ಪುಟ:Kannada-Saahitya.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುಂದುವರಿದನು. ಶಿವಲಿಂಗ ಕಣ್ಮರೆಯಾಗಲು ಕಂದಿ ಕುಂದಿಹೋದನು. ಶಿವನನ್ನೇ ನೆನೆಯುತ್ತ ಶಿವನಿಗೆಂದು ಮೃಗವನ್ನರಸುತ್ತಿದ್ದನು. ಕಣ್ಣಪ್ಪ ಅತ್ತ ಹೋದ ಮೇಲೆ ಊರಿನಿಂದ ಶಿವನನ್ನು ಪೂಜಿಸುವುದ ಕಾಗಿ ಒಬ್ಬ ಬ್ರಾಹ್ಮಣ ಇತ್ತ ಬಂದನು. ಮೈಗೆ ವಿಭೂತಿಯನ್ನು ಪೂಸಿ ಪ್ಲಾನೆ ; ರುದ್ರಾಕ್ಷಿ ಮಾಲೆಗಳನ್ನು ಧರಿಸಿದ್ದಾನೆ. ಕೈಯ್ಯಲ್ಲಿ ಕರಡಿಗೆ, ಅಗ್ಗ ವಣಿ, ಆತ ಮೆಲ್ಲಮೆಲ್ಲನೆ ಬೆಟ್ಟವನ್ನು ಹತ್ತುತ್ಯ ದೇವಾಲಯದ ಬಾಗಿಲಿಗೆ ಬಂದನು, ಗವಲು ಕವಿದು ಬಂತು. ಆ ಹೊಲಸು ವಾಸನೆ ಮೂಗಿಗಡರಲು * ಇದೆಲ್ಲಿಯ ಅದ್ಭುತವಪ್ಪಾ' ಎಂದುಕೊಂಡು ಗುಡಿಯ ಬಾಗಿಲಿನಿಂದ ಹಿಂ ದಿರುಗಿ ಬಂದು ಕರಡಿಗಯನ್ನೂ ಅಗ್ಗವಣಿಯನ್ನು ಒಂದು ಕಡೆ ಇಟ್ಟನು. ಹೇಸಿ ಅಸಹ್ಯ ಪಟ್ಟುಕೊಂಡು ಉಗುಳಿ ಮೂಗು ಮುಚ್ಚಿಕೊಂಡನು. 'ಎಲ್ಲಿಯ ದುರಾಚಾರ ಬಂತೋ ! ಶಂಕರನಿಗೆ ಎಂಥ ಜುಗುಪ್ಪೆಯುಂಟಾಯಿತೋ !! ಎಂದು ಪೇಚಾಡುತ್ತ ಮೂಗು ಮುಚ್ಚಿಕೊಂಡೇ ಒಳಕ್ಕೆ ಬಂದನು. ಬಂದು, (* ಎಳೆ ದೇವ, ಇಂಥ ಪಾಪಕರ್ಮ ಮಾಡುವ ಕಟುಕನನ್ನು ಒಳಕ್ಕೆ ಬರ ಗೊಡಿಸುವುದೆ ? ಏನಯ್ಯ, ಎಲ್ಲಿದ್ದೆ ? ಏನಾದೆ, ಎಲೆ ದೇವ ? ೨೨ ಎಂದು ನುಡಿಯುತ್ತ ಪೊರಕೆಯಿಂದ ಗುಡಿಸಿ, ಗೋಮಯನಿಕ್ಕಿ ಶುಚಿಮಾಡಿದನು, ತರುವಾಯ ಕೊಳ್ಳಕ್ಕೆ ಹೋಗಿ ಮತ್ತೊಮ್ಮೆ ಮಿಂದು, 'ಶಿವ ಶಿವ' ಎಂದು ನೆನೆಯುತ್ತ ಬಂದು ಅಗ್ಗವಣಿಯನ್ನೂ ಕರಡಿಗೆಯನ್ನೂ ತೆಗೆದುಕೊಂಡು ಶಿವಾಲಯದ ಒಳಹೊಕ್ಕನು.

  • ಶುದ್ಧಾತ್ಮ ಶಿವಾ, ಹೀಗೆ ಮಾಡಿಸುವುದೇ ? ನಿರ್ಮಲ ಪ್ರಭುವೇ, ಹೀಗೆ ಮಾಡಿಸುವರೇ ? ” ಎನ್ನುತ್ತ ಭಯಭಕ್ತಿಯಿಂದ ಕಾಳಯರಸನಿಗೆ ಅಭಿಷೇಕ ಮಾಡಿದನು. ಬಿಲ್ವ ಪತ್ರೆ, ಗರುಗ, ಉತ್ತರಣೆ, ದೊಡ್ಡ ಪತ್ರೆ, ಬಿಳಿಯ ಗರುಕೆ ಮೊದಲಾದ ಬಗೆಬಗೆಯ ಪತ್ರಗಳನ್ನು ತಂದೊಟ್ಟ ಸಜ್ಜನ ಸ್ನೇಹಭರಿತನಾದ ಪರಮಾತ್ಮನಿಗೆ ಪೂಜೆ ಮಾಡಿದನು. ರುದ್ರಸೂಕ್ತಗಳನ್ನು ಪಠಿಸಿ ಹಲವು ಜಪಗಳನ್ನು ಮಾಡಿದನು. ಧೂಪಾರತಿಯೆತ್ತಿ ನೈವೇದ್ಯವನ್ನು ಸಮರ್ಪಿಸಿ, “ಕಾಪಾ, ಶರಣು ” ಎಂದು ಆಡ್ಡ ಬಿದ್ದನು. “ಈ ಪಶುಕರ್ಮ ಕಾರನನ್ನು ಹುಗಿಸಬೇಡ, ಕಂಡೆಯಾ, ಹೇಸಿಗೆ ಮಾಡುವ ಕಿರಾತನನ್ನು ಹೋಗಿಸಬೇಡ, ಕಂಡಯಣ ” ಎಂದು ಬೇಡಿಕೊಂಡನು. ಚಂದ್ರಶೇಖರ,