ಪುಟ:Kannada-Saahitya.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಣ್ಣಪ್ಪ ಸಡಿ ಫಡ ! ಮಾನವರ್ ಕುಡುವರೆಂಬುದನಾಡದಿರಿನ ಮುಂದೆ ಕ ಪ್ರಡದ ಶರೀರಿಗಳ ಕೃಣದ ಹಾ ಹಗಕ್ಕಟ ! ಮಣ್ಣ ಬೊಂಬೆಗಳ ಕುಡುವುವೆ ? ಬೇಡು, ಬೇಡಿದುದನೀವ ಮಹಾನಿಥಿಯಂ ಮಹೇಶನಂ ಮೃಡನನನ್ನದಾನಿಯನಲಂಪಿನ ಪೆಂಪಿನ ಹಂಸೆಯಾಳನಂ [ 1 ಮನುಷ್ಯರು ಕೊಡುತ್ತಾರೆ' ಎಂಬ ಮಾತನ್ನು ನನ್ನ ಮುಂದೆ ಆಗಬೇಡ, ಅವರು ಬಟ್ಟೆಯಲ್ಲಿ ಮಾಡಿಟ್ಟಿರುವ ಆಕಾರಗಳು ! ಹುಲ್ಲಿನ ಬಿಂಬಗಳು ! ಮಣ್ಣಿನ ಬೊಂಬೆಗಳು ! ಅವರೇನು ತಾನೆ ಕೊಟ್ಟಾರು ? ಬೇಡುವ ಹಾಗಿದ್ದರೆ ಹಂಪಯೊಡ ಯನಾದ ಮಹೇಶ್ವರನನ್ನು ಬೇಡಿಕೊ. ಆ ಮಹಶ್ವರನು ಸಮಸ್ತ ಸುಖಕ್ಕೂ ನೆಲೆ ಯಾದವನು; ಮಹಾಮಹಿಮೆಯುಳ್ಳವನು ; ಒಂದಿಷ್ಟೂ ಕುಂದಿಲ್ಲದ ಬಾನಿ ; ಬೇಡಿದ್ದನ್ನೆಲ್ಲಾ ಕೊಡುವ ಮಹಾನಿಧಿ, ಅಂಥ ಮಹೇಶ್ವರನನ್ನು ಬಿಟ್ಟು ಮನುಷ್ಯ ರನ್ನು ಬೇಡುವುದ ! ] ಚೋಳ ಮಂಡಲ ಶಿವಭಕ್ತಿಗೆ ತವರುಮನೆಯಾಗಿದೆ. ಆ ದೇಶದಲ್ಲಿ 'ತಿರುಕಾಳು' ಎಂಬೊಂದು ಪಟ್ಟಣ - ( ಶ್ರೀ ಕಾಳಹಸ್ತಿ ' ಎಂಬುದು ಇದರ ಸಂಸ್ಕೃತ ರೂಪ). ಅಲ್ಲಿ ಒಬ್ಬ ಬೇಡರ ನಾಯಕನಿದ್ದನು. ಅವನ ಹೆಸರು ಕಣ್ಣಪ್ಪ, ಕಣ್ಣಪ್ಪನ ನಡೆ, ನುಡಿ-ಎಲ್ಲ ಬೇಡರಿಗೆ ತಕ್ಕಂತಿತ್ತು. ಎಲ್ಲ ಬಗೆಯ ಬೇಟೆಗಳಲ್ಲಿಯೂ ಅವನಿಗೆ ತುಂಬ ತಿಳಿವಳಿಕೆ. ಸದಾ ಬೇಟೆಯಲ್ಲಿಯೇ ಅವನಿಗೆ ಆಸಕ್ತಿ, ಸತ್ಯ ನುಡಿಯುವುದನ್ನು ಅವನು ಕನಸಿನಲ್ಲೂ ಕಂಡ ರಿಯ. ಶಿವನೆಂಬುದು ಅವನ ಮನಸ್ಸಿಗೂ ಹೊಳೆದಿರಲಿಲ್ಲ. ತನಗಿಂತ ಬೇರೆ ದೊಡ್ಡವರಿದ್ದಾರೆ ಎಂಬ ಸಂಗತಿಯೂ ಅವನಿಗೆ ಗೊತ್ತಿಲ್ಲ. ತಾನೇ ದೊಡ್ಡವ ನೆಂದುಕೊಂಡು ಬೇರೆ ಯಾರನ್ನೂ ಲಕ್ಷಿಸದೆ ತನಗೆ ಹಿತ ತೋರಿದಂತೆ ನಡೆದು ಬಿಡುತ್ತಿದ್ದನು. ಹಾಗೆ ನಡೆಯುವಾಗ ಸುಳ್ಳಾಡುವುದಕ್ಕೆ ಹಿಂಜರಿಯುತ್ತಿಕ' ಲಿಲ್ಲ. ಊಟ, ತಿಂಡಿ ಮೊದಲಾಗಿ ಏನೇ ಆಸೆ ಬರಲಿ, ಅದು ಸರಿಯೋ ತಪ್ಪೆ ಎಂದು ಸ್ವಲ್ಪವೂ ಯೋಚಿಸದೆ ಅದನ್ನು ಈಡೇರಿಸಿಕೊಳ್ಳಲು ಮುಂದೆ ನುಗ್ಗು