ಪುಟ:Kannada-Saahitya.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಣ್ಣಪ್ಪ ವುದಿಲ್ಲ. ಅ೦ಜ ಬೇಡ ; ಚಿಂತಿಸಬೇಡ” ಎಂದು ಅನೇಕ ಬಗೆಯಾಗಿ ಹಿಗ್ಗಿ ನಿಂದ ಹೇಳುತ್ತ ಕುಣಿದಾಡಿದನು. ಆಮೇಲೆ ಹುಲ್ಲೆಯನ್ನು ಹೊಡೆದು ಬಾಣಸಮೇತವಾಗಿ ಅದನ್ನು ದೇವಾಲಯಕ್ಕೆ ತಂದನು, ತಂದು, “ ದೇವಾ, ನೋಡು, ನಾನೇನು ಹುಸಿ ಯುವುದಿಲ್ಲ. ನಿನ್ನ ಮುಂದಿಟ್ಟು ಸರಿಯಾಗಿ ಹಂಚುತ್ತೇನೆ. ನಂಬು, ನನ್ನಲ್ಲಿ ಮಾಯೆಯಿಲ್ಲ, ನನ್ನ ವನೇ ?” ಎಂದು ಪ್ರೀತಿಯಿಂದ ನುಡಿಯುತ್ತ ಹುಲ್ಲಿ ಯನ್ನು ಕತ್ತರಿಸಿ ಸರಿಯಾಗಿ ಪಾಲುಮಾಡಿಟ್ಟನು. ಇಟ್ಟು, “ ನಿನಗೆ ಯಾವುದು ಬೇಕೋ ಅದನ್ನು ತೆಗೆದುಕೊ ” ಎಂದು ಒಳ್ಳೆಯ ಭಾಗವನ್ನೇ ಶಿವನಿಗೆ ಒಪ್ಪಿಸಿದನು. ನಿನ್ನ ಭಾಗವನ್ನು ಯಾರ ಕೈಗೂ ಕೊಡುವುದಿಲ್ಲ. ನಾನೇ ಕಾಸಿ ಲೇಸುಮಾಡಿ ಕೊಡುತ್ತೇನೆ” ಎಂದು ತಿಳಿಸಿ ಬೆಂಕಿ ಹೊತ್ತಿಸಿ ದನು, ಮಾಂಸಖಂಡಗಳನ್ನು ಬಿಡಿಸಿ ಕೋಲಿಗೆ ಚುಚ್ಚಿ ಬೆಂಕಿಗೆ ಹಿಡಿದು ಕಾಸಿ ಪಕಮಾಡಿದನು. ಕೆಂಪಾದ, ಸೊಂಪಾದ, ಕಂಪಳ ಖಂಡಗಳನೆ ಆಯಾಯ್ತು ಕಾಸಿ ಕೈಗೆತೆಗೆದು ರುಚಿನೋಡಿ ಇಂಪಾಗಿ, ಮೃದುವಾಗಿ ಕಂಡ ವನ್ನು ಬೇರೆ ಇರಿಸಿದನು. ಬಳಿಕ ಮುತ್ತುಗದ ಎಲೆಯನ್ನು ಹಚ್ಚಿ ಅದರಲ್ಲಿ ಖಂಡ ಗಳನ್ನಿಟ್ಟುಕೊಂಡು ಶಿವನ ಬಳಿಗೆ ತಂದನು. “ಎನ್ನ ವನೇ ಉಣ್ಣು, ಉಣ್ಣು” ಎಂದು ಕೇಳಿಕೊಂಡನು. “ ಎನ್ನವನೇ, ಸವಿನೋಡು, ನನ್ನಾಣೆ, ನಿನ್ನಾಣೆ!” ಎಂದು ಅಂಗಲಾಚಿದನು, ಅವನ ಭಕ್ತಿ ಶಂಕರನಿಗೆ ಸೊಗಸಿತು. ಭಕ್ತನನ್ನು ತೃಪ್ತಿ ಪಡಿಸ ಬೇಕೆಂದು, ಅವನು ಅರ್ಪಿಸಿದ ಮಾಂಸವನ್ನು ತಾನೇ ಕೈಕೊಂಡ ಹಾಗೆ ಕಾಣಿಸಿದನು. ಆ ಖಂಡಗಳನ್ನೆಲ್ಲ ಭೂತಗಳಿಗೆ ಕೊಟ್ಟು ಅವನ ನಿರ್ಮಲ ವಾದ ಭಕ್ತಿಯನ್ನೂ ಆತುರದ ಪ್ರೇಮವನ್ನೂ ತಾನು ಸ್ವೀಕರಿಸಿದನು. ಭಕ್ತನ ಮನಸ್ಸಿಗೆ ಶಿವನೇ ಉಂಡಂತ ಭಾವನೆ. ಶಿವನು ಭಕ್ತಿಯನ್ನು ಸವಿಸವಿದು ಆಗುತ್ತಿದ್ದನು. ಹೀಗೆ ಶಿವನು ಆಯೋಗಿಸುತ್ತಿರುವುದನ್ನು ಕಂಡು ಕಣ್ಣಪ್ಪ ನಿಗೆ ಮನಸ್ಸು ಮರುಗಿತು. ( ತಂದೇ, ಇಷ್ಟು ದಿನವೂ ಅಡವಿಯಲ್ಲಿ ಒಬ್ಬನೇ ಇದ್ದೆಯಲ್ಲಾ ! ನಿನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ ವಲ್ಲಾ ! ಹಲವುಪಾಸಗಳಲ್ಲಿ ಒಂದೂಟವನ್ನು ಕಂಡೆ,ಹನನ್ನ ಇಟ್ಟ ಇನ್ನು ನಿನ್ನನ್ನು ನಾನು ಸಲಹುತ್ತೇನೆ”.ಇನ್ನು ಕನಿಷ್ಟಜಿಸಿ ಕುಡಿದರೆ