ಪುಟ:Kannada-Saahitya.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊಂಡಹಾಗಾಯಿತು. ಆಯ್ಯೋ, ಮಹಾದೇವಾ ! ನಾನು ಆಳಾಗಿರುವಾಗ ನಿನಗೆ ಹೀಗಾಗಬೇಕೇ ? ” ಎಂದು ಪರಿಪರಿಯಾಗಿ ಹಲುಬಿ ಗೋಳಾಡಿದನು. ಗೋಳಾಚುತ್ತ ಆಡುತ್ತ ರಂಗಮಂಟಪದಲ್ಲೆಲ್ಲ ಹೊರಳಾಡಿದನು, ಹೊರಳಿ ಹೊರಳಿ ಹೇಗೋ ಸಂತಯಿಸಿಕೊಂಡು ಮೆಲ್ಲನೆ ಬಂದು ಲಿಂಗದ ಮುಂದೆ ಕುಳಿ ತನು. ಕುಳಿತು ಮರುಗುತ್ತ, “ ನನ್ನ ಯ್ಯಾ, ಏನಾಯಿತು ? ನನಗೆ ಹೇಳು ತಂದೇ. ನನ್ನ ಯ್ಯಾ, ಕಣ್ಣಿನ ನೋವು ಹೆಚ್ಚಾಗಿದೆಯಲ್ಲವೆ ? ಯಾವು ದಾದರೂ ಮೃಗ ಬಂದು ಒರಸಿಕೊಳ್ಳುತ್ತಿರಲು ಕೋಡಿನ ಮೊನೆ ನೆಟ್ಟಿತೆ ? ಹಾಗೆ ನೆಟ್ಟು, ನಿಮ್ಮನ್ನಗಲಿ ಹೋದ ಈ ಪಾಪಿಯನ್ನು ಇರಿದು ಸುಟ್ಟಿತೇ ?” ಎಂದು ಪೇಚಾಡಿದನು. ಉಟ್ಟ ಬಟ್ಟೆಯನ್ನು ಬಾಯೊಳಗಿಟ್ಟು ಆದಿ ಅದ ರಿಂದ ಕಣ್ಣನ್ನು ಒತ್ತು ವನು. ಕೆಂಪನೆಯ ಎಳಚಿಗುರನ್ನು ತಂದು ಒತ್ತಿ ನೋಡುವನು. ರಕ್ತದೊತೆ ನಿಲ್ಲದಿರಲು ನೋಡಿ ಬಾಡುವನು. ಹೀಗೆಯೇ ಚಿಂತಿಸುತ್ತಿರಲು, ಕಡೆಗೆ ಒಂದು ಉಪಾಯ ಹೊಳೆಯಿತು. 41 ಹಾ ! ಕಂಡೆ, ಇದಕ್ಕೊಂದುಪಾಯವನ್ನು, ಈ ಕಣ್ಣಿಗೆ ನನ್ನ ಕಣ್ಣು ಕೊಟ್ಟು ನೋಡುತ್ತೇನೆ. ಅದರಿಂದಲು ವಾಸಿಯಾಗದಿದ್ದರೆ ತಲೆಯನ್ನ ಕತ್ತರಿಸಿ ಒಪ್ಪಿಸಿಬಿಡುತ್ತೇನೆ” ಎಂದುಕೊಂಡನು. ಆ ಕ್ಷಣವೇ ಬಹು ಹರಿತ ವಾದ ಒಂದಂಬನ್ನು ತೆಗೆದುಕೊಂಡು ಸ್ವಲ್ಪವೂ ಅಳುಕದೆ, ಅನುಮಾನಿಸದೆ, * ಕಾಳಯರಸನೇ, ನೋಡು ” ಎಂದು ನುಡಿಯುತ್ತ ತಟಕ್ಕನೆ ಒಂದು ಕಣ್ಣನ್ನು ಮಾಟ ತೆಗೆದನು. ಆಗೆದು ಲಿಂಗದ ಒಡೆದ ಕಣೋಳಕ್ಕೆ ಒತ್ತಿ ನೋಡಿದನು. ಆ ಕಣ್ಣು ಥಳಥಳನೆ ಬೆಳಗುತ್ತಿರಲು ನೋಡಿ ಕಣ್ಣಪ್ಪ ಆನಂದಮಯನಾದನು. ಹಾಗೆ ಅವನು ನಲವೇರುತ್ತಿರುವಾಗಲೆ ಲಿಂಗದ ಮತ್ತೊಂದು ಕಣ್ಣಿನಿಂದ ನೆತ್ತರೊಸರಲು ಮೊದಲಾಯಿತು. ಅದನ್ನು ಕಂಡು ಕಟ್ಟಾಳು ಕಣ್ಣಪ್ಪ, “ ನಾನು ಕಲಿ, ಇನ್ನಂಜೆ, ಇನ್ನಂಜೆ, ನನಗೆ ಇನ್ನೂ ಒಂದು ಕಣ್ಣಿದೆ. ಅದನ್ನು ನಿನಗೆ ಕೊಡುತ್ತೇನೆ, ಎನ್ನವನೇ, ಎನ್ನ ವನೇ, ಆ ಬಳಿಕ ನೀನು ನನಗಿದ್ದ ಇರುವೆ” ಎಂದು ನಿಶ್ಚಿಂತನಾಗಿ ನುಡಿ ದನು. ಆಮೇಲೆ ಚಂದ್ರಶೇಖರನ ಒಡೆದ ಕಣ್ಣು ನೋಯದ ಹಾಗೆ ಕಾಲು ಗುಷ್ಠದಿಂದ ಅದನ್ನೂ ಕಣ್'ಕುರುಹು ಮಾಡಿಕೊಂಡನು. ತನ್ನ ಉಳಿದ ಕಣ್ಣನ್ನೂ ಕಿತ್ತು ತಂದು, ಮುಕ್ಕಣ್ಣನು ಒಲಿದು ಕಣ್ತೆರೆದು ನೋಡುವ