು ಕಣ್ಣು ಮುಚ್ಚಿ ಸೋತುಹೋದನು. ಆಮೇಲೆ ಜಲಯುದ ಮೊದಲಾಯಿತು. ಮದಿಸಿದಾನೆಗಳಂತೆ ಕೊಳಕ್ಕೆ ನುಗ್ಗಿ ಒಬ್ಬರಮೇಲೊಬ್ಬರು ನೀರೆರಚತೊಡಗಿದರು. ಭರತನ ಮುಖದಲ್ಲಿ ಹಬ್ಬಿದ ಕೋಪದ ಬೆಂಕಿಯನ್ನು ಆರಿಸುವವನ ಕಾಗೆ ಬಾಹುಬಲಿ ಅವನ ಮುಖಕ್ಕೆ ತಿಳಿನೀರು ತುಳುಕಿದನು. ಭರತೇಶ್ವರನೆರಚಿದ ನೀರು ಬಾಹು ಬಲಿಯ ಎದೆಗೆ ಮಾತ್ರ ತಾಕಿತು, ಆನೆಯ ಸೊಂಡಿಲಿನಂತಿರುವ ಬಾಹು ಬಲಿಯ ಕೈ ಎರಚನ ನೀಲೇಔಗೆ ಮುಖವೊಡ್ಕಲಾರದೆ ಚಕ್ರವರ್ತಿ ಮುಖದಿರುಹಿದನು . ಕಡೆಯದಾಗಿ ಬಾಹು ಯುದ್ಧ ಪ್ರಾರಂಭವಾಯಿತು. ಅವರಿಬ್ಬರ ಹೋರಾಟವನ್ನೂ ನೋಡಿ ಎರಡು ಕಡೆಯಲ್ಲ ನೆರೆದ ಸುರ ನರ ವಿದ್ಯಾಧರ ಬಲವೆಲ್ಲ ಬೆರಗಾಯಿತು. ಕಡೆಗೆ ಬಾಹುಬಲಿ ಭರತನನ್ನು ಹಿಡಿದೆತ್ತಿ ಬೀಸಿ ಸುತ್ತಿಸಿದನು. ಹೊಂಬೆಟ್ಟವನ್ನು ಹೊತ್ತ ಪಚ್ಚೆಯ ಬೆಟ್ಟವೋ ಎಂದು ತೋರುತ್ತಿದ್ದನು. ಹಾಗೆ ಎತ್ತಿ ಹಿಡಿದುಕೊಂಡು, ಇವನು ಭರತ ಭೂಮಿ ಗೆಲ್ಲ ಒಡೆಯ. • ಹಿರಿಯಣ್ಣ, ಆದ್ದರಿಂದ ಗುರು. ಮಹಾಮಹಿಮನಾದ ಇವ ನನ್ನು ನೆಲಕ್ಕೆ ಕೆಡವಿ ಭಂಗಪಡಿಸುವುದು ಸರಿಯಲ್ಲ ಎಂದು ಭಾವಿಸಿ ಭರ ತನನ್ನು ಮೆಲ್ಲಗೆ ನೆಲಕ್ಕಿಳಿಸಿದನು. ಬಾಹುಬಲಿಯ ಪಡೆ ಉಬ್ಬಿ ನಿಜಯಘೋಷಣೆ ಮಾಡಿತು. ಭರತನ ಬಲ ಕಳೆಗೆಟ್ಟು ತಲೆ ತಗ್ಗಿಸಿತು. ನೆರೆದ ಎರಡು ಬಲಗಳೆದುರಿಗೆ, ಅಷ್ಟು ಮಂದಿ ಆರಸುಗಳ ಮುಂದೆ, ತನಗೆ ಹಾಗೆ ಸೋಲಾಗಲು ಭರತನು ಕೋಪದುರಿಗಳನ್ನು ಗುಳತೊಡಗಿದನು. ಚಕ್ರರತ್ನವನ್ನು ನೆನೆದು ಬಾಹುಬಲಿಯನ್ನು ತಾಗುವಂತೆ ಅಪ್ಪಣೆಮಾಡಿದನು. ಚಕ್ರವರ್ತಿ ನೆನೆದ ಕೂಡಲೆ ಚಕ್ರರ ಮುಂದೆ ಬಂದಿತು. ಆದರೆ ಆ