ಪುಟ:Kannada-Saahitya.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

| ಕನ್ನಡ ಸಾಹಿತ್ಯ ಚಿತ್ರಗಳು ಯದೆ ಮುನ್ನುಗ್ಗುವ ಮನಸ್ಸುಳ್ಳವನಾದರೆ ಈಗಲೇ ಹೊರಡರ್ಬೇಕು ಎಂದನು, ಆ ಮಾತನ್ನು ಕೇಳಿ ಉತ್ತರ ಕುಮಾರ ಕೆಲಬಲವನ್ನು ನೋಡಿದನು ; ಮಾಸೆಯನ್ನ ಲುಗಿಸಿದನು. ತನ್ನೆದುರಿಗೆ ನೆರೆದಿದ್ದ ಲಲನೆಯರ ಮೊಗ ನೋಡುತ್ತ ಬಿಂಕದಿಂದ ತನ್ನ ಪರಾಕ್ರಮವನ್ನು ಪ್ರದರ್ಶಿಸುತ್ತ " ನೂಕಾಚೆ, ಈ ಕುನ್ನಿಯನ್ನು ಯುದ್ಧ ಮಾಡದೆ ಭೀತಿಯಿಂದ ಕಳವಳಪಟ್ಟು ಕೊಂಡಿ ರನ್ನು ಸಾಕಲೆ೦ದು ಬದುಕುವ ಆಸೆಯಿಂದ ಇಲ್ಲಿಗೆ ಓಡಿಬಂದು ನನ್ನೊಡನೆ ಏನೇನೋ ಹರಟುತ್ತಾನೆ ! ನಾನೇನಾದರೂ ಕೋಪೋದ್ರೇಕದಿಂದ ಯುದ್ಧ ಕೈ ನಿಂತೆನಾದರೆ ಆ ಪಿನಾಕಧರನಿಗೂ ಅಸಾಧ್ಯವಾಗುವುದು ” ಎಂದನು. ಉತ್ತರನ ನುಡಿಗಳನ್ನಾಲಿಸಿ ಸತಿಯರು, “ ಜೀಯ, ಕೌರವನ ಬಲ ಎಷ್ಟು ಘನವಾದರೇನು ನಿನಗೆ ಗಹನವೆ ? ಕತ್ತಲೆ ಎಷ್ಟು ದಟ್ಟವಾಗಿದ್ದರೂ ಸೂರ್ಯನೆದುರಿಗೆ ಅದಕ್ಕೆ ದಿಟ್ಟತನವೆ ? ಆ ಬಿನುಗು ರಾಯರ ಬಿಂಕ ಗೋವಳರ ಮೇಲೆ ಕೈ ಮಾಡುವುದರಲ್ಲಿ , ದೊರೆಯೇ, ಆ ಕೌರವರ ಸೈನ್ಯದಲ್ಲಿ ನಿನ್ನ ಕೈಗುಣವನ್ನು ತೋರಿಸು ” ಎಂದು ಉತ್ತೇಜಿಸಿದರು. ಸತಿಯರು ಹೀಗೆ ಹೊಗಳಲು ಉತ್ತರನು ಉಬ್ಬಿದನು ; ತಾನು ಶೂರ ನೆಂದೇ ಭಾವಿಸಿದನು. ಬೆರಳಿನಿಂದ ಮಾಸೆ ತಿರುವುತ್ತ ಮುಗುಳುನಗೆ ನಗುತ್ತ ಹರ್ಷದಲ್ಲಿ ಮೈಮರೆತನು, ರೋಮಾಂಚ ಹೊಂದಿ ಸುತ್ತಮುತ್ತಣ ಇ೦ದು ಮುಖಿಯರನ್ನು ನೋಡಿ ನಲಿಯುತ್ತ ತನ್ನ ಪೌರುಷದ ಹೆಚ್ಚಿಗೆಯನ್ನು ಹೊಗಳಿಕೊಳ್ಳತೊಡಗಿದನು.

  • ಜೂಜಿನ ಮೋಸದಲ್ಲಿ ಪಾಂಡವರನ್ನು ಸೋಲಿಸಿ ರಾಜ್ಯ ವನ್ನು ತೆಗೆದು ಕೊಂಡ ಹಾಗೆಂದು ಭಾವಿಸಿ ನನ್ನನ್ನು ಕೆಣಕಿದನೇ ಆ ಸುಯೋಧನ ? ಸಾಹಸವನ್ನು ಮೆರೆದು ಮೊದಲು ತುರುಗಳನ್ನು ಮರಳಿಸಿ ತರುತ್ತೇನೆ. ಆ ಮೇಲೆ ಕೌರವನನ್ನು ಸುಮ್ಮನೆ ಬಿಡುವೆನೆ ? ಅವನ ಹಸ್ತಿನಾಪುರವನ್ನು ಸೂರೆ ಮಾಡಿ ಬಿಡುತ್ತೇನೆ. ಆವನೆಂಥ ಶೂರನೆಂಬುದನ್ನು ನಾನೇನರಿಯೆನೆ ? ಜೂಜಿನಲ್ಲಿ ರಾಜ್ಯವನ್ನು ಕಸಿದುಕೊಂಡ ; ಹೆಂಗಸನ್ನು ಬಡಿದ. ಪಾಂಡ ವರನ್ನು ಹೊರಹೊರಡಿಸಿ ಕೊಬ್ಬಿದ್ದಾನೆ. ಆ ಪರಿಯ ಭುಜಬಲವನ್ನು ನನ್ನ ಮೇಲೆ ತೋರಿಸಬಂದನಲ್ಲ ! ನನ್ನನ್ನು ಬಡ ಯುಧಿಷ್ಟಿರನೆಂದು ತಿಳಿದನೋ