ಪುಟ:Kannada-Saahitya.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ತಿದ್ದನು. ಹಾಗೆ ಆಸೆಗಳಿಗೆ ಸಿಕ್ಕಿ ನಡೆಯುವಾಗ ಅವನಿಗೆ ತನ್ನ ಮೇಲೂ ಲಕ್ಷವಿಲ್ಲ ; ಬೇರೆ ಯಾವುದರ ಮೇಲೂ ಲಕ್ಷ್ಯವಿಲ್ಲ, ಹೀಗಿದ್ದರೂ ಕಣ್ಣಪ್ಪ ನಿಜವಾಗಿಯೂ ಬಹು ದೊಡ್ಡ ಮನುಷ್ಯ ; ತುಂಬ ಸಂಸ್ಕಾರ ಹೊಂದಿದ ಜೀವ, ಬೇಡತನದ ವೇಷ ಅವನ ನಿಜವಾದ ಯೋಗ್ಯತೆಯನ್ನು ಮುಚ್ಚಿ ಮರೆಮಾಡಿತ್ತು. ಸೂರ್ಯನಿಗೆ ಮೋಡ ಮುಚ್ಚಿ ದಂತಾಗಿತ್ತು ಅವನ ರೀತಿ, ಮೋಡವೆಲ್ಲ ಚೆದರಿ ಸೂರ್ಯಬಿಂಬ ಹೊಳೆ ಹೊಳೆಯುತ್ತ ಹೊರಬರುವ ಕಾಲವೂ ಹತ್ತಿರ ಬರುತ್ತಿತ್ತು. ಕಣ್ಣಪ್ಪ ಬೇಟೆಗೆ ಹೊರಟಾಗ ಅವನ ರೂಪವನ್ನು ನೋಡಬೇಕು ? ಜುಂಜುದಲೆ ; ಕೆಂಗಣ್ಣು ; ಗುಲಗಂಜಿಯ ಆಭರಣಗಳು, ತೊಡೆಗೆ ಚಲ್ಲಣ. ತಲೆ, ಕೈ ಮತ್ತು ತೊಡೆಗಳಲ್ಲಿ ಕವಡೆಯ ದಂಡೆಗಳು, ತೊಗಲಿನ ಉಡುಗೆ ಗಳನ್ನು ಬಿಗಿದುಟ್ಟಿದ್ದಾನೆ ; ನಡುನಡುವೆ ಎಲುವಿನ ತುಂಡುಗಳನ್ನು ಸೆಕ್ಕಿ ಸಿದ್ದಾನೆ. ಉದ್ದನೆಯ ಹುರಿ ಕಟ್ಟಿ ಇಳಿಯ ಬಿಟ್ಟ ಚೌರಿ ಬೆನ್ನ ಮೇಲೆ ಆಳ್ವಾ ಡುತ್ತಿದೆ. ಎತ್ತಿ ಕಟ್ಟಿದ ನೆತ್ತಿಗನ್ನಡಿ ಹೊಳೆಹೊಳೆಯುತ್ತಿದೆ. ಎಡಗೈಯಲ್ಲಿ ದೊಡ್ಡ ಬಿಲ್ಲು ಹಿಡಿದಿದ್ದಾನೆ. ಬೆನ್ನ ಮೇಲೆ ಬತ್ತಳಿಕೆಯಲ್ಲಿ ಕೂರಂಬುಗಳು ಗರಿಗೆದರುತ್ತಿವೆ. ಹೀಗೆ ಅಲಂಕಾರ ಮಾಡಿಕೊಂಡು ಬೇಡರ ಪಡೆಯನ್ನು ಸೇರಿಸಿಕೊಂಡು ಅಬ್ಬರಿಸುತ್ತ ಕಣ್ಣಪ್ಪ ಬೇಟೆಗೆ ಹೊರಟನೆಂದರೆ ಬೇಡರೆಲ್ಲ ರಿಗೂ ದೊಡ್ಡ ಹಬ್ಬ. ಬೇಟೆಯ ದಿಟ್ಟರೆಲ್ಲ ಕಣ್ಣಪ್ಪನ ಹಿಂದ ಹೊರಡುವರು. 'ತಿರುಕಾಳ ಬೆಟ್ಟದ ತಪ್ಪಲಿನ ಕಾಡನ್ನೆಲ್ಲ ಅಲೆಯುವರು ; ಮರೆಯಲ್ಲಡಗಿ ಮೃಗಗಳನ್ನು ಕಾಯುವರು ; ಪೊದೆ ಮೊದಲಾದೆಡೆಗಳಲ್ಲಿ ಅಡಗಿದ್ದವನ್ನು ಬಡಿದೆಬ್ಬಿಸಿ ಸೋವಿ ತರುವರು. ಯಾವುದಾದರೂ ಮೃಗ ಸರಿಯಾದ ಸ್ಥಳದಲ್ಲಿ ಕಂಡು ಬಂತೆಂದರೆ ಆ ಕೂಡಲೆ ಕಣ್ಣಪ್ಪ ಸರಕ್ಕನೆ ನೆಗೆದು ನಿಲ್ಲುವನು. ನೀಟಡಿ ಯಿಟ್ಟು ಬಾಗಿ ನಿಂತು ' ಕುಬುಬು' ಎಂದು ಕೂಗಿ ಬಿಲ್ಲಿಗೆ ಹೆದೆಯೇರಿಸು ವನು, ಹೆದೆಯನ್ನು ಬಲಗೈಯಿಂದ ಕಿವಿಯವರೆಗೆ ಎಳೆದು ತರುತ್ತಿರುವಷ್ಟರಲ್ಲಿ ಹೂಡಿರುವ ಕೂರಂಬು ತನ್ನನ್ನು ' ಬೇಗ ಬಿಡು, ಬಿಡು' ಎಂದು ತವಕಿ ಸುತ್ತಿರುವಂತೆ ತೋರುವುದು. ಅವನು ಬಿಟ್ಟ ಬಾಣವೇ ನಾಟುವುದೋ