ಪುಟ:Kannada-Saahitya.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉತ್ತರ ಕುಮಾರ ಪಾರ್ಥ ನಾಚಿದಂತೆ ತಲೆಬಾಗಿ ನಿಂತನು. ಆತನು ಮತ್ತೆ ಮೇಲ್ಮುಖವಾಗಿ ತೊಡುತ್ತಿರಲು ಉತ್ತರೆ ನಸುನಕ್ಕಳು. ಆಗ ಉತ್ತರನು, “ ಸಾರಥಿ ಅಂಯ. ತಪ್ಪೇನು ? ” ಎಂದು ನುಡಿಯುತ್ತ ತಾನೆ ಅವನಿಗೆ ಕವಚ ತೊಡಿಸಿದನು. “ ಕವಚ ತೊಡುವುದಕ್ಕೆ ಬಾರದವನು ಅವನು ಹೇಗೆ ಯುದ್ಧದಲ್ಲಿ ಸಾರಥಿತನ ಮಾಡುತ್ತಾನೋ ! ” ಎಂದು ನಾರಿಯರೆಲ್ಲ ಚಿಂತಿಸುತ್ತಿದ್ದರು. “ ನಮ್ಮಣ್ಣ ಯುದ್ದವನ್ನು ಗೆಲ್ಲುತ್ತಾನೆ. ಶತ್ರು ವೀರರ ರತ್ನಾಭರಣ ಅಲಂಕಾರಾದಿಗಳನ್ನು ನನಗಾಗಿ ತೆಗೆದುಕೊಂಡು ಬಾ, ಸಾರ ?' ಎಂದು ಉತ್ತರೆ ಗುರುವನ್ನು ಕೇಳಿಕೊಂಡಳು. ಅರ್ಜುನ ನಸುನಗುತ್ತ ಒಪ್ಪಿಗೆ ಸೂಚಿಸಿದನು. ಇಷ್ಟಾದ ಮೇಲೆ ಪಾರ್ಥ ಸಾರಥಿಯಾಗಿ ರಥ ನಡಸಿದನು. ಆ ಜವ ಗುದುರೆಗಳು ಗಾಳಿಯನ್ನೂ ಮುಂದೆ ನನ್ನು " ಹಾರಿದವು. ತೇರೋಟದ ಆ ವೇಗವನ್ನು ಕಂಡು, “ ಹೊಸ ಪರಿಯ ಸಾರಥಿ. ಇವನ ಸಂಗಡ ಬರಲು ನನಗೆ ಅಸದಳ ” ಎಂದುಕೊಂಡು, ಊರಲ್ಲಿ ಉಳಿದಿದ್ದ ಪರಿವಾರದ ದಂಡು ಹೇಳದೆ ಕೇಳದೆ ಹಿಂದೆ ನಿಂತಿತು. ತೇಲೆ ಗಾಳಿಯಿಂದೆದ್ದ ದೂಳಿನಿಂದ ದಿಕ್ಕು ಗಳನ್ನೆಲ್ಲ ಕಪಿಸುತ್ತ ಅರ್ಜುನ ಕೌರವರಾಯನ ಸೇನೆಗೆ ಎದುರಾಗಿ ನಡೆದನು. ಜಾಗೆ ಆತಿ ವೇಗದಿಂದ ರಥ ಓಡುತ್ತಿರಲು ಸ್ವಲ್ಪ ಹೊತ್ತಿನಲ್ಲಿ ಉತ್ತರ ಕುಮಾರನಿಗೆ ದೂರದಲ್ಲಿ ಕೌರವ ಸೈನ್ಯ ಸಾಗರ ಗೋಚರವಾಯಿತು. ಆನೆ ಗಳೊಡ್ಡು ದೊಡ್ಡ ದೊಡ್ಡ ಬಂಡೆಗಳ ಹಾಗೆ ನಿಂತಿದ್ದವು ; ಕುದುರೆಗಳ ಸಾಲುಗಳು ತೆರೆತೆರೆಯಾಗಿ ಕಂಗೊಳಿಸುತ್ತಿದ್ದವು; ನಡುನಡುವೆ ತೇರುಗಳ ಹೊರಳಿಗಳು ಸುಳಿಗಳನ್ನು ಹೋಲುತ್ತಿದ್ದವು; ಮೇಲೆತ್ತಿದ ಬೆಳ್ಕೊಡೆಗಳು ನೊರೆಗುಳ್ಳೆಗಳಿಗೆಣೆಯಾದವು ; ಓಡಾಡುವ ಭಟಸಮೂಹ ಜಲಚರಗಳಂ ತಿರಲು ಬಗೆಬಗೆಯ ರಣವಾದ್ಯಗಳ ಅಬ್ಬರ ಕಡಲ ಮೊರೆತದಂತೆ ಕಿವಿಯೋಲೆ ಯುತ್ತಿತ್ತು. ವಿರಾಟಕುಮಾರನ ಕಣ್ಣುಗಳಿಗೆ ವೀರರು ಝಳಪಿಸುವ ಕತ್ತಿಯ ಹೊಳಪು ಕಿಡಿಯಾಗಿಯೂ ಕಡಕುಗಳು ಕೆಚ್ಚನೆ ಉರಿಯಾಗಿಯೂ ಭಟರ ಉಗ್ಗಡದ ರೌದ್ರ ರಭಸ ಛಟಛಟ ಧ್ವನಿಯಾಗಿಯೂ ಮೇಲೆದ್ದು ಕವಿಯುವ ದೂಳು ಹೊಗೆಯ ರಾಶಿಗಳಾಗಿಯೂ ಇದನ್ನೆಲ್ಲ ಒಳಕೊಂಡ ಆ ಮಹಾಸೈನ್ಯ ದೊಡ್ಡದೊಂದು ಕಾಡುಕಿಚ್ಚಾ ಗಿಯೂ ಕಾಣಿಸಿತು. “ ಇದೇನು ಕಾಲಕೂಟದ