ಪುಟ:Kannada-Saahitya.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ-ಬಷುಬಲಿ ಅಪ್ಪಣೆಯನ್ನು ನಡಸಲಾರವಾಯಿತು. ಅದು ಬಾಹುಬಲಿಗೆ ಮೂರು ಸಾರಿ ಪ್ರದಕ್ಷಿಣೆ ಮಾಡಿ ಅವನ ಬಲಭುಜದ ಪಕ್ಕದಲ್ಲಿ ನಿಂತುಬಿಟ್ಟಿತು. ಆಗ ಬಾಹುಬಲಿಯ ಕೀರ್ತಿ ಲೋಕವನ್ನೆಲ್ಲ ಹಬ್ಬಿತೆಂಬಂತೆ ದೇವ ದುಂದುಭಿಗಳು ಮೊಳಗಿದವು. ದೇವಸ್ತ್ರೀಯರು ಮಂಗಳ ಗೀತಗಳನ್ನು ಹಾಡಿ ದರು. ಸಂತುಷ್ಟರಾದ ದೇವತೆಗಳ ಆನಂದಬಾಷ್ಪದ ಸುರಿಮಳೆಯೊ ಎಂಬಂತೆ ಪುಷ್ಪವೃಷ್ಟಿ ಸುರಿಯಿತು, ಭರತನ ಲಜ್ಜೆ, ಬಾಹುಬಲಿಯ ತ್ಯಾಗ * ಚಕ್ರವರ್ತಿ ತನಗಲ್ಲದ್ದನ್ನು ಮಾಡಿದನಲ್ಲಾ!' ಎಂದು ಕುಲ ವೃದ್ದರೂ ಅಲ್ಲಿ ನೆರೆದ ಉಳಿದವರೆಲ್ಲರೂ ಆಡತೊಡಗಿದರು, ಕೇಳಿ ಭರತೇಶ್ವ ರನು ನಾಚಿ ತಲೆ ತಗ್ಗಿಸಿದನು. ಬಾಹುಬಲಿಗೂ ಮನಸ್ಸು ನೊಂದಿತು. “ ಭರತೇಶ್ವರನು ನನ್ನಲ್ಲ ಇಂಥ ಸಾಹಸ ಮಾಡಿದನೇ ! ಆಹಾ, ರಾಜ್ಯ ಮೋಹವನ್ನು ತೊರೆಯುವುದು ಎಷ್ಟು ಕಷ್ಟ ! ಇದು ಸೋದರರನ್ನು ಕಾಡಿಸುತ್ತದೆ ; ತಂದೆಮಕ್ಕಳಿಗೆ ಮುನಿ ಸುಂಟುಮಾಡುತ್ತದೆ. ಮನುಕುಲತಿಲಕನಾದ ಇಂಥವನನ್ನೂ ಹೀಗೆ ಮತಿ ಗೆಡಿಸಿಬಿಟ್ಟಿತು. ಇನ್ನು ದುಷ್ಟರ ವಿಚಾರವನ್ನು ಹೇಳುವುದೇನು ? ಇಂಥ ರಾಜೈಶ್ವರ್ಯವನ್ನು ತಾಳುವುದು ತಾನೆ ಹೇಗೆ ? ಎಂದು ಮುಂತಾಗಿ ಆಳವಾಗಿ ಆಲೋಚಿಸಲು ಮೊದಲುಮಾಡಿದನು. ಕಡೆಗೆ, “ ಕೆಡುವ ಒಡಲು, ಕೆಡುವ ರಾಜ್ಯ-ಈ ಒಂದೂ ನನಗೆ ಬೇಡ ” ಎಂದು ನಿಶ್ಚಯಿಸಿ ಜೈನ ದೀಕ್ಷೆ ಯನ್ನು ಧರಿಸಲು ಸಂಕಲ್ಪಿಸಿದನು. ಬಳಿಕ ಭರತನನ್ನು ಕುರಿತು, “ ಚಕ್ರೇಶ್ವರಾ, ನಾಚಿಕೆಯನ್ನು ಬಿಡು. ಕೋಪವನ್ನು ತೊರೆ, ಈ ತಮ್ಮಂದಿರ ಮೇಲೆ ಆಗ್ರಹಮಾಡುವುದು ದೊಡ್ಡ ತನವೆ ? ರಾಜ್ಯಲಕ್ಷ್ಮಿ ನಿನ್ನ ವಕ್ಷಸ್ಥಳದಲ್ಲಿ ನೆಲಸಿರಲಿ. ತಂದೆ ಕೊಟ್ಟ ಭೂಮಿಯನ್ನು ನಾನು ನಿನಗೆ ಕೊಟ್ಟೆ. ನೀನು ಬಯಸಿದ ನೆಲಕ್ಕೆ ನಾನು ಆಸೆ ಮಾಡಿದರೆ, ನೀನು ಒಲಿದ ಹೆಣ್ಣಿಗೆ ಆಸೆ ಮಾಡಿದಂತೆ. ಅದು ಉಚಿತವಲ್ಲ. ಅಣ್ಣಾ, ಸರಿಯಾಗಿ ವಿಚಾರಮಾಡದೆ ನಿನ್ನ ವಿಷಯದಲ್ಲಿ ದೊಡ್ಡ ಅವಿನಯ