ಪುಟ:Kannada-Saahitya.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉತ್ತರ ಕುಮಾರ ಏನೂ ! ಪಾಂಡವರನ್ನು ತಗ್ಗಿಸಿದೆನೆಂಬ ಕೊಬ್ಬಿನಿಂದ ನನ್ನನ್ನು ಕೆಣಕಿದ್ದು ಯಮನ ಬಾಸೆಯನ್ನು ಹಿಡಿದೆಳೆದಂತಾಯಿತು. ಮೃತ್ಯು ದೇವತೆಯ ಸೆರಗು ತೆಗೆದಂತಾಯಿತು. ಅಯ್ಯೋ, ಮರುಳಾಗಿ ಕೌರವ ಕೆಟ್ಟ ! ಇನ್ನ ವನು ಬದುಕಿ ನೆಲವನುಳುವನೆ ? `ಯವನ ಮನೆಯನ್ನು ಸೇರುವನು, ಅದು ಸರಿ, ನಾನು ಕಾಳಗಕ್ಕೆ ಹೋದರೆ ಅಲ್ಲಿ ಯಾರೊಡನೆ ಕಾದಲಿ ? ನನ್ನೊಡನೆ ಕಾಳಗವಾಡಲು ಯೋಗ್ಯರಾದವರು ಯಾರೂ ಇಲ್ಲವಲ್ಲ ! ಕೆಲ ವರು ಹಾರುವರು ; ಇನ್ನು ಕೆಲವರು ಹಣ್ಣು ಹಣ್ಣು ಮುದುಕರಾಗಿ ಯಮನ ನೆರೆಯೂರಿನಲ್ಲಿರುವವರು ; ಇನ್ನು ಕೆಲವರು ಅಧಮ ಕುಲದಲ್ಲಿ ಬಂದವರು. ವೀರರೆನ್ನಿಸಿಕೊಂಡವರು ಇವರೇ. ವೀರರೆನ್ನಿಸಿಕೊಂಡ ಇವರೇ ಯುದ್ಧಕ್ಕೆ ಆರ್ಹರಲ್ಲದಿರಲು ನೀರರಲ್ಲದ ಉಳಿದವರ ಮಾತೇನು ? ದೇಶವನ್ನಾಳುವ ದೊರೆಗಳು ಬಂದು ದನಗಳನ್ನು ಹಿಡಿಯುವುದೇ ? ಈ ಕೆಲಸಮಾಡಿ ಕೌರವ ಕೀಳನಾದ. ಆದರೆ ತಾನೆ ಏನು ? ಅದು ಅವನಿಗೆ ದಕ್ಕೀತೆ ? ಎಂದಿಗೂ ಇಲ್ಲ. ದುರ್ಯಶಸ್ತೂಂದು ಶಾಶ್ವತವಾಗಿ ಉಳಿಯು ಇದೆ. ನನ್ನೊಡನೆ ಕಾದಿ ಬದುಕುವವನಾವನು ? ಆ ದುಷ್ಟನನ್ನು ಧ್ವಂಸ ಮಾಡುತ್ತೇನೆ. ಕೌರವನ ಸೇನೆಯನ್ನು ಧೂಳಿಪಟಮಾಡಿ ತೊಲಗಿಸಿಬಿಡು ತೇನೆ. ಗೆಲವು ಪಡೆದು ಅಷ್ಟಕ್ಕೆ ನಿಲ್ಲದೆ ಹಸ್ತಿನಾಪಟ್ಟಣದಲ್ಲಿ ಮತ್ತೊಂದು ತಾಣೆಯನ್ನು ಇಡುತ್ತೇನೆ, ” -ಹೀಗೆಂದು ಉತ್ತರನು ಹೆಂಗಸರೆದುರಿನಲ್ಲಿ ಮೈ ಕೈ ತಿರುವುತ್ತ ಕತ್ತಿ ಯನ್ನು ಕುಟ್ಟುತ್ತ ಬಾಯಿಗೆ ಬಂದಂತೆ ಹರಟುತ್ತಿದ್ದನು, ಬೇಕು ಬೇಡೆಂದು ತಿಳಿಯ ಹೇಳುವವರು ಯಾರೂ ಇರಲಿಲ್ಲ. ಯಾವ ತಡೆಯೂ ಇಲ್ಲದಿರಲು ಆವನು ಇನ್ನೂ ಮುಂದುವರಿಸಿದನು : “ ಭೀಷ್ಮನನ್ನು ನಾನರಿಯೆನೆ ? ನಾನು ತಿಳಿಯದವನೇ ಆ ದೋಣ ? ಕುಲದಲ್ಲಿ ಕೀಳಾದ ಕರ್ಣ ನನಗೆ ಸಮಬಲನೆ ? ಇಂಥವರನ್ನು ಕೂಡಿ ಕೊಂಡು ಬಂದು ಕೌರವ ಬರಿಯ ಬಯಲಾಡಂಬರದಲ್ಲಿ ತುರುಗಳನ್ನು ಹಿಡಿದನಲ್ಲಾ! ನಾನು ಹೋಗಿ ಅವನ ಹೆಂಡಿರನ್ನು ಸೆರೆಹಿಡಿದು ತರದೆ ಬಿಡು ವುದಿಲ್ಲ ಎಂದು ಜಂಬ ಕೊಚ್ಚಿದನು. ಅದನ್ನು ಕೇಳಿ ಆ ತರಳೆಯರು ಮನಸ್ಸಿನಲ್ಲಿ - ಗಹಗಹಿಸಿ ನಗುತ್ತಿದ್ದರು,