ಪುಟ:Kannada-Saahitya.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಸ್ವಲ್ಪ ಹೊತ್ತು ತಡೆದು ಕಣ್ಣಪ್ಪ ತಿರುಗಿ ನೋಡಿದನು. ಶಿವ ಆಯೋಗಿ ಸಿರಲು ಕಂಡು ಹರ್ಷಗೊಂಡನು. ತಾನು ನೋಡಿದ್ದರಿಂದ ದೃಷ್ಟಿ ತಾಕೀ ತೆಂದು ಹೆದರಿ ಅಕ್ಕರೆಯಿಂದ ಹೂ, ಥ' ಎಂದು ಉಗುಳಿ ರಕ್ಷೆಯಿಟ್ಟನು. ಆಮೇಲೆ ಲಿಂಗಪ್ರಸಾದವನ್ನು ತೆಗೆದುಕೊಂಡು ಸವಿದನು. ಅಂದು ಆ ಮಾಂಸ ಎಂದಿಗಿಂತಲೂ ಹೆಚ್ಚು ರುಚಿಯಾಗಿ ಕಂಡಿತು. ಮನಸ್ಸು ಹರ್ಷ ದಿಂದ ಉಬ್ಬಿತು, “ ನನ್ನವನು ಉಂಡ. ನಾನು ಬದುಕಿದೆ. ಇನ್ನು ನನಗೆ ಅಸಾಧ್ಯವಾದ್ದೊಂದೂ ಇಲ್ಲ” ಎಂದು ಭುಜ ಅಪ್ಪಳಿಸಿಕೊಂಡನು. ಪ್ರೀತಿ ಯಿಂದ ಲಿಂಗವನ್ನೇ ನೋಡುತ್ತ ನಿಂತನು. ಆಗ ಉಕ್ಕುಕ್ಕಿ ಬರುವ ಆನಂದ ವನ್ನು ತಾಳಲಾರದೆ ಕುಣಿಯತೊಡಗಿದನು. ಆಗಿನ ಅವನ ಒಲವಿನ, ನಲ ವಿನ ಕುಣಿತ ವಿಚಿತ್ರವಾಗಿತ್ತು : ಬಾಗಿ ಕೈ ಚಪ್ಪಾಳೆ ಹೊಡೆಯುವನು; ಮೈಯುಬ್ಬಿ ಕೂಗುವನು; ತೊನೆದಾಡುವನು; ಒಂದೇ ಕಾಲಲ್ಲಿ ಕುಣಿಯು ವನು. ಉಬುಬು' ಎಂದು ಬೊಬ್ಬಿಡುವನು ; ಕೋ ಎಂದು ಕೂಗುವನು' ತೊಟ್ಟ ಮಣಿಗಳೆಲ್ಲ ಅಳ್ಳಾಡುತ್ತಿರಲು ನಾಲ್ಕು ದಿಕ್ಕಿಗೂ ಕೈ ಕಾಲು ಮುಖ ಗಳನ್ನು ಚಾಚುತ್ತ ಕುಣಿದು ಕೆಲೆಯುನು, ಕೈಯ ಕತ್ತಿಯನ್ನು ಎತ್ತಿ ಹಿಡಿದು ಕುಣಿದಾಡುವನು, ತಟಕ್ಕನೆ ಕುಣಿತವನ್ನು ನಿಲ್ಲಿಸಿ ಲಿಂಗದ ಬಳಿಗೆ ಓಡಿ ಬಂದು ಬಿಗಿಯಾಗಿ ಅಪ್ಪಿಕೊಳ್ಳುವನು, ನಿಟ್ಟುಸಿರು ಬಿಟ್ಟು ತನ್ನನ್ನು ತಾನೇ ಬೈದುಕೊಳ್ಳುವನು. ಶಿವನನ್ನೇ ನೆನೆಯುತ್ತಿದ್ದು ಮತ್ತೆ ಎದ್ದು ಒಲೆ ದಾಡುವನು. ಕರಡಿಯಂತ ಕುಪ್ಪಿ ಕುಪ್ಪಿ ಕೆಳೆಯುವನು, ಹುಲ್ಲೆಯಂತ ಹಾರಿ ನೆಗೆಯುವನು, ಬಾಯಿಂದಲೆ ಕೊಂಬು, ಮೌರಿ, ಕಹಳೆಗಳನ್ನೂ ದು ವನು. ಬಾಯಿಂದಲೆ ಕರಡೆಬಾಜಿಸಿ ಕೊಳಲೂದುವನು, “ನನ್ನವನೇ ನೋಡು ” ಎಂದು ' ಎತ್ತಿಕ್ಕಿ' ಆಡುವನು ; “ ಸಿಳ್ಳಿಕ್ಕಿ' ಆಡುವನು. ಮುಂದು ಗಡೆ ತುರುಬು ಕಟ್ಟಿಕೊಂಡು - ದುಮ್ಮಿಸಲಿ ' ಆಡುವನು. ಇನ್ನೂ ಹಲವು ಬಗೆಯ ಚಂದ ಚಂದದ ಬೇಡರಾಟಗಳನ್ನೆಲ್ಲ ಆಡಿ ತೋರಿಸುವನು. ಕಡೆಗೆ ಬೇರೆ ಆಟ ತೋರದಿರಲು ಕಾಲಿಗೆ ಬಂದಂತೆ ಆಡುವನು, ಹಾಡಲರಿಯದೆ * ಎನ್ನವನೇ, ಎನ್ನವನೇ ಎಂದು ಹಾಡುವನು. ಹೀಗೆ ಬೆರಕೆಯಿಲ್ಲದ ಬಚ್ಚ ಬರಿಯ ಭಕ್ತಿಯಿಂದ ಬೆಳಗಾಗುವವರೆಗೂ ಆಡುತ್ತಲೇ ಇದ್ದನು,