ಪುಟ:Kannada-Saahitya.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

7 ಕನ್ನಡ ಸಾಹಿತ್ಯ ಚಿತ್ರಗಳು ವನ್ನಾಚರಿಸಿದ್ದೇನೆ. ಆ ದೋಷವನ್ನು ತಪಸ್ಸು ಮಾಡಿ ಪರಿಹರಿಸಿಕೊಳ್ಳು ತೇನೆ. ನನ್ನ ಈ ಅಪರಾಧವನ್ನು ಮನ್ನಿಸು ” ಎಂದು ನುಡಿದನು. ಬಾಹುಬಲಿ ತಪಸ್ಸಿಗೆ ಹೊರಡಲಿರುವ ನಿಶ್ಚಯವನ್ನು ಕೇಳಿ ಭರತನ ಕೋಪವೆಲ್ಲ ಕರಗಿಹೋಯಿತು. * ತಮ್ಮನಲ್ಲಿ ಏತಕ್ಕಾದರೂ ಹೀಗೆ ಮಾಡಿ ದೆನೋ ! ” ಎಂದು ಪಶ್ಚಾತ್ತಾಪ ಬಲವಾಯಿತು. ಆಗ, “ ನೀನೊಬ್ಬನಪ್ಪಾ ನನಗುಳಿದಿರುವ ತಮ್ಮ ; ಮನುವಂಶಕ್ಕೆ ಅಲಂಕಾರವಾಗಿರುವವನು, ಬೇಡಪ್ಪಾ, ನೀನೂ ತಪೋವನಕ್ಕೆ ಹೋದರೆ ಈ ಸಾಮ್ರಾಜ್ಯವನ್ನು ಯಾರಿ ಗಾಗಿ ಮೆರೆಯಲಿ ? ೨೨ ಎಂದು ಭರತನು ಕಣ್ಣೀರು ಕರೆಯತೊಡಗಿದನು ; ಆ ಕಣ್ಣೀರಿನಿಂದ ಬಾಹುಬಲಿಯ ಕಾಲು ತೊಳೆಯುತ್ತಿದ್ದನು. ಬಾಹು ಬಲಿಗೂ ಕಣ್ಣೀರುಕ್ಕಿ ಬಂತು. ಅಣ್ಣನ ತಲೆಯ ಮೇಲೆ ಕಣ್ಣೀರ ಸರಿ ಸುರಿ ಸುತ್ತ ವಂಶಕ್ರಮವಾಗಿ ಬಂದ ರಾಜ್ಯಕ್ಕೆ ಆತನಿಗೆ ಅಭಿಷೇಕ ಮಾಡುತ್ತಿರು ವನೋ ಎಂಬಂತೆ ತೋರಿದನು. ಹೇಗೆ ಹೇಗೋ ಭರತೇಶ್ವರನನ್ನೊಡಂಬಡಿಸಿ, ಮಹಾಬಲಿಯೆಂಬ ತನ್ನ ಮಗನಿಗೆ ಪಟ್ಟಗಟ್ಟಿ ಭಗವಂತನ ಸಮವಸರಣ ಮಂಟಪಕ್ಕೆ ನಡೆದನು, ಆದಿ ನಾಥನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, “ ದೇವಾ, ಮೊದಲು ನನಗೆ ಯುವರಾಜಪದವಿಯನ್ನು ದಯಪಾಲಿಸಿದೆ. ಈಗ ವೈರಾಗ್ಯ ಮಾರ್ಗದ ಯುವ ರಾಜ ಪದವಿಯನ್ನು ಕರುಣಿಸು ” ಎಂದು ಬೇಡಿ ದೀಕ್ಷೆ ಪಡೆದನು. ಭಗವಾನ್ ಬಾಹುಬಲಿ, ಪ್ರಿಯಧರ್ಮ ನೃಪತಿ ಬಾಹುಬಲಿ ದೀಕ್ಷೆಯನ್ನು ಕೈಕೊಂಡಮೇಲೆ, ಗುರು ಉಪದೇಶಿಸಿದ ಶಾಸ್ತ್ರಗಳನ್ನು ಕಲಿತು, ವಿಧಿಸಿದ ಅನುಷ್ಠಾನಗಳನ್ನು ಮಾಡುತ್ತ ಕೆಲವು ಕಾಲ ಕಳೆದನು. ಕಡೆಗೆ ಒಂದು ಸಂವತ್ಸರದ ಅವಧಿ ಮಾಡಿಕೊಂಡು ಪ್ರತಿಮಾಯೋಗದಲ್ಲಿ ನಿಂತನು. ಹಾಗೆ ನಿಂತಾಗ ಕಾಲ ಬಳಿ ಹುತ್ತಗಳಿದ್ದವು. ಬಳ್ಳಿಗಳು ಹುಟ್ಟಿ ಮೈಮೇಲೆಲ್ಲ ಹಬ್ಬಿದವು. ಹುತ್ತದಿಂದ ಹೊರಟ ಹಾವು ಗಳು ಬಳ್ಳಿಗಳ ಮೇಲೆ ಹತ್ತಿ ಮುನಿಯ ಮೈ ಮೇಲೆಲ್ಲ ಓಡಾಡುತ್ತಿದ್ದವು. ಆ ವಿಷ ಸರ್ಪಗಳು ಮಹಾಮುನಿಯ ಘೋರ ತಪೋಗಿಯ ಧೂಮರೇಖೆಗಳೂ