ಪುಟ:Kannada-Saahitya.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು - ಇತ್ತ ಆರ್ಜುನನು ಓಡುವ ಉತ್ತರವನ್ನು ಬೆಂಬತ್ತಿ, “ಹೊದೆಯಾದರೆ ನಿನ್ನ ತಲೆಯನ್ನು ಸುತ್ತಿ ಬಿಸುಡುತ್ತೇನೆ. ನಿಲ್ಲು ನಿಲ್ಲು ” ಎಂದು ಬೆದರಿ ಸಿದನು. ಉತ್ತರ ಹಿಂದಿರುಗಿ ನೋಡಿದನು. ಸಾರಥಿ ಬೆನ್ನಟ್ಟಿ ಬರುತ್ತಿರು ವುದು ಕಾಣಿಸಿತು. ಮನಸ್ಸಿನಲ್ಲಿ, * ಇವನು ಸಾರಥಿಯಲ್ಲ, ಮೃತ್ಯು, ಈ ವಾಸಿಯನ್ನು ಎಲ್ಲಿ ತಂದೆನೋ ! ” ಎಂದುಕೊಂಡು ನಿಲ್ಲದೆ ಮತ್ತೆ ಓಡ ತೊಡಗಿದನು. ಪಾರ್ಥನು ಸರಸರನೆ ನುಗ್ಗಿ ನೂರು ಹೆಜ್ಜೆಯಿಡುವಷ್ಟರಲ್ಲಿ ಅಟ್ಟ ಅವನನ್ನು ಹಿಡಿದುಬಿಟ್ಟನು, ಒಡಿದು, ಇದೇನು ಮಾಡಿದೆ ? ನೀನು ಕ್ಷತ್ರಿಯ ಕುಲದಲ್ಲಿ ಹುಟ್ಟಲಿಲ್ಲವೇ ? ಬಹು ದಿಟ್ಟತನದಿಂದ ಹೆಂಗಸರೆದುರಿನಲ್ಲಿ ಹೊಟ್ಟು ಗುಟ್ಟಿದೆಯಲ್ಲ ! ಹಗೆಗಳೆದುರಿಗೆ ಆ ದಿಟ್ಟತನವನ್ನೆಲ್ಲ ತೊರೆದು ಬಿಟ್ಟೆ, ದುರಾತ್ಮಾ , ವಿರಾಟನ ವಂಶವನ್ನು ಮುರಿದೆಯಲ್ಲೋ..!' ಎಂದು ಮೂದಲಿಸಿದನು. ತನ್ನ ಕೋಣೆಯ ಫಲಿದೆ ಸಾರಥಿಯ ಕೈಗೆ ಸಿಕ್ಕಿಬೀಳಲು ಉತ್ತರ ಭಯಭ್ರಾಂತನಾದನು. ಪಲ್ಲ, ಹಿಂದು ಬಾಯೊಳಗೆ ಬೆರಳಿಟ್ಟು ಅಳುಕಿ ತಲೆ ಬಾಗಿಸಿದನು, - ಸಾರಥಿ, ನನ್ನನ್ನು ಬಿಟ್ಟು ಕಳಿಸು. ನಾನು ಮತ್ತೆ ನಿನ್ನ ಹೊಟ್ಟೆಯಲ್ಲಿ ಹುಟ್ಟಿ ಬಂದೆನೆಂದು ತಿಳಿದುಕೊ, ಕಾಳಗದಲ್ಲಿ ಈ ಒಡ್ಡನ್ನು ಮುರಿಯುವ ಬಳ್ಮೆ ಯಾರಿಗಿದೆ ? ಅವರಿವರಿಂದ ನನ್ನನ್ನು ಕೊಲ್ಲಿಸಬೇಡ. ನೀನೆ ಇಂದು ಕೆಡವಿಬಿಡು. ಇಗೋ, ಕಳಾರಿ” ಎಂದು ಆತಿ ದೈನ್ಯದಿಂದ ಬೇಡಿಕೊಂಡನು. ಅವನ ಆ ಅವಸ್ಥೆಯನ್ನೂ ಕಿ೦ಗಚೇಷ್ಟೆಯನ್ನೂ ಕಂಡು ಅರ್ಜುನ ನಂಥ ಗಂಭೀರ ಪುರುಷನಿಗೂ ನಗು ಒತ್ತರಿಸಿ ಬಂತು. ಒಡಲೊಡೆಯು ವಂತೆ ಉಕ್ಕುವ ಆ ನಗುವನ್ನು ತಡೆದುಕೊ೦ಡು, " ಎಲವೋ, ನೀನು ಸಭೆ ಯಲ್ಲಿ ಹೆಂಗಸರ ಮುಂದೆ ಬಾಯಿಗೆ ಬಂದಂತೆ ಕರಟ, ಈಗ ಅದೇನಾ ಯಿತು ? ಶತ್ರು ಸೇನೆಯ ರಿಯದೆ ನಾಡ ನರಿಯ ಹಾಗೆ. ನನ್ನ ಮುಂದೆ ಹಲ್ಲು ಕಿರಿದರೆ ಬಿಡುವೆನೆ ? ಏಳು, ಕಾದು ಹೋಗು, ನಾಚಿಕೆಯಿರಬೇಡವೆ ನಿನಗೆ ? ವೀರರಾದವರು ಈ ರೀತಿ ಜೀವಗಳ್ಳರ ದಾರಿ ಹಿಡಿಯುತ್ತಾರೆಯೆ ? ನಾವು ನಪುಂಸಕರು : ಆದರೂ ಸಾಏಗ ದೆವೇನು, ನೋಡು ” ಎಂದು ಹಂಗಿಸಿ ದನು ; ಚುಚ್ಚಿ ನುಡಿದನು.