ಪುಟ:Kannada-Saahitya.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿನ್ನರ ಬೊಮ್ಮಯ್ಯ ಹೀಗಿರಲು ಒಂದು ದಿನ ಕಿನ್ನ ರಯ್ಯನು ನನ ಆರೋಗಣೆಗೆ ಉಳ್ಳಿ ಬೇಕೆಂದು ಬಯಸಿದನು. ನನಗೆ ಯಾವುದು ಸೊಗಸೊ ಆದೇ ಶಿವನಿಗೂ ಸೊಗಸೆಂದು ಅವನ ಭಾವನೆ. ಚೆನ್ನಾದ ಉಗಳನ್ನು ತರಿಸಿ ಶರಣರೊಡನೆ ಮಾತಾಡುತ್ತ ಅಡಿಗೆಗಾಗಿ ಅವನ್ನು ಶೋಧಿಸುತ್ತಿದ್ದನು. ಉಳ್ಳಿಯ ಕಂಪು ಬಸವಣ್ಣನ ಮಗಿಗೆ ತೀಡಿತು. ಕಿನ್ನರಯ್ಯ ಬಯಸಿ ತರಿಸಿರುವನೆಂಬ ಸಂಗತಿಯನ್ನರಿಯದೆ ಬಸವಣ್ಣ, ಈ ಅಭಿಜ್ಯ ವಸ್ತುವನ್ನು ತಂದವರು ಯಾರು ?” ಎಂದು ಆಕ್ಷೇಪಿಸಿ ಉಳ್ಳಿಯನ್ನು ನಿಂದಿಸಿ ಅರಮನೆಗೆ ಹೋದನು. ಬಸವಣ್ಣನಾಡಿದ ಮಾತು ಕಿನ್ನರಯ್ಯನಿಗೆ ಕೇಳಿಸಿತು. “ ಏನೆಂದು ಬಿಟ್ಟ, ಬಸವಣ್ಣ ! ” ಎಂದು ಮೊದಲು ಕೋಪ ಬಂತು. ಮರುಕ್ಷಣವೆ ಕೋಪ ನೋವಾಗಿ ಪರಿಣಮಿಸಿತು, ನೊಂದು ಕಣ್ಣೀರಿಡುತ್ತ, “ ಹರಹರಾ ! ನಾನಿಲ್ಲಿ ಬರಬಾರದಾಗಿತ್ತು. ಬಂದಮೇಲೆ ಸೈರಿಸಬೇಕು ! ಶರಣರ ಮಹಿಮೆ ಯನ್ನು ದೂರದಲ್ಲಿ ಕೇಳಿ ಆದರಿಸುವುದು ಒಳ್ಳೆಯದು. ಮಲ್ಲಯ್ಯನು ಆಯೋಗಿಸುವ ಈ ಅಮೃತಮಯ ಶಾಕವನ್ನು ನಿಂದಿಸಿದರಲ್ಲಾ ! ಆ ನಿಂದೆ ಯನ್ನು ಕೇಳಿದಮೇಲೆ ಇಲ್ಲಿ ನಿಲ್ಲಲಾಗದು ” ಎಂದು ನಿರ್ಧರಮಾಡಿಕೊಂಡನು. ಮುನಿದು ಕೂಡಲೇ ಹೊರಹೊರಟು ನಡೆದನು, ಮಂಗಳವಾಡದಿಂದ ಒಂದು ಗಾವುದ ದೂರದಲ್ಲಿದ್ದ ಒಂದೂರನ್ನು ಸೇರಿ ಅಲ್ಲಿ ದೇವಾರ್ಚನೆಯ ನಿತ್ಯ ನೇಮಕ್ಕೆ ಅಣಿಮಾಡಿಕೊಳ್ಳುತ್ತಿದ್ದನು, ಇತ್ತ ಬಸವಣ್ಣನು ಅರಮನೆಯಿಂದ ಬಂದು, ಮಿಂದು ಮಡಿಯುಟ್ಟು ಎಂದಿನಂತೆ ಶರಣರ ಆರಾಧನೆಗೆ ಸಿದ್ಧಮಾಡಿಕೊಂಡನು. ಕಿನ್ನರಯ್ಯನನ್ನು ನೋಡಹೋದರೆ ಆತನಿರಲಿಲ್ಲ. ಎಲ್ಲಿ ಹುಡುಕಿದರೂ ಕಾಣಲಿಲ್ಲ. ಬಸವಣ್ಣ ನಿಗೆ ಭಯವಾಯಿತು. “ ಎನ್ನೊಡೆಯನೆಲ್ಲಿ ? ” ಎಂದು ' ಸುತ್ತಲಿದ್ದ ಶರಣ ರನ್ನು ಕೇಳಿಕೊಂಡನು. ಆವರು, " ಎಲೆ ಬಸವ, ಕಿನ್ನರಯ್ಯಗಳು ತಮ್ಮ ದೇವ ಮಲ್ಲಿನಾಥನಿಗೆ ಸೊಗಸಾದ ಉಳ್ಳಿಯನ್ನು ತರಿಸಿದರೆ, ಅದನ್ನು ನಿಂದಿಸಿದರೆಂದು ಕೋಪಗೊಂಡರು. ಕೆಂಡವನ್ನು ಮೆಟ್ಟಿದ ಹಾಗೆ ಸಂತಾಪ ಪಟ್ಟು ಮುನಿಸಿಕೊಂಡು ಹೊರಟು ಹೋದರು. ಆತ ಗುಣವಂತ ಅಭಿ ಮಾನಿ, ಮುಕ್ಕಣ್ಣನ ಅವತಾರ. ಅಂಥ ಶರಣ ಮುನಿದು ಹೋಗಿಬಿಟ್ಟ, ದೇವಾ!” ಎಂದರು,