ಪುಟ:Kannada-Saahitya.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉತ್ತರ ಕುಮಾರ ಆ ಗೊಲ್ಲ ಕೈಯ ಬಿಲ್ಲನ್ನು ಬಿಸುಟು, ಬದುಕಿ ಉಳಿದುಕೊಂಡ ತನ್ನ 'ತಲೆಯನ್ನು ಅಡಿಗಡಿಗೆ ಸವರಿಕೊಳ್ಳುತ್ತ ಪಟ್ಟಣಕ್ಕೆ ಓಡಿದನು. ಕಂಡು ಜನ ನೆಲ್ಲ “ ಮತ್ತೆ ಈ ರಣವಾರ್ತೆಯಿದೇನು ? ” ಎಂದು ಗಜಬಜಿಸಿದರು. ಬಾಯಾರಿ ಗಂಟಲೊಣಗಿದ ಆ ಗೊಲ್ಲ, “ ಈ ರಣ ಕಿರಿದಲ್ಲ” ಎಂದು ನುಡಿ ಯುತ್ತ ಅರಮನೆಯತ್ತ ವೇಗದಿಂದ ನಡೆದನು. ಅರಮನೆಯಲ್ಲಿ ದೊರೆಯಿಲ್ಲ. ದೊರೆಮಗ ಉತ್ತರ ಮೇಳದ ಗಣಿಕೆ ಯರ ಮಧ್ಯದಲ್ಲಿ ಮೆರೆಯುತ್ತಿದ್ದಾನೆ. ಗೊಲ್ಲನಿಗೆ ಮುಖದಲ್ಲಿ ಭೀತಿ ಎದು ಕಾಣುತ್ತಿದೆ ; ಎದೆ ಬಡಿದುಕೊಳ್ಳುತ್ತಿದೆ ; ಗಂಟಲೊಣಗಿ ನಾಲಗೆ ತೊದಲೆ ತಿದೆ. ಹಾಗೆಯೇ ಹುಯ್ಯಲಿಡುತ್ತ ಉತ್ತರನ ಓಲಗವನ್ನು ಹೊಕ್ಕು ಕಾಲಿ ಗೆರಗಿ ಸುದ್ದಿ ಹೇಳಿದನು. * ಏಳು ದೊರೆಯೇ, ಗಂಡನಾಗು, ಕೌರವರಾಯ ತುರುಗಳನ್ನು ಹಿಡಿದನು. ನಂದಗಲಕ್ಕೂ ಸೇನೆ ಬಂತು, ದಾಳಿ ಬರುತ್ತಿದೆ. ಆಳು ಕುದುರೆಗಳನ್ನು ಕರೆಸಿಕೊ, ರಾಣಿವಾಸದ ಗೂಳೆಯ ತೆಗಸು ” ಎಂದು ಬಿನ್ನಯಿಸಿದನು. ದೊರೆಮಗನಿಗೆ ಏನೋವನೆನಿಸಿರಬೇಕು. ಕಾಲಿಗೆರಗಿದ ಗೊಲ್ಲನನ್ನು ಕುರಿತು, " ಎಲವೋ , ಏನಿದು ? ತುದಿನಗಿನಲ್ಲಿ ಬಿಳುವೇನು ? ಢಗೆ ಹೊಯು ಅದೇಕೆ ಓಡಿ ಬಂದೆ ? ನಿನ್ನಿನ ರಣವನ್ನು ಆಯ ಗೆದ್ದನಲ್ಲಾ, ಅದೇನಾಯಿತು ? ಭಯ ಬೇಡ, ಕಲಹದ ವಾರ್ತೆಯನ್ನು ತಿಳಿಸು” ಎಂದನು. ಗೊಲ್ಲನು ಹೇಳತೊಡಗಿದನು: “ ಕೌರವರ ಸೇನೆ ಬಂತು. ಬಡಗ ದಿಕ್ಕಿನಲ್ಲಿ ತುರುಗಳನ್ನು ಹಿಡಿಯಿತು. ಕೌರವರಾಯ ಬಂದ. ಆತನ ನಾಯಕರು---- ಅಶ್ವತ್ಥಾಮ, ದ್ರೋಣ, ಭೀಷ್ಮ, ಶಕುನಿ, ವಿಕರ್ಣ, ಕರ್ಣ, ಜಯದ್ರಥ ಮೊದಲಾದವರು ಎಲ್ಲರೂ ಬಂದರ., ಜೀಯ, ಆ ದಳ ಎಷ್ಟು ದೊಡ್ಡ ದೊ ನಾನೇನು ಬಲ್ಲೆ ? ಎತ್ತ ಕಣ್ಣು ಹೊರಳಿಸಿದರೂ ಅತ್ತ ಆನೆಗಳೂ ಕಾಲಾಳು ಗಳೂ ರಥಗಳೂ ಕುದುರೆಗಳೂ ರಾಯರಾವುತರೂ ಗುಂಪು ಗುಂಪಾಗಿ ಸುತ್ತ ಬಳಸಿರುವರು. ಮನಸ್ಸು ಹರಿಯುವಷ್ಟು ದೂರಕ್ಕೂ ಶತ್ರುಸೇನೆ ಯಲ್ಲದೆ ಮತ್ತೇನೂ ಕಾಣಿಸದು. ಸೂರ್ಯಕಿರಣ ಕೂಡ ನುಸುಳಿ ಬರಲಾರ ಬೆನ್ನು ಎಷ್ಟು ದಟ್ಟವಾಗಿದೆ ಆ ಪಡೆಯ ಒಡು, ನೀನು ಒಳಗೇ ನಿಂತು ಕಾದುವ ಹಾಗಿದ್ದರೆ ದುರ್ಗವನ್ನು ಭದ್ರಪಡಿಸು. ಕಾಳಗವನ್ನು ಹಿಂದುಗಳೆ