ಪುಟ:Kannada-Saahitya.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಣ್ಣಪ್ಪ ಅಥವಾ ಅವನ ನೋಟವೇ ಬಾಣವಾಗಿ ನಾಟುವುದೋ ಹೇಳಬಾರದಷ್ಟು ವೇಗ ಅವನೆಸುಗೆ, ಅವನ ಬಿಲ್ಲಿನ ಗುರಿಗೆ ಸಿಕ್ಕಿದ ಒಂದು ಮೃಗವೂ ತಪ್ಪಿ ಹೋಗದು, ಭಯಪಟ್ಟು ಓಡಿಯೂ ಹೋಗದು. ಮೃಗಗಳೆಲ್ಲ ಸಂತೋಷ ದಿಂದ ಅವನ ಅಂಬಿಗೆ ಮೈಯೊಡ್ಡುವುವು, ಕಣ್ಣಪ್ಪ ಅವನ್ನು ಮತ್ತೊಂದು ಅಡಿ ಮೆಟ್ಟಬಿಡದೆ ಹೊಡೆದುಹಾಕುವನು ; ಅವುಗಳ ಜೀವ ಮರುಹುಟ್ಟು ಹುಟ್ಟದಂತೆ ನೆಟ್ಟನೆ ಸ್ವರ್ಗಕ್ಕೆ ನೆಗೆಯುವುವು. ಹೀಗೆ ಕಣ್ಣಪ್ಪನ ಬೇಟೆಯ ಲೀಲೆ ತಿರುಕಾಳು ಮಲೆಯ ತಪ್ಪಲಲ್ಲೆಲ್ಲ ದನಿಗೊಡುತ್ತಿತ್ತು. ಒಂದು ದಿನ ಕಣ್ಣಪ್ಪ ಬೇಟೆಗೆ ಹೊರಟಾಗ ಅವನಿಗೆ ಬಲಗಣ್ಣ ಬಲ ಹುಟ್ಟೂ ಅದುರಿತು. ಆಗ ಅವನು, ' ಇಂದು ಬೇಟಿ ಲೇ ಸಾಗುತ್ತದೆ' ಎಂದು ಕೊಂಡು ನಲಿದುಚ್ಛಿದನು. ಬಹಳ ಉತ್ಸಾಹದಿಂದ ಮುಂದುವರಿದು ನಡೆ * ದನು. ಅದೇ ಸಮಯದಲ್ಲಿ ಇತ್ತ ತಿರುಕಾಳತ್ತಿ ಮಲೆಯಲ್ಲಿದ್ದ ಈಶ್ವರನು ಒಂದು ಮಾಯಾ ಮೃಗವನ್ನು ನಿರ್ಮಿಸಿ, “ ನೀನು ಕಣ್ಣಪ್ಪನೆದುರಿಗೆ ಸುಳಿದು ಅವನನ್ನು ನನ್ನ ಬಳಿಗೆ ಸೆಳೆದುಕೊಂಡು ಬಾ ' ಎಂದು ಅಪ್ಪಣೆಮಾಡಿದನು. ಕೂಡಲೆ ಆ ಮೃಗ ಗಳಗಳನೆ ಬೆಟ್ಟದಿಂದ ಇಳಿದು ಬಂತು. ಬಂದು ದೂರದಲ್ಲಿ ಕಣ್ಣಪ್ಪನಿಗೆ ಕಾಣುವಂತೆ ಸುಳಿಯತೊಡಗಿತು. ಸ್ವಲ್ಪ ಹೊತ್ತು ಅತ್ತಿತ್ತ ಸುಳಿದಾಡುವುದು ; ಸ್ವಲ್ಪ ಹೊತ್ತು ನಿಲ್ಲುವುದು ; ಮತ್ತೆ ಅತ್ತಿತ್ತ ನಡೆದು ನಲಿದಾಡುವುದು, ಮೃಗದ ಸುಳಿದಾಟವನ್ನು ಕಂಡ ಕಣ್ಣಪ್ಪನಿಗೆ ಅದರ ಮೇಲೆ ತುಂಬ ಆಸೆಯಾಯಿತು. ಅದನ್ನು ಹೊಡೆಯ ಹೊರಟನು. ಮೃಗ ಛಂಗನೆ ನೆಗೆದು ಓಡತೊಡಗಿತು. ಕಣ್ಣಪ್ಪ ಅಟ್ಟಿಸಿಕೊಂಡು ಅದನ್ನು ಬೆಂಬತ್ತಿದನು, ಮೃಗ ಒಮ್ಮೆ ತಿಟ್ಟು ಹತ್ತುವುದು ; ಒಮ್ಮೆ ತಗ್ಗಿಗಿಳಿಯುವುದು. ಕೈಗೆ ಸಿಕ್ಕಿದಂತೆ ಮೆಲ್ಲನೆ ನಡೆಯುತ್ತಿದ್ದು ತಟಕ್ಕನೆ ಪಕ್ಕಕ್ಕೆ ಹೊರಳಿ ದಟ್ಟಡವಿ ಯನ್ನು ಹೊಕ್ಕು ಬಿಡುವುದು, ಪೊದರುಗಳಲ್ಲೂ ಕತ್ತಲೆ ತುಂಬಿದ ಮೇಳ ಗಳಲ್ಲೂ ನುಸಳಿ ನುಸುಳಿ ನಡೆಯುವುದು. ಕಣ್ಣಪ್ಪ ಅದರ ಮೇಲೆಯೇ ಕಣ್ಣಿಟ್ಟು ಅದು ಹೋದೆಡೆಯಲ್ಲೆಲ್ಲ ಬಿಡದೆ ಹಿಂಬಾಲಿಸುವನು. ಹಳ್ಳ ಕೊಳ್ಳ ಗಳಲ್ಲೂ ಬಳ್ಳಿ ಹಾವಸೆ ಬೆಳೆದ ಮಡುಗಳಲ್ಲೂ ಬೆತ್ತದ ಬಿದಿರಿನ ಹಿಂಡಲು ಗಳಲ್ಲೂ ಕಲ್ಲು ಮೊರಡಿಗಳಲ್ಲ ಆ ಮೃಗ ಹೊಕ್ಕು ಸುತ್ತಿ ಸುತ್ತಿ ಓಡತೊಡ