ಪುಟ:Kannada-Saahitya.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಇದನ್ನೆಲ್ಲ ಕಂಡು ಪಾರ್ವತಿ ಅಚ್ಚರಿಪಟ್ಟು ಶಿವನನ್ನು ಹೀಗೆ ಬೆಸ ಗೊಂಡಳು : * ದೇವಾ, ನೀವು ಮಾಡುವುದು ನನಗೆ ತಿಳಿಯುವುದಿಲ್ಲ. ಈ ಬೇಡನ ನಡವಳಿಕೆ ಲೋಕಕ್ಕೆ ವಿರುದ್ದವಾಗಿದೆ. ಮುಕ್ಕುಳಿಸಿದ ನೀರನ್ನು ಮಜ್ಜನಕ್ಕೆರೆಯುವವರು ಯಾರಾದರೂ ಉಂಟೆ ? ಮುಡಿದ ಹೂವಿ ನಿಂದ ಪೂಜೆ ಮಾಡಿದವರುಂಟೆ ? ಬರಿಯ ಮಾಂಸ ಮಾತ್ರವೇ ಅಲ್ಲ, ಎಂಜಲೂ ಮಾಡಿದ್ದನ್ನು ಆರೋಗಣೆಗಿತ್ತವರುಂಟೆ ? ಇದನ್ನೆಲ್ಲ ಸೈರಿಸಿ ಕೊಂಡಿದ್ದೀರಲ್ಲಾ ! ಇಂಥ ಬೇಡನಿಗೆ ಒಲಿದು ಕದ ತೆರೆಯುವುದೆ ? ದೇವಾ ಇವನು ಹುಟ್ಟಿದಂದಿನಿಂದ ಎಂದಾದರೂ ವಿಭೂತಿಯಿಟ್ಟು ಬಲ್ಲನೆ ? (ಶಿವ ಶಿವಾ' ಎಂದು ಬಲ್ಲನೆ ? ' ಎನ್ನವನೇ, ಎನ್ನವನೇ ? ಎನ್ನುವುದು ಇದು ಮಂತ್ರವೇ ? ತನ್ನ ವಿನೋದಕ್ಕೆ ಏನೇನೋ ಮಾಡಿದರೆ ಅದು ಶಿವಾರ್ಚನೆಗೆ ತಂತ್ರವೆ ? ಒಂದಿಷ್ಟೂ ಕ್ರಮವನ್ನು ಕಾಣದ ಬೇಡನಿಗೆ ಕರುಣಿಸಿದ್ದೀರಿ, ಮಿಂದು ವಿಭೂತಿಯಿಟ್ಟು ರುದ್ರಾಕ್ಷಿ ಧರಿಸಿ ಹೂವಾಯ್ತು ಅಗ್ಗವಣಿಯನ್ನು ತಂದು ಮಜ್ಜನಕ್ಕೆರೆದು ಪೂಜೆಮಾಡಿ ಆರತಿಯೆತ್ತಿ ನಲಿದು ನೋಡಿ ನೈವೇದ್ಯ ಸಮರ್ಪಿಸಿ ಜಪ ತಪ ಧ್ಯಾನ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ ಪೂಜಿಸುವ ಬ್ರಾಹ್ಮಣನಿಗೆ ಬಾಯಿಬಿಡದೆ ಮಿಡುಕದೆ ಇದ್ದೀರಿ ಎಂದೂ ನಮಸ್ಕಾರ ಮಾಡಿ ಕಂಡರಿಯದ, ಅದು ಹೋಗಲಿ, ಕೈಯೆತ್ತಿ ಮುಗಿಯಲೂ ಬರದ, ಯಾವ ರೀತಿಯಿಂದಲಾದರೂ ಸ್ತೋತ್ರಮಾಡಲಾರದ ದುಶ್ಚರಿತ್ರನಾದ ಕಿರಾತ ನಿಗೆ ಅದು ಯಾವ ರೀತಿ ಒಲಿದಿರೋ ಕಾಣೆ ! ” ಎಂದಳು. ಆ ಮಾತಿಗೆ ನಸುನಗುತ್ತ ಶಿವ ಹೀಗೆ ಉತ್ತರಕೊಟ್ಟನು: “ ಪಾರ್ವತೀ, ಇದನ್ನು ನಿನಗೆ ತಿಳಿಯಹೇಳುತ್ತೇನೆ, ಕೇಳು, ಹಾರುವನ ಅಗ್ಗವಣಿ ತಿಳಿ ; ಮನಸ್ಸು ಕದಡು. ಎಲೆ ಗೌರಿ, ಅವನ ಅರ್ಚನೆ ಇನಿದು ; ಮನಸ್ಸು ಅತಿ ವಿಷ ಇಟ್ಟ ವಿಭೂತಿ ಅವನನ್ನು ಮುಟ್ಟದು, ತೊಟ್ಟ ರುದ್ರಾಕ್ಷಿ ಅವನನ್ನು ಸೋದು. ಬಾಯಲ್ಲಿ ಮಂತ್ರ, ಮನಸ್ಸಿನಲ್ಲಿ ಕುದ ತಂತ್ರ ಅವನಿಗೆ ನನ್ನನ್ನು ಪೂಜಿಸಿ ಬೇರೊಬ್ಬರಿಗೆ ಕೈಯೊಡ್ಡುವರೆ ? ಸತ್ಯವಿಲ್ಲದ ಪೂಜೆ ಚೆನ್ನಾಗುತ್ತದೆಯೇ, ದೇವಿ ? ಮನಸ್ಸಿಲ್ಲದವನು ಮುಟ್ಟಿದರೆ ನನಗೆ ಬಡಿದ ಗಾಹಾಗುತ್ತದೆ. ಮನಸ್ಸುಳ್ಳವನು ಬಡಿದರೆ ಪೂಜಿಸಿದ ಹಾಗಾಗುತ್ತದೆ. ಭಕ್ತಿಯಿದ್ದವರು ಮಾಡಿದ್ದೆಲ್ಲ ನನಗೆ ಉಪಚಾರವೇ ? ಪೂಜೆಯವರು, ಓಜೆ