ಪುಟ:Kannada-Saahitya.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉತ್ತರ ಕುಮಾರ ವಿಚಾರ ನನಗೆ ಗೊತ್ತಿಲ್ಲ ; ಸೈರಂಧಿ ಹೇಳಿದ್ದು, ಹಿಂಜರಿಯದೆ ನಮ್ಮ ಬೃಹನ್ನಳೆಯನ್ನು ಕರಸು ' ಎಂದು ಉತ್ತರೆ ಉತ್ತರ ಕೊಟ್ಟಳು. - ಆ ಮಾತು ಕೇಳಿ ಲೇಸಾಯ್ಕೆಂದು ನುಡಿದು, ಉತ್ತರನು ಸೈರಂಧಿಯ ಕಡೆ ತಿರುಗಿದನು, ಅವಳನ್ನು ಕುರಿತು, “ ಸಾರಥಿಯನ್ನು ಕೊಟ್ಟು ನನ್ನ ನ್ನುಳಿಸಿದೆ, ನೀನು ಮಾಡಿದ್ದು ಲೇಸಾಯಿತು. ಇನ್ನು ಕೌರವನ ಕರುಳು ಬಗೆದುಬಿಡುತ್ತೇನೆ. ತಡಮಾಡದೆ ನೀನೆ ಹೋಗಿ ಪಾರ್ಥಸಾರಥಿಯನ್ನು ಕರೆದುಕೊಂಡು ಬಾ ” ಎಂದು ಪರಮೋಶಾಪದಿಂದ ನುಡಿದನು. ಆಕೆ, “ಆ ವೀರ ನನ್ನನ್ನು ಲೆಕ್ಕಿಸುವುದಿಲ್ಲ. ನಿಮ್ಮ ತಂಗಿಯನ್ನ ಕಳಿಸಿ ಕರಸಿಕೊಳ್ಳಿ ” ಎಂದಳು. ಆಗ ಉತ್ತರ ಕುಮಾರನು ತಂಗಿಗೆ, ( ಅಮಾ ನೀನೆ ಹೋಗಿ ಸಾರಥಿಯನ್ನು ಕರೆದುಕೊಂಡು ಬಾ ?? ಎಂದು ಕೇಳಿದನು. ಉತ್ತರೆ ಒಪ್ಪಿಕೊಂಡು ತನ್ನ ಗುರುವಿನೆಡೆಗೆ ನಡೆದಳು. - ಅವಳ ಬರವನ್ನು ಕಂಡು ಅರ್ಜುನನು, ಉತ್ತರೇ, ಕುಮಾರೀ ! ಇದೇನು, ರಭಸದಿಂದ ಬಂದೆ ? ಈ ರಭಸ ಯಾವುದೋ ದೊಡ್ಡ ಕಾರ್ಯ ವನ್ನು ಸೂಚಿಸುತ್ತದೆ. ಅದೇನು ? ” ಎಂದು ಕೇಳಿದನು. ರಾಜಕುಮಾರಿ * ಬೇರೆ ಏನೂ ಇಲ್ಲ. ನನ್ನ ಮಾತನ್ನು ಹುರುಳಿಲ್ಲದ್ದೆಂದು ಕಡೆಗಣಿಸದೆ ನಡಸಿ ಕೊಡುವುದಾದರೆ ಹೇಳುತ್ತೇನೆ ” ಎಂದಳು, “ಮಗಳೇ, ನಿನ್ನ ಮಾತನ್ನು ಮಾರಬಲ್ಲೆನೇ, ನಾನು ? ಎಂದು ಅರ್ಜುನ ಅವಳಿಗೆ ನಂಬುಗೆ ಹೇಳಿ ದನು, ಉತ್ತರೆ ಧೈರ್ಯಗೊಂಡು ಹೀಗೆಂದಳು : “ಹಸ್ತಿನಾಪುರದ ಅರಸುಗಳು ದಂಡೆತ್ತಿ ಬಂದರು. ಕಾವಲುಗಳಲ್ಲಿ ಮೇಯುತ್ತಿದ್ದ ಲಕ್ಷಾಂತರ , ಗೋವು ಗಳನ್ನು ಹಿಡಿದುಕೊಂಡರು. ದನಗಾವಲಿನ ಗೊಲ್ಲಪಡೆ ಕಾದಿ ಮಡಿಯಿತು. ನಮ್ಮಣ್ಣ ಕಾಳಗವಾಡಿ ತುರುಗಳನ್ನು ಬಿಡಿಸಿಕೊಂಡು ಬರುತ್ತಾನೆ. ಅವನಿಗೆ ಸಾರಥಿಯಿಲ್ಲ. ನೀವು ಆ ಅರ್ಜುನನ ಸಾರಥಿಯೆಂದು ಕೇಳಿದೆವು. 'ಇನ್ನು ಮುಂದಿನದು ನಿಮಗೆ ಗೊತ್ತು ” ಎಂದು ನುಡಿದು ಮುಖ ನೋಡುತ್ತ ನಿಂತಳು, ಆ ಕುಮಾರಿಯು ಮತು ಕೇಳಿ ಅರ್ಜುನನು, ಈ ನಡೆ ; ನಿನ್ನ ಮಾತನ್ನು ಮಾರಬಲ್ಲೆನೆ ? ಹಿಂದೆ ನಾನು ಸಾರಥಿಯಾಗಿದ್ದದ್ದು ನಿಜ. ನೋಡೋಣ ” ಎಂದು ನುಡಿಯುತ್ತ ಅವಳ ಜೊತೆಯಲ್ಲಿ ಉತ್ತರನ ಓಲಗಕ್ಕೆ ಬಂದನು.