ಪುಟ:Kannada-Saahitya.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಕರುಣಿಸು ” ಎಂದು ಕೈ ಮುಗಿದು ನಿಂತನು. ಹೀಗೆ ಪೂಜೆಯನ್ನು ಮುಗಿಸಿ ಗರ್ಭಗೃಹ, ಸುಕನಾಸಿ, ರಂಗಮಂಟಪದ ಹೊರಮುಖ-- ಈ ಮೂರು ಬಾಗಿಲುಗಳ ಕದಗಳನ್ನೂ ಮುಚ್ಚಿ ಸರಪಣಿ ಸೇರಿಸಿ ಬಿಗಿಯಾಗಿ ಬೀಗ ಹಾಕಿ ದನು, “ ಶಂಕರಾ, ಇನ್ನು ಅವನನ್ನು ಒಳಹೊಗಿಸಬೇಡ” ಎಂದು ಮತ್ತೆ ಮತ್ತೆ ಪ್ರಾರ್ಥಿಸುತ್ತ ಪಟ್ಟಣಕ್ಕೆ ಹಿಂದಿರುಗಿ ಹೋದನು. ಇತ್ಯ ಬೇಡರ ಕಣ್ಣಪ್ಪ ಮೃಗವನ್ನು ಹುಡುಕಿಕೊಂಡು ಕಾಡಿನಲ್ಲೆಲ್ಲ ಅಲೆಯುತ್ತಿದ್ದನು. “ ಎನ್ನವನು ಹಸಿದನು ” ಎಂದು ಮನಸ್ಸಿನಲ್ಲಿ ಸದಾ ದುಗುಡ. ಆದರೂ ಸಿಕ್ಕಿ ಸಿಕ್ಕಿದ ಮೃಗವನ್ನು ಹೊಡೆಯಲೋಲ್ಲ. ಬಾಡಿದ ಮೃಗಗಳನ್ನೂ ರೋಗದ ಮೃಗಗಳನ್ನೂ ಕಂಡರೆ, “ ಇವು ಹೊಲ್ಲ ; ಎನ್ನವನ ಹೊಟ್ಟೆಗಾಗುವುದಿಲ್ಲ ; ಬೇಡ ” ಎಂದುಕೊಂಡು ಆ೦ಬೆಸೆಯದೆ ಸುಮ್ಮನೆ ನಿಲ್ಲುವನು. * ಬಾಳೆ ಎನ್ನ ಮಾದೇವ ” ಎನ್ನುತ್ತ ಹುಡುಕಾಡುತ್ತಿರುವಲ್ಲಿ ಅಷ್ಟಾಂಗ ಪುಷ್ಟವಾಗಿದ್ದ ಒಂದು ಮೃಗವನ್ನು ಕಂಡು ಮನಸ್ಸಿಗೆ ಒಪ್ಪಾಗಲು ಬಾಣಬಿಟ್ಟನು. ಆ ಮೃಗ ನೆಲಕ್ಕೆ ಬೀಳುವ ಮೊದಲೇ ಓಡಿಹೋಗಿ ಹಿಡಿದೆತ್ತಿ ಕೊಂಡನು. * ನೆಲಕ್ಕೆ ಸೋಕಿದರೆ ನನ್ನೊಡೆಯ ಹೇಸುವನು ” ಎಂದು ಕಲ್ಪಾಳೆಯೆಲೆಗಳನ್ನು ಕೊಯ್ದು ಬೆಳೆದ ಕಸಲೆಯ ಮೇಲೆ ಹಾಸಿ ಅಲ್ಲಿ ಮೃಗ ವನ್ನಿಟ್ಟು ಎಲೆ ಮುಚ್ಚಿದನು, “ ಗಾಳಿ ತಾಗಿದರೆ ಒಲ್ಲ ; ಎನ್ನವನು ಸುಖಿ ” ಎಂದುಕೊಳ್ಳುವನು. ಆಮೇಲೆ ಎಳೆಯ ಮಾವಿನ ಮರದ ಕೆಳಗೆ ತಂದಿಟ್ಟು ಕೊಂಡು ಮುತ್ತುಗದ ಎಲೆಗಳನ್ನು ಹಾಸಿ ಮೃಗವನ್ನು ಕೊಯ್ದು ಖಂಡ ಗಳನ್ನು ಬಿಡಿಸಿಟ್ಟನು. ಬೆಂಕಿಯೊಟ್ಟ ಕಾಸಿ ಪಕ್ವ ಮಾಡಿದನು. “ ಕಾವು ಹೆಚ್ಚಾಯಿತು ; ಇದು ಸಿದುಹೋಯಿತು ಎಂದು ಬೇರೆ ಇರಿಸುವನು. ಮೃದುವಾದವನ್ನು ಕೈಯಿಂದ ಮುಟ್ಟಿ ಮುಟ್ಟ ಪರೀಕ್ಷಿಸುವನು ; ಚೆಲುವಾದು ವನ್ನು ಕಣ್ಣುಗಳಿಂದ ನೋಡಿ ನೋಡಿ ಪರೀಕ್ಷಿಸುವನು ; ಕಂಪುಳ್ಳವನ್ನು ಮೂಸಿ ಮೂಸಿ ಶೋಧಿಸುವನು ; ಇಂಪುಳ್ಳವನ್ನು ನಾಲಿಗೆಯಿಂದ ರುಚಿ ನೋಡಿ ಶೋಧಿಸುವನು. ಹೀಗೆ ಸರ್ವೇಂದ್ರಿಯಗಳಿಂದಲೂ ಶೋಧಿಸಿ ನೋಡಿ ಉತ್ತಮವಾಗಿ ಕಂಡವನ್ನು ಮಾತ್ರ ಶಿವನಿಗೆಂದು ತೆಗೆದಿಟ್ಟು, ಕೊಂಡನು, ಬಳಿಕ, ಕಾಡುಮೊಲ್ಲೆಯ ಹೂವುಗಳನ್ನು ಕೊಯ್ದು ತಲೆಯ ಮೇಲಿಟ್ಟು ಕೊಂಡನು, ಬಾಯಲ್ಲಿ ಅಗ್ಗವಣಿಯನ್ನು ತುಂಬಿಕೊಂಡನು.