ಪುಟ:Kannada-Saahitya.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ರಿಗೂ ತೃಪ್ತಿಯಿಲ್ಲ ; ತಬ್ಬಿ ಒಬ್ಬರೊಳಗೊಬ್ಬರು ಹೊಗಬಯಸುವರೋ ಎಂಬಂತೆ ಕಾಣುತ್ತಿದ್ದರು. ಆಲಿಕಲ್ಲು ಆಲಿಕಲ್ಲನ್ನು ತಾಗಿದಂತಾಯಿತು ; ಹಾಲೊಳಗೆ ಹಾಲು ಬೆರೆಸಿದ ಹಾಗಾಯಿತು ; ಬೆಳಕು ಬೆಳಕನ್ನು ತಬ್ಬಿದಂ ತಾಯಿತು ; ಅಮೃತ ಅದ್ಭುತವನ್ನು ಅಪ್ಪಿ ಕೊಂಡಂತಾಯಿತು. ಹೀಗೆ ಪರಿ ಶುದ್ದ ಮೂರ್ತಿಗಳಾದ ಆ ಇಬ್ಬರೂ ಸ್ನೇಹಪರವಶರಾಗಿರಲು ಕಹಳೆ ದುಂದುಭಿಗಳು ಮೊಳಗಿದವು. ಭಕ್ತರೆಲ್ಲರೂ ಹರಸಿದರು ; ಬಸವಣ್ಣನನ್ನೂ ಕಿನ್ನರಯ್ಯನನ್ನೂ ಸರಿಪರಿಯಾಗಿ ಕೊಂಡಾಡಿದರು. ಪರನು ಸಂಭ್ರಮದಿಂದ ಕಿನ್ನ ರಯ್ಯನನ್ನೊಡಗೊಂಡ ಬಸವಣ್ಣ ಮಂಗಳವಾಡಕ್ಕೆ ಹಿಂದಿರುಗಿದನು. ದಾರಿಯುದ್ದಕ್ಕೂ ಮಾಡಿದ್ದ ಉಳ್ಳಿಯ ಅಲಂಕಾರವನ್ನು ನೋಡಿ ವಿಸ್ಮಯ ಪಡುತ್ತ ಕಿನ್ನರಯ್ಯನು ಬಸವಣ್ಣನ ಮಹಮನೆಗೆ ಬಂದು ಸೇರಿದನು. ಮಲ್ಲಿಗೆಯ ಬಣ , ಬೆಳದಿಂಗಳ ಬೆಳಕುಗಳನ್ನು ಅಪಹರಿಸಿರುವಂತೆ ಥಳಥಳಿಸುವ ಉಳ್ಳಿಗಳಿಂದ ಮಾಡಿದ ಬಗೆಬಗೆಯ ಪಕ್ವಾನ್ನಗಳನ್ನು ಶಿವರ ಣರು ಶಿವನಿಗರ್ಪಿಸಿದರು ; ಲಿಂಗಕ್ಕೆರಗಿ ಪರಮ ಪ್ರಸಾದವನ್ನು ಕೈಕೊಂಡರು. ಕಿನ್ನರಯ್ಯನನ್ನೂ ಅವನಿಗೆ ಸರಿಯಾದ ಉಳ್ಳಿಯನ್ನೂ ಸಂತೋಷದಿಂದ ಹರಸಿದರು. ಕಿರಯ್ಯನನ್ನು ಆ ರೀತಿ ಮನ್ನಿಸಿ ಜಂಗಮ ಸೇವೆಯ ಹಿರಿಮೆಯನ್ನು ಮೆರೆದ ಬಸವಣ್ಣನನ್ನು, * ಶರಣರ ಬಂಧು, ಶರಣರೊಲು ಮೆಯ ಬಸವ, ಶರಣರ ಮನೆಯ ವರುಷ ವರುಷನೆ, ಬಸವ, ಬಸವಯ್ಯ, ಬಸವಣ್ಣ, ದಂಡನಾಥನ ಬಸವ, ಗಜನಿಸರಬೆಳೆ ನರ ಸಂಗನ ಬಸವ ? ಎಂದು ಮೈಯುಬ್ಬಿ ಹೊರತರು ; ಹರಸಿದರು ಬಸವಣ್ಣನು ಆ ತೆಗಳಿಕೆ ಯ ನುಡಿಗಳಿಗೆ ನಡ ನಡುಗಿದನು. * ಒಂದನ್ನೂ ಹೊಗಳದಿ೦ ಎಂದು ಅವರ ಕಾಲಿಗೆರಗಿದನು. “ ಇಲ್ಲಿಂದ ಮುಂದೆ ಪ್ರತಿ ವರ್ಷವೂ ಹೀಗೆಯೆ ಉಳ್ಳಿಯ ರಬ್ಬವನ್ನು ಮಾಡುತ್ತೇನೆ, ಇದು ನನಗೆ ನೇಮ ” ಎಂದು ನುಡಿದನು. ಕಿನ್ನರಯ್ಯನ ಮುನಿಸನ್ನು ಉಳ್ಳಿಯ ಹಬ್ಬದಿಂದ ಪರಿಹರಿಸಿ ಭಕ್ತಿಭಂಡಾರಿ ಬಸವಣ್ಣನು ಸಂಗಮ ಧ್ಯಾನದಲ್ಲಿ ಪರಮಸುಖದಿಂದಿದ್ದನು.