ಪುಟ:Kannada-Saahitya.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿನ್ನರ ಬೊಮ್ಮಯ್ಯ ಆತನ ಬುದ್ದಿ ಸಾಮರ್ಥ್ಯದಿಂದ ಬಸವಣ್ಣನಿಗೆ ಅರಮನೆಯ ಕರಣಿಕ ಶಾಲೆ ಯಲ್ಲಿ ವರ್ಷಕ್ಕೆ ನೂರೊಂದು ಹೊನ್ನು ಸಂಬಳದ ಒಂದು ಕೆಲಸ ದೊರೆ ಯಿತು. ರಾಜಭಂಡಾರದ ಮುಖ್ಯಾಧಿಕಾರಿಯಾಗಿದ್ದ ಸಿದ್ಧ ದಂಡೇಶನು ಬಸ ವಣ್ಣನ ಗುಣಗಳಿಗೆ ಮೆಚ್ಚಿ ಅವನನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ಸ್ವಂತ ಮಗನಂತೆ ನಡಸಿಕೊಳ್ಳುತ್ತಿದ್ದನು, ಬಸವಣ್ಣನ ಯೋಗ್ಯತೆ ದಿನ ದಿನಕ್ಕೆ ಹೆಚ್ಚು ಹೆಚ್ಚಾಗಿ ಪ್ರಕಾಶವಾಗುತ್ತಿತ್ತು. ಕಾಲಕ್ರಮದಲ್ಲಿ ಸಿದ್ದ ದಂಡೇಶನು ಮೃತನಾಗಲು ಆತನ ಆಸ್ತಿಯನ್ನೂ ಅಧಿಕಾರವನ್ನೂ ಬಿಜ್ಜಳ ರಾಯನು ಬಸವಣ್ಣನಿಗೇ ಕೊಡಿಸಿದನು. ಬಸವಣ್ಣ ಕಾಜನ ಭಂಡಾರಿಯಾದನು. ಹೀಗೆ ಹೆಚ್ಚಿನ ಅಧಿಕಾರ ಕೈಗೆ ಬಂದರೂ ಬಸವಣ್ಣ ತನ್ನ ಜೀವನದ ಗುರಿಯನ್ನು ಸ್ವಲ್ಪವೂ ಮರೆಯಲಿಲ್ಲ. ಅಧಿಕಾರದ ಜೊತೆಜೊತೆಯಲ್ಲಿ ಶಿವ ಭಕ್ತಿಯೂ ಬೆಳೆಯುತ್ತಿತ್ತು. ತನ್ನ ತನು ಮನ ಧನಗಳನ್ನೆಲ್ಲ ಶಿವಾರ್ಪಣ ಮಾಡಿದ್ದ ಬಸವಣ್ಣನು ತನಗೆ ದೊರೆತ ಉನ್ನತ ಪದವಿಯಿಂದ ನೀರಶೈವ ವನ್ನು ಬೆಳಗಬೇಕೆ೦ದೂ ಶಿವಶರಣರ ಏಳಿಗೆಯನ್ನು ಸಾಧಿಸಬೇಕೆಂದೂ ಸಂ ಕಲ್ಪಿಸಿದನು. ಏಕನಿಷ್ಠೆಯಿಂದ ಅದರಂತೆ ನಡೆಯತೊಡಗಿದನು. - ಬಸವಣ್ಣ ಅನುಸರಿಸಿದ ನೀರಶೈವ ಧರ್ಮ ಹಲವು ವಿಷಯಗಳಲ್ಲಿ ಸಂಪ್ರದಾಯ ಧರ್ಮಕ್ಕೆ ಹೊಂದುತ್ತಿರಲಿಲ್ಲ. ಸಮಾಜದ ಕಟ್ಟುಪಾಡುಗಳಲ್ಲೂ ಕೆಲವಕ್ಕೆ ವಿರೋಧವಾಗಿತ್ತು. ಈ ಕ್ರಾಂತಿಕಾರಕ ಧರ್ಮವನ್ನು ಬೋಧಿಸಿ ಆಚರಿಸುತ್ತಿದ್ದವರಿಗೆಲ್ಲ ಬಸವಣ್ಣ ಮುಂದಾಳಾದನು. ಆತನ ಕೀರ್ತಿ ಎಲ್ಲ ಕಡೆಗೂ ಹರಡಿತು. ದೇಶದೇಶಾಂತರಗಳಿಂದ ಶಿವಶರಣರು ಮಂಗಳವಾಡಕ್ಕೆ ಬರತೊಡಗಿದರು, ಎಲ್ಲರನ್ನೂ ಬಸವಣ್ಣ ಆದರಿಸಿ ಸತ್ಕರಿಸುತ್ತಿದ್ದನು. ತನ್ನ ಸರ್ವ ಸಂಪತ್ತನ್ನೂ ಜಂಗಮರ ಸೇವೆಗೆ ವಿನಿಯೋಗಿಸುತ್ತಿದ್ದನು. 'ಜಂಗಮ ಸೇವೆಯೇ ಶಿವನ ಸೇವೆ' ಎಂದು ಬಸವಣ್ಣನ ದೃಢ ನಂಬಿಕೆ. ಜಂಗಮರಲ್ಲಿ * ಕೀಳು, ಮೇಲು ' ಎಂಬ ಯಾವ ಭೇದವನೂ ಎಣಿಸದೆ ಎಲ್ಲರನ್ನೂ ಶಿವ ನೆಂದೇ ಭಾವಿಸಿ ಭಕ್ತಿಯಿಂದ ಆರಾಧಿಸುತ್ತಿದ್ದನು. ಇದರಿಂದ ಆತ ಶಿವನ * ಭಕ್ತಿ ಭಂಡಾರಿ 'ಯೂ ಆಗದು