ಪುಟ:Kannada-Saahitya.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಒಂದು ಕೈಯಲ್ಲಿ ಮಾಸಿಗರ ಸ್ನೇಹದಿಂದ ಆಯ್ದಿಟ್ಟ ಮಾಂಸ, ಇನ್ನೊಂದು ಕೈಯಲ್ಲಿ ಬಿಲ್ಲು ಬಾಣಗಳು. ಹೀಗೆ ಸಿದ್ಧನಾಗಿ ಗುಡಿಗೆ ಹಿಂದಿರು ಗಿದನು. , ದಾರಿಯಲ್ಲಿ ನಾನಾ ಬಗೆಯ ಚಿಂತೆ : 4 ಎನ್ನವನು ಹಸಿದ; ಇರಲಾರ. ಬಹಳ ತಡಮಾಡಿದೆನೆಂದು ಕೋಪಿಸುತ್ತಾನೆ. ಹೊತ್ತು ಹೋಯಿತೆಂದು ನನ್ನ ಬರವನ್ನೇ ಹಾರಯಿಸುತ್ತಿರುವನೇನೋ ? ನಾನು ಹೊತ್ತು ಕಳೆದೆ ; ಪಾಪಿ ಯಾದೆ. ತುಂಬ ಹಸಿದು ಎದುರಿಗೆ ಬರುತ್ತಿದ್ದಾನೋ ಏನೋ? ಹುಲಿ ಬಂದರೆ ಅ೦ಜಿ ಹೊರಕ್ಕೆ ಬರಲಾರದೆ ಇರುವನೇನೂ ? ಕರಡಿ ಗರ್ಜಿಸಿದಃ | ಹೆದರಿ ಮಾತಾಡದೆ ಸುಮ್ಮನಿರುವನೇನೋ ? ಒಂಟಿಯಾಗಿ ಬೇಸರಪಟ್ಟರು ವನೋ ? ತಮ್ಮವರನ್ನು ನೆನೆದು ನನ್ನನ್ನು ತೊರೆದುಬಿಟ್ಟ' ಎಂದು ಅಳು ವನೋ ? ನೊಂದುಕೊಂಡು ನನ್ನ ಮೇಲೆ ಮುನಿದಿರುವನೋ ? ಎಂದು ಮುಂತಾಗಿ ಪ್ರೀತಿಯ ಹೆಚ್ಚಿಗೆಯಿಂದ ಚಿಂತಿಸತೊಡಗಿದನು. ಚಿಂತಿಸುತ್ತಲೇ ದೇವಾಲಯದ ಬಳಿ ಬಂದು ಸೇರಿದನು. ಬಾಗಿಲಿಗೆ ಭದ್ರವಾಗಿ ಬೀಗ ಹಾಕಿದೆ. " ಎನ್ನವನೇ ಕದ ತೆರೆ ” ಎಂದು ಅವನು ನುಡಿಯಬೇಕು ; ಅಷ್ಟರೊಳಗಾಗಿ, ಹಾಗೆ ನುಡಿಯುವುದಕ್ಕಿಂತ ಮುಂಚೆಯೇ ಢಣಢಣನೆ ಬೀಗ ಬಿಚ್ಚಿ ಬಾಗಿಲು ತೆರೆಯಿತು. ಕಣ್ಣಪ್ಪ ಒಳಹೊಕ್ಕು * ಒಬ್ಬನೇ ಇದ್ದೆಯಲ್ಲಾ, ತಂದೇ ” ಎಂದುಕೊಂಡು ಲಿಂಗದ ಮೇಲಿದ್ದ ಪೂಜೆಯ ಹೂವು ಮೊದಲಾದುವನ್ನೆಲ್ಲ ಕೆರದ ಕಾಲಿನಿಂದಲೆ ಒತ್ತರಿಸಿದನು. ಬಳಿಕ ಪ್ರೀತಿಯಿಂದ ಬಾಯೊಳಗಿನ ಅಗ್ಗವಣಿಯಿಂದ ಮಜ್ಜನಕ್ಕೆರೆದನು. ತನ್ನ ತಲೆಯ ಮೇಲಿದ್ದ ಹೂವುಗಳಿಂದ ಪೂಜೆಮಾಡಿದನು. ಹೊಸ ಮಾಂಸ ದೋಗರವನ್ನು ತಂದು ಮುಂದಿರಿಸಿ, “ ಎನ್ನವನೇ, ಎನ್ನವನೇ ! ಹಸಿದೆ ಯಪ್ಪಾ, ಹಸಿದೆ. ಓಹೊ ಹೊ ಹೊತ್ತಾಗಿ ಹೋಯಿತು ! ಎನ್ನವನೇ, ಚೆನ್ನವನೇ, ಉಣ್ಣು. ಹೊತ್ತಾಯಿತೇ, ಎನ್ನ ಯ್ಯಾ ? ಉಣ್ಣದನೆ ದಮ್ಮಯ್ಯ” ಎಂದು ಪರಿಪರಿಯಾಗಿ ಬೇಡಿದನು. ಶಿವನು ಉಣ್ಣದಿರಲು, “ಹೋ, ಗೊತ್ತಾ ಯಿತು. ನಾಚಿಕೊಂಡಿದ್ದೀಯ, ನೀನು ” ಎಂದು ಹಿಂದುಮುಂದಾಗಿ ತಿರುಗಿ ಕೊಂಡನು. ಆಗ ಶಿವ ಅವನ ತಿಳಿಯಾದ ಭಕ್ತಿಗೆ ಮೆಚ್ಚಿ ಮೊದಲಿನಂತೆಯ ತಾನು ಉಂಡಂತೆ ತೋರಿಸಿಕೊಂಡು ಮ