ಪುಟ:Kannada-Saahitya.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಸುಕುಮಾರ ಮತ್ತೂ ಮುಂದುವರಿಸಿದನು : “ ಮಾತಾಡಿ ಫಲವೇನು ? ನಿನ್ನಿನ ಕಾಳಗದಲ್ಲಿ ನನ್ನ ಸಾರಥಿ ಮಡಿದ ; ನಾನು ಹೆಳವನಾದೆ, ನನ್ನ ಪರಾಕ್ರಮಕ್ಕೂ ಉತ್ಸಾಹಕ್ಕೂ ತಕ್ಕವನಾದ ಸಾರಥಿಯೊಬ್ಬ ಸಿಕ್ಕಿದರೆ ಆಗ ತೋರಿಸುತ್ತೇನೆ ನನ್ನ ಕೈಗುಣವನ್ನು ಶಿವನು ಕೃಪೆಯಿಟ್ಟು ಸಾರಥಿಯನ್ನು ಕೊಟ್ಟನಾದರೆ, ಮಾರಿಗೆ ತಿಂದು ತಿ೦ದು ಉಬ್ಬಸ ಹತ್ತುವುದು ; ರಣಪಿಶಾಚಿ ಗಳ ಡೊಳ್ಳು ಮುಂದಕ್ಕೆ ನೂಕುವುದು ; ಯಮನ ಊರು ತುಂಬಿ ತುಳುಕು ವುದು ; ರಣ ಸಾರ್ಥಕವಾಗುವುದು ?” ಹೀಗೆ ತಡೆಯಿಲ್ಲದೆ ಗಳಸುತ್ತಿದ್ದ ರಾಜಕುಮಾರನ ಬಾಲಭಾಷಿತ ವನ್ನು ಅರ್ಜುನ ಆಲಿಸುತ್ತಿದ್ದನು. ಅವನು ಪಾಂಚಾಲೆಯನ್ನು ಒತ್ತಟ್ಟು ಕರೆದು, ನಾವು ಇನ್ನು ಸುಮ್ಮನಿರುವುದು ಸರಿಯಲ್ಲ. ಅವಧಿ ಮುಗಿಯಿತು. ಕೌರವರ ದಂಡು ಬಂದಿರುವುದು ನಮಸ್ಕರವೇ. ನಾವು ನಮ್ಮ ರಾಜ್ಯವನ್ನು ಕೈಗೆ ತೆಗೆದುಕೊಳ್ಳಬೇಕು. ಆದ್ದರಿಂದ ನಾನು ಅರ್ಜುನನ ಸಾರಥಿಯೆಂದು ಉತ್ತರೆಗೆ ಸೂಚಿಸಿ ನನ್ನನ್ನು ಕರಸುವಂತೆ ಮಾಡು ಎಂದು ಅವಳಿಗೆ ಗುಟ್ಟಾಗಿ ಹೇಳಿದನು. ಬ್ರೌಪದಿಗೆ ನಲವೇರಿತು ಉತ್ತರೆಯ ಬಳಿ ಬಂದು * ಅನಾ, ಈ ಬೃಹನ್ನಳೆ ಅರ್ಜುನನ ಸಾರಥಿ, ಖಾಂಡವ ವನವನ್ನು ಸುಟ್ಟಾಗ ಅಗ್ನಿಯನ್ನು ಕಾಯ್ದವನು ಇವನೇ ?” ಎಂದು ತಿಳಿಸಿದಳು. ಕೇಳಿ ಉತ್ತರೆ ಹರ್ಷಿತೆಯಾದಳು. ಓಲಗಕ್ಕೆ ಬಂದು ಅಣ್ಣ ನಡಿಗೆರಗಿ ಕೈ ಮುಗಿದು * ಸಾರಥಿಯ ನೆಲೆಯನ್ನು ಕೇಳಿದೆ. ಅಣ್ಣ ದೇವ, ಕಾಳಗಕ್ಕೆ ನಡೆ, ಭೂಪಾಲಕ ರನ್ನು ಜಯಿಸು ಎ೦ದಳು. - ( ತಂಗೀ, ಹೇಳಮ್ಮಾ ತಾಯ, ನಿನಗೆ ಈ ಸಂಗತಿಯನ್ನು ಯಾರು ಹೇಳಿದರು ? ಆತ ಸಾರಥಿತನದ ಕೆಲಸದಲ್ಲಿ ಸಮರ್ಥನೆ ? ಸಮರ್ಥನಾದರೆ ಮುಂದೆ ಮಂಗಳವುಂಟು; ಕಾಳಗದಲ್ಲಿ ನಾನು ಅಭಂಗಸಾದೆ. ನನ್ನ ಶೂರತನ ವನ್ನು ನೀನು ಉಳಿಸಿದೆ. ಹೇಳು, ಹೇಳು ” ಎಂದು ಉತ್ತರ ಬಹು ಆತುರ ದಿಂದ ಪ್ರಶ್ನೆ ಮಾಡಿದನು. 14 ಈ ಸೈರಂಧಿ, ನನಗೆ ಹೇಳಿದಳು. ಇಂದ್ರನ ನಂದನ (ಖಾಂಡವ) ವನವನ್ನು ಸುಡುವಾಗ ಈತನು ಪಾರ್ಥನಿಗೆ ಸಾರಥಿಯಾಗಿದ್ದನಂತೆ. ಈ