ಪುಟ:Kannada-Saahitya.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇತ್ತ ತವಾದ ಉತ್ತರ ಅಕ್ಷಣವೆ, ನಪುಂಸಕರು ನೀವಲ್ಲ, ನಾವು ನೀವು ವೀರರು, ನಾವು ಸಾಯುವವರಲ್ಲ ; ಬದುಕಬೇಕೆಂದಿರುವವರು, ಲೋಕದಲ್ಲಿರುವ ಜೀನ ಗಳ್ಳರಿಗೆಲ್ಲ ನಾವೇ ಗುರುಗಳು " ಎಂದು ಉತ್ತರಕೊಟ್ಟನು. 'ನಮ್ಮನ್ನು ಕಳಿಸಿಬಿಡು ” ಎಂದು ನಾಚಿಕೆ ಬಿಟ್ಟು ಕೇಳಿಕೊಂಡನು.

  • ನಿಮ್ಮ ತಂದೆ ದೊಡ್ಡ ಹೆಸರು ಪಡೆದಿರುವ ದೊರೆ. ನಿನಗೆ ಈಗ ಯುದ್ಧಮಾಡುವ ಸಮಯ ; ಒಳ್ಳೆಯ ಏರುಜವ್ವನ. ಈಗ ಹೀಗೆ ಮಾಡಿ ದರೆ ಅಪಕೀರ್ತಿ ತಪ್ಪದು. ನರಕುರಿಯೇ, ನಡೆ ಕಾಳಗಕ್ಕೆ ” ಎಂದು ನುಡಿ ಯುತ್ತ ಅರ್ಜುನ ಉತ್ಕನನ್ನು ಎಳೆದುಕೊಂಡು ಬಂದನು. ಯುದ್ಧಕ್ಕೆ ಹಿಂಜರಿದರೆ ಆಗುವ ಕೇಡನ್ನೂ ಮುನ್ನುಗಿದರೆ ದೊರೆಯುವ ಮೇಲನ್ನೂ ವಿವರಿಸಿದನು : (ಕಾಳಗಕ್ಕೆ ಬಂದು ಓಡಿಹೋದರೆ, ಹೆಜ್ಜೆಗೊಂದು ಮಹಾ ಪಾತಕ ಸುತ್ತಿಕೊಳ್ಳುತ್ತದೆ. ಮನವೊಲಿದು ಮುನ್ನುಗ್ಗಿ ಕಾದಿದರೆ ಹೆಜ್ಜೆ ಹೆಜ್ಜೆಗೂ ಒಂದೊಂದು ಅಶ್ವಮೇಧ ಯಜ್ಞದ ಫಲ ದೊರಕುತ್ತದೆ. ಕಾದಿಮದಿ ದರೆ ಆ ಶೂರನಿಗೆ ದೇವಯರು ತೊತ್ತು ಗಳಾಗುತ್ತಾರೆ; ದೇವೇಂದ್ರನೇ ಅವನ ಬಿರುದುಗಳನ್ನು ಗ್ಗಡಿಸುತ್ತಾನೆ. ಇಷ್ಟು ಮಹಿಮೆಯನ್ನು ತರುವ ವೀರ ಸ್ವರ್ಗವುಂಟಾಗುತ್ತದೆ” ಎಂದು ಆಸೆ ತೋರಿಸಿದನು.

ಉತ್ತರ ಪಾತಕಕ್ಕೆ ಹೆದರಲಿಲ್ಲ; ಸ್ವರ್ಗಭೋಗಕ್ಕೆ ಮರುಳಾಗಲಿಲ್ಲ, “ ಯುದ್ಧದಲ್ಲಿ ಓಡಿದ್ದರಿಂದ ಬಂದ ಸಾತಕವನ್ನು ಬ್ರಾಹ್ಮಣರು ಕಳೆಯು ತಾರೆ. ಅಶ್ವಮೇಧವನ್ನು ಪ್ರತ್ಯಕ್ಷವಾಗಿಯೇ ಮಾಡಬಹುದು ; ಉಪಾಯ ದಿಂದ ಅದರ ಫಲವನ್ನೇನು ಪಡೆಯಬೇಕಾಗಿಲ್ಲ. ದೇವಸ್ತ್ರೀಯರನ್ನೋಲ್ಲ. ನನಗೆ ನಮ್ಮರಮನೆಯ ನಾರಿಯರೇ ಸಾಕು, ನಮ್ಮ ದೊರೆತನವೇ ನಮಗೆ 'ಇಂದ್ರಪದವಿ, ನನ್ನನ್ನು ಬಿಟ್ಟು ಕಳಿಸು ” ಎಂದು ಅಂಗಲಾಚಿದನು.

  • ಮೈ ಕೈ ಬೆಳಸಿಕೊಂಡು ಮನೆಯಲ್ಲಿ ಸೂಳೆಯರ ಮುಂದೆ ಸಿಕ್ಕಿದಂತೆ ಪರಾಕ್ರಮದ “ಮಾತಾಡಿ ಬಂದು, ಇಲ್ಲಿ ಬಾಣವನ್ನೂ ಬಿಡದೆ ಕಾಲ ವೇಗ ತೋರಿಸಿ ಬದುಕಿ ಓಡಿಹೋದರೆ, ಆಮೇಲೆ ನಿನ್ನೊಲಗದಲ್ಲಿ ಕೂರುವುದಕ್ಕೆ ನಿನಗೆ ನಾಚಿಕೆಯಾಗುವುದಿಲ್ಲವೆ ?” ಎಂದು ಅರ್ಜುನ ಚುಚ್ಚಿ ನುಡಿದನು. ಉತ್ತರ ಅದಕ್ಕೂ ಜಗ್ಗಲಿಲ್ಲ. “ ನಾಚಿಕೆಯ ಮಾತನ್ನು ನನಗೆ ಹೇಳಬೇಡ. ಕಾಳಗ ಮಾಡಲು ನಾನಂಜುತ್ತೇನೆ. ನೀನು ನಮ್ಮ ಅನ್ನ ವುಂಡವನು.