ಪುಟ:Kannada-Saahitya.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಬೃಹನ್ನಳೆಯನ್ನು ಕಂಡು ಉತ್ತರ ಹರ್ಷಗೊಂಡನು. ಹತ್ತಿರ ಕರೆದು ಮನ್ನಣೆ ಮಾಡಿ ಕಾರ್ಯವನ್ನು ತಿಳಿಸಿದನು. * ಎಳೆ ಬೃಹನ್ನಳೇ, ನನಗೆ ಅಗ್ಗಳೆಯರೊಡನೆ ಕಾಳಗ ತೊಡಕಿಕೊಂಡಿದೆ. ನನ್ನ ಸಾರಥಿ ಸತ್ತು ಹೋದನು, ನೀನು ಸಾರಥಿಯಾಗಿ ನನ್ನನ್ನು ಜಿಸಬೇಕು. ನೀನು ಸಮರ್ಥ ; ಪಾರ್ಥನ ಸಾರಥಿ, ನೀನು ಒಲಿದು ಮೆಚ್ಚುವಂತೆ ಶತ್ರು ಸೇನೆಯೊಡನೆ ಕಾಳಗಮಾಡಿ ತೋರಿಸುತ್ತೇನೆ ಎಂದನು. ಅರಿಯದ ಹುಡುಗನಿಗೆ ವಿವೇಕವನ್ನು ಸೂಚಿಸಲೋ ಎಂಬಂತೆ ಆರ್ಜು ನನು, “ ಈಗ ನನಗೆ ಭರತ ಏದ್ಯೆಯ ಪರಿಚಯವೇನೋ ಚೆನ್ನಾಗಿದೆ. ಸಾರಥಿತನವನ್ನು ಮಾಡಿ ಎಷ್ಟೋ ಕಾಲ ಕಳೆಯಿತು. ಅದು ಮರೆತು ಹೋಗಿದೆ. ಅಲ್ಲದೆ ಈಗ ಎದುರಿಸಬೇಕಾದ ಶತ್ರುಗಳು ಸಾಮಾನ್ಯರಲ್ಲ ; ಭೀಷ್ಮ ಮೊದಲಾದವರು. ಕೈ ಮನ ಬರಡರಾದವರು ಅವರೆದುರು ನಿಲ್ಲುವುದು ಕಷ್ಟ. ರಣವೆಂಬುದು ಬರಿ ಸೂರೆಯಲ್ಲ ಎಂದು ಮರುನುಡಿದನು. ಉತ್ತರ ಸಾರಥಿಯ ಹೆದರಿಕೆಯನ್ನು ಮುಂದುಮಾಡಿ, ನಾನಿರು ವಾಗ ಭೀಷ್ಮಾದಿಗಳು ನಿನಗೇನು ಮಾಡಿಯಾರು ? ಅಳುಕಬೇಡ, ಒಂದು ನಿಮಿಷದಲ್ಲಿ ಕಾಳಗವನ್ನು ಗೆದ್ದು ಬಿಡುತ್ತೇನೆ. ನಾನು ಯಾರೆಂಬುದನ್ನು ತಿಳಿಯೆಯಲ್ಲಾ ! ನೀನು ಸಾರಥಿಯಾಗು, ಸಾಕು !' ಎಂದು ತನ್ನ ಪ್ರತಾಪ ವನ್ನು ಮೆರೆದನು. “ವೀರನಹುದು, ರಾಜಕುಮಾರಾ, ಕಿರುಹರೆಯವಲ್ಲವೆ ನಿನಗೆ ? ಎಂದು ಬೃಹನ್ನಳೆ ಸಾಧಿತನಕ್ಕೆ ಒಪ್ಪಿದನು. ಒಳ್ಳೆಯದೊಂದು ರಥವನ್ನು ತರಿಸಿ, ಲಾಯಕ್ಕೆ ಹೋf} ಉತ್ತಮಾಶ್ವಗಳನ್ನು ಆಯ್ದು ತಂದು ಹೂಡಿದನು ; ಕಲಿಪಾರ್ಥ ರಥವನ್ನೇರಿದನು, ಉತ್ತರ ಕುಮಾರನಿಗೆ ಶೃಂಗಾರಮಾಡಿ ಅಂಗನೆಯರು ಮಂಗಳಾರತಿಯೆತ್ತಿದರು, ರಾಜಕುಮಾರನು ಸರ್ವಾಂಗ ಶೃಂಗಾರದಿಂದ ಹೊಳೆಹೊಳೆಯುತ್ತ ಬಂದು ರಥವನ್ನು ಹತ್ತಿ ಹೊಂಗೆಲಸದ ಅಂಗಿಯನ್ನು ಪಾರ್ಥನಿಗೆ ಕೊಟ್ಟನು. ತಾನು ಸೀಸಳ ಕವಚಗಳನ್ನು ಅನು ಗೊಳಿಸಿಕೊಂಡು ಹೊರಡಲು ಸಿದ್ದನಾದನು, ಅರ್ಜುನ ಅಂಗಿಯನ್ನು ತಲೆಕೆಳಕಾಗಿ ತೊಟ್ಟುಕೊಳ್ಳಹೋಗಲು ಕಂಡು ದೆಂಗಸರೆಲ್ಲ ಕೈತಟ್ಟ ಚಪ್ಪಾಳೆ ಹೊಡೆಯುತ್ತ ಘಳ್ಳೆಂದು ನಕ್ಕರು,