ಪುಟ:Kannada-Saahitya.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಆ ಭಕ್ತಿಯನ್ನೂ ನಿಷ್ಠೆಯನ್ನೂ ಒರೆಹಚ್ಚಿ ನೋಡುವ ಅನೇಕ ಘಟನೆ ಗಳು ನಡೆದವು. ಎಲ್ಲ ಸಂದರ್ಭಗಳಲ್ಲಿ ಬಸವಣ್ಣನ ಮಹಾಮಹಿಮೆಯೆ ಜಯಿಸಿತು, ಬರಿಯ ಪೀರರೈನರೇ ಏಕೆ, ಮೊ: ಬಿಜ್ಜಳನು ಕೂಡ ಬಸ ವಣ್ಣ ಅವತಾರಪುರುಷನೆಂದು ನಂಬುವಂತಾಯಿತು. ರಾಜ್ಯದ ಮುಖ್ಯಾಧಿ ಕಾರಿಯಾಗಿ, ಭಕ್ತಿ ಭಂಡಾರಿಯಾಗಿ ಬಸವಣ್ಣನು ಸುಖದಿಂದಿದ್ದನು.] ಹೀಗಿರುವಲ್ಲಿ ಒಮ್ಮೆ ಕಿನ್ನರ ಬೊಮ್ಮಯ್ಯನೆಂಬ ಪರಮ ಸಾತ್ವಿಕನಾದ ಶಿವಶರಣನೊಬ್ಬನು ಬಸವಣ್ಣನ ಭಕ್ತಿ, ನಿಷ್ಠೆ, ದಾನ ಶೀಲತೆಗಳನ್ನು ಕೇಳಿ ಆತನನ್ನು ನೋಡಬೇಕೆಂದು ಆಸಪಟ್ಟನು. ತನ್ನೂರಿನಿಂದ ಭಕ್ತಗಣ ದೊಡನೆ ಹೊರಟು ಸಂತೋಷದಿಂದ ನು೦ಗಳವಾಡಕ್ಕೆ ಬಂದನು. ಇತ್ತ ಪರಮ ಭಕ್ತನಾದ ಬಸವಣ್ಣನಿಗೆ ಬಲಗಣ್ಣು ಅಮರಿರು ; ಮನಸ್ಸಿನಲ್ಲಿ ಆನಂದ ಉಕ್ಕತೊಡಗಿತು. “ ಇಂದು ನಭಕ್ಕರು ನನ್ನ ಮನೆಗೆ ಬರು ತ್ತಾರೆ” ಎಂದು ನಿರೀಕ್ಷಸ ಎದುರುಗೊಳ್ಳಲು ಹೊರಟನು. ನಂದಿಯ ಪತಾಕೆಗಳನ್ನು ಮುಂದುಗಡೆ ಹಿಡಿದಿರ ಭಕ್ತ ಸಮೂಹದ ನಡುವೆ ಕಿನ್ನರಯ್ಯ ಬರುತ್ತಿರುವುದು ದೂರದಿಂದಲೆ ಕಾಣಿಸಿತು. ಬಸವಣ್ಣನು ಪರಿವಾರದೊಡನೆ ಹೋಗಿ ಎದುರುಗೊಂಡು ಭಯಭಕ್ತಿಯಿಂದ ಕಿನ್ನರಯ್ಯ ನಿಗೆ ಅಡ್ಡಬಿದ್ದನು. ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಕುಶಲ ಪ್ರಶ್ನೆಗಳಿಂದ ಆದರಿಸಿದರು. ಉತ್ತಮ ಶಿವಭಕ್ತನ ದರ್ಶನವಾಯಿತೆಂದು ಇಬ್ಬರೂ ಸಂತೋಷಪಟ್ಟರು. - ಬಸವಣ್ಣ ನು ಕಿನ್ನರಯ್ಯನನ್ನು ತನ್ನ ಮನೆಗೆ ಒಡಗೊಂಡು ಕರೆ ತಂದನು, ಉನ್ನತವಾದ ಪೀಠದಲ್ಲಿ ಕುಳ್ಳಿರಿಸಿ ಆತನ ಪಾದಗಳನ್ನು ತೊಳೆದು ತೀರ್ಥವನ್ನು ತಲೆಗೆ ಎಳೆದುಕೊಂಡನು ಕಿಂಕರನಂತ ಕಿನ್ನ ರಯ್ಯನಿಗೆ ಸೇವೆ ಮಾಡಿದನು. ಲಿಂಗಾರ್ಚನೆಗೆ ಬೇಕಾದ ಸಕಲ ಸಾಮಗ್ರಿಗಳನ್ನೂ ತರಿಸಿ ಕೊಟ್ಟನು, ಆತನೊಡನೆಯೆ ತಾನಃ ಸಂಗನಿಗೆ ಪೂಜೆ ಮಾಡಿದನು ; ಆತ ನೊಡನೆಯೆ ಶಿವಪ್ರಸಾದಗಳನ್ನು ಸ್ವೀಕರಿಸಿದನು. ಕಿನ್ನರಯ್ಯನಿಗೆ ಉಡಲೂ ತೊಡಲೂ ಉತ್ತಮ ವಸ್ತ್ರಾಭರಣಗಳನ್ನು ಕೊಟ್ಟನು. ಆತನ ಹರ್ಷವೇ ತನಗೆ ಹರ್ಷವಾಗಲು ಆದರದಿಂದ ಆತನನ್ನು ಉಪಚರಿಸುತ್ತಿದ್ದನು. ಕೆಲವು ದಿನಗಳಲ್ಲಿ ಒಬ್ಬರನ್ನೊಬ್ಬರಿಗೆ ಒಲವು ಹೆಚ್ಚಿ ಸ್ನೇಹ ಒಲಿಯಿತು.