ಪುಟ:Kannada-Saahitya.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ-ಬಾಹುಬಲಿ ಎಂಬಂತೆ ತೋರುತ್ತಿದ್ದವು ಆ ಮುನಿಯನ್ನು ಮುಚ್ಚುವಂತೆ ಹಬ್ಬುತ್ತಿದ್ದ ಲತೆಗಳ ಹೆಣಿಗೆಯನ್ನು ಖೇಚರಿಯರು ಬಿಡಿಸುತ್ತಿದ್ದರು." ಹೀಗೆ ಉಗೊಗ್ರವಾಗಿ ತಪಸ್ಸು ಮಾಡುತ್ತಿದ್ದರೂ ಬಾಹುಬಲಿ ಮುನಿಗೆ ಕೇವಲ ಜ್ಞಾನ ಹುಟ್ಟಲಿಲ್ಲ. ಭರತನಿಗೆ ವಿಸ್ಮಯವಾಯಿತು. ಕಾರಣ ವೇನೆಂದು ಆದಿನಾಥನನ್ನು ಬೆಸಗೊಂಡನು. “ ಭರತನ ನೆಲದ ಮೇಲೆ ನಿಂ ತಿರುವೆನಲ್ಲಾ!' ಎಂದು ಅಳುಕುತ್ತ ಅಭಿಮಾನವನಿನ್ನೂ ಬಿಡದಿರುವುದರಿಂದ ಆತನಿಗೆ ಕೇವಲ ಜ್ಞಾನ ಹುಟ್ಟಲಿಲ್ಲವೆಂದೂ ಭರತನು ಹೋಗಿ ಕಾಲೆರಗಿದರೆ ಕೇವಲ ಜ್ಞಾನವುಂಟಾಗುವುದೆಂದೂ ಆದಿತೀರ್ಥ೦ಕರನು ಅಪ್ಪಣೆ ಕೊಡಿ ಸಿದನು, ಅದನ್ನು ರಾಜಾಧಿರಾಜನು ಪರಿವಾರ ಸಮೇತನಾಗಿ ಬಂದು ಬಾಹುಬಲಿ ಮುನಿಯನ್ನು ಪೂಜಿಸಿ ಅಡಿಗೆರಗಿದನು. ಎರಗಿ, “ಅಯ್ಯಾ ಮುನಿಯೇ, ಈ ನೆಲ ನಿನ್ನದು. ನೀನು ಕೊಟ್ಟಿದ್ದರಿಂದ ನನಗೆ ಬಂತು. ನನ್ನ ದೆಂದೇಕೆ ಭಾವಿಸುವೆ ? ನಿನ್ನನ್ನೆ ನೀನು ನೆನೆದುಕೊ, ಬೇರೆ ಏನನೂ ನೆನೆಯಬೇಡ ” ಎಂದನು. ಆ ಕೂಡಲೆ ಮನಸ್ಸಿನೊಳಗಿದ್ದ ಅಲ್ಪ ಸ್ವಲ್ಪ ಅಹಂಕಾರವೂ ನಾಶ ವಾಗಿ ಹೋಯಿತು. ಸರ್ವವನ್ನೂ ತಿಳಿಯುವಂತೆ ಪ್ರಕಾಶಿಸುವ, ಕೇವಲ ಜ್ಞಾನ ತಲೆದೋರಿತು. ಬಾಹುಬಲಿ ಜಿನನಾದನು, ದೇವತೆಗಳು ಬಂದು ಬಾಹುಬಲಿ ಕೇವಲಿಯ ಅಡಿಗೆರಗಿ ಪೂಜಿಸಿ ಹೋದರು. ಬಾಹುಬಲಿ ಕೇವಲಿ ನಾನಾ ದೇಶಗಳಲ್ಲಿ ವಿಹರಿಸಿ ಕೈಲಾಸಕ್ಕೆ ಬಂದು ಆದಿದೇವನ ಸನ್ನಿಧಿಯಲ್ಲಿದ್ದನು. ಇತ್ತ ಭರತೇಶ್ವರನು ದಿಗ್ವಿಜಯಾನಂತರದಲ್ಲಿ ಅಯೋಧ್ಯೆಗೆ ಹಿಂದಿರುಗಿ ಸಾಮ್ರಾಜ್ಯಾಧಿಕಾರದಲ್ಲಿ ಪಟ್ಟಾಭಿಷಿಕ್ತನಾದನು ; ಆದಿ ಚಕ್ರವರ್ತಿಯಾದನು. ಹಿಮವತ್ಪರ್ವತದಿಂದ ಲವಣ ಸಮುದ್ರದವರೆಗಿನ ಪಟ್ಟಂಡ ಭೂಮಂಡಲವೂ ಅವನ ಆಜ್ಞೆಗೆ ತಲೆಬಾಗಿ ನಡುಗುತ್ತಿತ್ತು ಮಾಗಧಾದಿ ಅಮರರು ಅವ ನನ್ನು ಓಲಗಿಸುತ್ತಿದ್ದರು. * ಪ್ರಿಯಧರ್ಮ ನೃಪತಿ ' ಎನಿಸಿದ ಚಕ್ರವರ್ತಿಯ ಕೀರ್ತಿ ಭೂಮ್ಯಾಕಾಶಗಳನ್ನೆಲ್ಲ ಬೆಳಗುತ್ತಿತ್ತು. ಧರ್ಮಪ್ರಿಯನಾದ ಆ ರಾಜನ ಮೇಲ್ಪಂಕ್ತಿಯಿಂದ ಸಮಸ್ತ ಭೂಮಂಡಲದಲ್ಲೂ ಪ್ರಜೆಗಳೆಲ್ಲ ಧರ್ಮ ಪ್ರಿಯರಾದರು,